ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿಗೂ ಬಂಧನದ ಶಿಕ್ಷೆ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಮನೆಯೊಳಗೆ  ಬಂದ ಉಪದ್ರವ ನೀಡುತ್ತಿದ್ದ ಇಲಿಯನ್ನು  ಹಿಡದ ಕೋಳದಿಂದ ಬಂಧಿಸಿ, ನೇತು ಹಾಕಿ ಶಿಕ್ಷೆ ನೀಡಿದ  ವಿಲಕ್ಷಣ ಘಟನೆ ತೈವಾನ್‌ನಲ್ಲಿ ನಡೆದಿದೆ.

ಮನೆಯಲ್ಲಿ ಇರಿಸಿದ್ದ ಆಹಾರವನ್ನು ತಿನ್ನಲು ಬರುತ್ತಿದ್ದ ಇಲಿಯನ್ನು ಹಿಡಿಯಲು ಲೀ ವೀ–ಚಿನ್‌ ಹೊಂಚು ಹಾಕಿ ಕಾದಿದ್ದ. ಕಾಯುವಿಕೆಯ ಚಿತ್ರದ ಜೊತೆಗೆ ಇಲಿ ಹಿಡಿದ ಚಿತ್ರವನ್ನೂ ಟ್ವಿಟರ್‌ ಅಕೌಂಟ್‌ನಲ್ಲಿ ಪ್ರಕಟಿಸಿಕೊಳ್ಳುವ ಮೂಲಕ ‘ಸೋಷಿಯಲ್‌ ಮೀಡಿಯಾ’ ಸ್ಟಾರ್‌ ಆದ.

ಇಲಿಯ ತಲೆ ಮಾತ್ರ ಚಿತ್ರದಲ್ಲಿ ಕಾಣಿಸುತ್ತಿದೆ. ಆದರೆ ಎರಡೂ ಮುಂಗಾಲುಗಳನ್ನು ಕಟ್ಟಿಹಾಕಲಾಗಿದೆ.

ಈ ಚಿತ್ರಕ್ಕೆ ಟ್ವಿಟಿಗರು ಅಕ್ರೋಶ ವ್ಯಕ್ತಪಡಿಸಿದ್ದು, ‘ಇಲಿಯನ್ನು ಸಾಯಿಸಿ ಇಲ್ಲವೇ ಬಿಟ್ಟುಬಿಡಿ’ ಎಂದು ಒತ್ತಾಯಿಸಿದ್ದಾರೆ. ಅಂದಹಾಗೆ ಇಲಿಯನ್ನು ಕೊಲ್ಲಲು ಮನಸು ಬಾರದೆ ಲೀ ವೀ–ಚಿನ್‌ ಅದಕ್ಕೆ ಸ್ವಾತಂತ್ರ್ಯ ಕೊಟ್ಟು ದೊಡ್ಡ ಮನುಷ್ಯನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT