ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಬುದ್ಧಿಹೇಳಿ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಪ್ರಪಂಚದ ಜನಸಂಖ್ಯೆಯಲ್ಲಿ ಕೇವಲ ಶೇ 5ರಷ್ಟು ಇದ್ದರೂ, ತಮ್ಮ ಐಷಾರಾಮಕ್ಕಾಗಿ ಪರಿಸರ ನಾಶಮಾಡಿ, ಭೂಮಿಯ ತಾಪಮಾನ ಏರಿಕೆಗೂ ಕಾರಣವಾಗಿರುವ ಅಮೆರಿಕ ಈಗ ಪ್ಯಾರಿಸ್ ಒಪ್ಪಂದದಿಂದ ಹೊರನಡೆದಿರುವುದು ಅನುಚಿತ ಹಾಗೂ ಅನಪೇಕ್ಷಣೀಯ.

ಈ ತೀರ್ಮಾನ ಅಮೆರಿಕದ ಉದ್ಧಟತನವನ್ನು ಪ್ರದರ್ಶಿಸುತ್ತದೆ. ಭೂಮಿಯ ತಾಪಮಾನ ಏರಿಕೆಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ತಡೆಯದಿದ್ದರೆ ಅಮೆರಿಕವೂ ಸೇರಿದಂತೆ ಎಲ್ಲಾ ದೇಶಗಳು ವಿನಾಶದತ್ತ ಸಾಗುವುದು ಖಚಿತ. ವಿಶ್ವದ ಪ್ರಬಲ ರಾಷ್ಟ್ರಗಳು ಹೆಚ್ಚು ಮುತುವರ್ಜಿವಹಿಸಿ ಪರಿಸರ ಸಂರಕ್ಷಣೆ ಬಗ್ಗೆ ಅಮೆರಿಕಕ್ಕೆ ತಿಳಿವಳಿಕೆ ನೀಡಬೇಕು.
-ಬೇ.ನ. ಶ್ರೀನಿವಾಸಮೂರ್ತಿ, ತುಮಕೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT