ಮಣಿಪುರದ 23 ವರ್ಷದ ದೇವೆಂದ್ರೊ ಜನವರಿಯಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಅದರ ನಂತರ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿ ಮತ್ತು ಥಾಯ್ಲೆಂಡ್‌ನಲ್ಲಿ ನಡೆದಿದ್ದ ಕಿಂಗ್ಸ್ ಕಪ್ ಟೂರ್ನಿಗಳಲ್ಲಿಯೂ ಸೋತಿದ್ದರು. ಆದರೆ, ಇಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತ ಪಡಿಸಿಕೊಂಡಿದ್ದಾರೆ. ತಮ್ಮ ಎದುರಾಳಿಯ ಮೇಲೆ ಮಿಂಚಿನ ವೇಗದಲ್ಲಿ ಮುಷ್ಟಿಪ್ರಹಾರ ಮಾಡಿದ ಅವರು ಗೆಲುವು ಸಾಧಿಸಿದರು. ಇನ್ನುಳಿದ ಪಂದ್ಯಗಳಲ್ಲಿ; ಭಾರತದ ರೋಹಿತ್ ತೊಕಾಸ್ ಅವರು 64 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಚಿನ್‌ಜೊರಿಗ್ ಬಾತರ್‌ಸುಕ್ ವಿರುದ್ಧ ಸೋಲನುಭವಿಸಿದರು.