ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪಾತ್ರದಲ್ಲಿ ಅಕ್ಷಯ್‌

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಇನ್ನೂ ಸೆಟ್ಟೇರದ ಚಿತ್ರವೊಂದರಲ್ಲಿ ನಟ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಗುಲ್ಲು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಮೋದಿ ಪಾತ್ರಕ್ಕೆ ಪರೇಶ್ ರಾವಲ್, ಅನುಪಮ್ ಖೇರ್ ಹಾಗೂ ವಿಕ್ಟರ್ ಬ್ಯಾನರ್ಜಿ ಅವರ ಹೆಸರು ಈ ಹಿಂದೆ ಕೇಳಿ ಬರುತ್ತಿತ್ತು. ಆದರೆ ಅಕ್ಷಯ್‌ಕುಮಾರ್ ಹೆಸರು ತೇಲಿ ಬಂದ ನಂತರ ಇವರ ಹೆಸರುಗಳು ನೇಪಥ್ಯಕ್ಕೆ ಸರಿದಿವೆ.

ಬಿಜೆಪಿ ಸಹ ಅಕ್ಷಯ್‌ಕುಮಾರ್ ಬೆಂಬಲಕ್ಕೆ ನಿಂತಿದ್ದು, ‘ಅಕ್ಷಯ್ ಕುಮಾರ್ ಅವರ ಪ್ರಭಾವ  ಹಾಗೂ ಜನಪ್ರಿಯತೆ. ನರೇಂದ್ರ ಮೋದಿಯವರ ಕಥೆಯನ್ನು ಬಹಳಷ್ಷು ಜನರನ್ನು ತಲುಪುವಂತೆ ಮಾಡುತ್ತದೆ' ಎನ್ನುವುದು ಆ ಪಕ್ಷದ ವಿಶ್ವಾಸ.

‘ಮೋದಿ ಪಾತ್ರ ನಿರ್ವಹಿಸಲು ಅಕ್ಷಯ ಕುಮಾರ್ ಸಮರ್ಥ ವ್ಯಕ್ತಿ. ಮಿಸ್ಟರ್ ಕ್ಲೀನ್ ಎನಿಸಿಕೊಂಡಿರುವ ಅವರು ಯಾವುದೇ ಪಾತ್ರಕ್ಕೆ ಜೀವ ತುಂಬಬಲ್ಲರು' ಎಂದು ನಟ ಹಾಗೂ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಸಮಾಜ ಸುಧಾರಣೆಯ ಆಶಯ ಹೊಂದಿರುವ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ದಂಥ ಚಿತ್ರದಲ್ಲಿ ನಟಿಸಿರುವ ಅಕ್ಷಯ್‌ ಮೋದಿ ಪಾತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎನ್ನುವುದು ಕಾಲವೇ ಉತ್ತರಿಸಬೇಕಾದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT