ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛತಾ ಕಾರ್ಯವಿಲ್ಲದೇ ನಿತ್ಯ ಸಮಸ್ಯೆ’

Last Updated 22 ಜೂನ್ 2017, 7:37 IST
ಅಕ್ಷರ ಗಾತ್ರ

ಶಹಾಪುರ: ‘ಮಳೆಯ ಹೊಡೆತಕ್ಕೆ ನಗರಸಭೆಯ 23 ವಾರ್ಡ್‌ಗಳಲ್ಲಿ  ಚರಂಡಿಗಳು ಉಕ್ಕಿ ಹರಿಯುತ್ತಿವೆ. ನಗರದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲ.  ಹತ್ತು ತಿಂಗಳಿಂದ ನಗರಸಭೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಖೂಷ್ಬೂ ಗೋಯಲ್ ಚೌಧರಿ ಒಮ್ಮೆಯೂ  ಕಚೇರಿಗೆ ಬಂದಿಲ್ಲ’ ಶಹಾಪುರ ಹಿತ ರಕ್ಷಣಾ ಸಮಿತಿ ಸಂಚಾಲಕ ಮಲ್ಲಣ್ಣ ಶಿರಡ್ಡಿ ಆರೋಪಿಸಿದ್ದಾರೆ.

ನಗರಸಭೆ ಅಧ್ಯಕ್ಷರ  ಹುದ್ದೆ ಮೀಸಲಾತಿ ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ  ಪ್ರಕರಣ ಇತ್ಯರ್ಥವಾಗದೆ ವಿಚಾರಣೆ ಹಂತದಲ್ಲಿ ಇದೆ. ಇದರಿಂದ 2016 ಸೆಪ್ಟಂಬರ್ 8ರಿಂದ ಅಧ್ಯಕ್ಷರ ಹುದ್ದೆ ಖಾಲಿ ಇದ್ದು, ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಆಗಿದ್ದಾರೆ.

‘ನಗರಸಭೆಯಲ್ಲಿ ದಿನಗೂಲಿ ಮತ್ತು  ಹೊರಗುತ್ತಿಗೆ ನೌಕರರು ಸೇರಿ 61 ಸಿಬ್ಬಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ನಗರಸಭೆಯ ಜೆಸಿಬಿ ಸೇರಿದಂತೆ ವಾಹನಗಳಿವೆ. ಪ್ರತಿ ತಿಂಗಳು  ವಾಹನಕ್ಕೆ ಸಾವಿರಾರು ರೂಪಾಯಿ ಡಿಸೇಲ್ ವೆಚ್ಚ ಮಾಡುತ್ತಾರೆ. ಆದರೆ ನಗರದಲ್ಲಿ ಸ್ವಚ್ಛತೆ ಎಂಬುವುದು ಮಾಯವಾಗಿದೆ.

ಎಲ್ಲಾ ಸೌಲಭ್ಯಗಳಿದ್ದರು ಸಹ ನಿರ್ವಹಣೆ ಬರ ಇಲ್ಲ’ ಎಂದಿದ್ದಾರೆ. ‘ನಗರಸಭೆಯ ಸದಸ್ಯರು ಆಯಾ ವಾರ್ಡ್‌ಗಳ ಸಮಸ್ಯೆ ಬಗ್ಗೆ ಪೌರಾಯುಕ್ತರಿಗೆ ತಿಳಿಸುತ್ತಿಲ್ಲ. ಅಲ್ಲದೆ ಪೌರಾಯುಕ್ತರು  ಕಲಬುರ್ಗಿಯಿಂದ– ಶಹಾಪುರ ಹಾಗೂ ಯಾದಗಿರಿಗೆ ಸಭೆಗೆ ಹೋಗವುದರಲ್ಲಿ ಕಾಲಹರಣ ಆಗುತ್ತಿರುವಾಗ ಬಡಾವಣೆ ಸಮಸ್ಯೆ ಎಲ್ಲಿಂದ ಗೊತ್ತಾಗಬೇಕು’ ಎಂದು ಕುಂಬಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕುಂಬಾರ ಪ್ರಶ್ನಿಸುತ್ತಾರೆ.

‘ನಗರಸಭೆ ಆಡಳಿತ ಸಂಪುರ್ಣ  ಜಡುಗಟ್ಟಿದೆ. ನಗರಸಭೆಯ ಸಿಬ್ಬಂದಿ ಕೇವಲ ಬೀದರ–ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿಯ  ಚರಂಡಿ ಸ್ವಚ್ಛಗೊಳಿಸುತ್ತಾರೆ. ನಂತರ ಹೊರ ತೆಗೆದ  ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸುವುದಿಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗಿದೆ’ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸುತ್ತಾರೆ. ಸಾಮಾನ್ಯ ಜನತೆಯ ಮನೆಯ ಮುಂದಿನ ಹಾಗೂ  ರಸ್ತೆಯ ಬದಿಯ  ಚರಂಡಿಯನ್ನು ಸ್ವಚ್ಛಗೊಳಿಸುತ್ತಿಲ್ಲ. ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ವಿಶೇಷ ಆದ್ಯತೆ ನೀಡಬೇಕು. ನಿರ್ಲಕ್ಷ್ಯ ತೋರಬಾರದು’ಎಂದು ಬಡಾಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.

* * 

ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ಚರಂಡಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಚರಂಡಿ ಸ್ವಚ್ಛತೆಗೆ ಪ್ರತಿ ವಾರ್ಡ್‌ಗೆ  ನಾಲ್ವರು ಪೌರ ಕಾರ್ಮಿಕರನ್ನು  ನೇಮಿಸಲಾಗಿದೆ.
ಮಹಮ್ಮದ್‌ ಸಲೀಮ್‌ ಸಾಬ್
ನೈರ್ಮಲ್ಯ ಅಧಿಕಾರಿ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT