ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಮಗಿರಿಯ ಸಂಕೇತ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ ‘ರಾಣಿ’ಯ ಉದಾಹರಣೆ ಕೊಡುವ ಮೂಲಕ ಉಡುಪಿ ಅನಂತೇಶ ರಾವ್‌ ಅವರು ರಾಜ ಪರಂಪರೆಯನ್ನು ಉಳಿಸುವ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ (ವಾ.ವಾ. ಜೂನ್‌ 21).

ಯಾವುದೇ ರಾಜಾಡಳಿತ ಪ್ರಶ್ನಾತೀತವಾಗಿ ಆಡಳಿತ ನಡೆಸಿದ ಉದಾಹರಣೆ ಎಲ್ಲೂ ಇಲ್ಲ. ಹಾಗೆಂದ ಮಾತ್ರಕ್ಕೆ ಯಾವ ರಾಜರೂ ಜನರ ಸಂಕಷ್ಟಗಳಿಗೆ ಸ್ಪಂದಿಸಿಯೇ ಇಲ್ಲ ಎಂದರ್ಥವಲ್ಲ. ಆದರೆ ರಾಜಾಡಳಿತದಿಂದ ಜನರಿಗೆ ಆದ ಉಪಯೋಗ ಕಡಿಮೆಯೇ.  ಉದಾಹರಣೆಗೆ ನಮ್ಮ ದೇಶದಲ್ಲಿ ಅಥವಾ ಮೈಸೂರು ರಾಜರ ಆಡಳಿತದಲ್ಲಿ ಇದ್ದ ಶೈಕ್ಷಣಿಕ ಮಟ್ಟ ಹಾಗೂ ಪ್ರಜಾಪ್ರಭುತ್ವದ ಶೈಕ್ಷಣಿಕ ಮಟ್ಟವನ್ನು ತೂಗಿ ನೋಡಬಹುದು. ಈ ಕಾರಣಗಳಿಂದಾಗೆ ಭಾರತವೂ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳು ರಾಜಾಡಳಿತದಿಂದ ಮುಕ್ತವಾಗಿ ಪ್ರಜಾಪ್ರಭುತ್ವ ಅಥವಾ ಚುನಾವಣಾ ಕ್ರಮವನ್ನು ಜಾರಿಗೆ ತಂದವು.

ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿಯನ್ನು ಅಲ್ಲದೆ ರಾಜರನ್ನು ತಂದು ಕೂರಿಸಲಾದೀತೇ? ಅದು ಗುಲಾಮಗಿರಿಯ ಸಂಕೇತ ಅಲ್ಲವೆ?  ಮಾಧ್ಯಮಗಳು ಒಂದು ನಾಡಿನ ಆಡಳಿತಕ್ಕೆ ಸಂಬಂಧಿಸದ ವ್ಯಕ್ತಿಗಳನ್ನು ‘ರಾಜರು’, ‘ಮಹಾರಾಜರು’, ‘ರಾಜಮಾತೆ’ ಎಂದು ಕರೆದು ಮಕ್ಕಳ ದಾರಿ ತಪ್ಪಿಸುವ ಕೆಲಸವನ್ನು ಪ್ರಶ್ನಿಸಿದ ಪ್ರೊ. ಕೆ.ಸಿ. ತಿಮ್ಮಪ್ಪ ಅವರ ವಾದ ಸರಿಯಾಗಿದೆ.
-ಪ್ರವೀಣ್ ಸೂಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT