ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಕೆ!

Last Updated 23 ಜೂನ್ 2017, 10:24 IST
ಅಕ್ಷರ ಗಾತ್ರ

ತರೀಕೆರೆ: ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜು ಮೂಲ ಸೌಲಭ್ಯಗಳಿ ಲ್ಲದೇ ಸೊರಗುತ್ತಿದೆ. ಕಾಲೇಜು ಕಟ್ಟಡ ಶಿಥಿಲಾವಸ್ಥೆ ಯಲ್ಲಿದ್ದು,  ಅಪಾಯಕ್ಕೆ ಆಹ್ವಾನಿಸುತ್ತಿದೆ. ಈ ಮಧ್ಯೆ ಕಾರಿಡಾರಿನಲ್ಲಿ ಕಳ್ಳಿ, ಗಿಡ-ಗಂಟಿಗಳು ದಟ್ಟವಾಗಿ ಬೆಳೆದು ನಿಂತಿವೆ. ಪೋಷಕರ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಈ ಕಾಲೇಜನ್ನು ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂಬುದು ಸ್ಥಳೀಯರ ದೂರು.

2016ರಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಈ ಕಾಲೇಜಿಗೆ ಶೇ 58ರಷ್ಟು ಫಲಿತಾಂಶ ಬಂದಿತ್ತು. ಆದರೆ, ಈ ಬಾರಿ ಕೇವಲ ಶೇ40 ಫಲಿತಾಂಶ ದಾಖಲಿಸಿ, ಶೇ18ರಷ್ಟು ಕುಸಿತ ಕಂಡಿದೆ. ಹಿಂದಿನ ವರ್ಷ 316 ದಾಖಲಾತಿ ಇತ್ತು. ಆದರೆ, ಈ ಬಾರಿ ಅದು 200ಕ್ಕೆ ಇಳಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ಇನ್ನು ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುವ ಆತಂಕವಿದೆ.

1948ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿಯು ವಿಭಾಗಕ್ಕೆ ಶಿಕ್ಷಣ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ 1997ರಲ್ಲಿ ಹೊಸ ಕಟ್ಟಡಕ್ಕೆ ಪಿಯು ಕಾಲೇಜು ಸ್ಥಳಾಂತರವಾಯಿತು.

ಆದರೆ, 20 ವರ್ಷ ಪೂರ್ಣವಾಗುವ ಮೊದಲೇ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಇಲಿ ಹೆಗ್ಗಣಗಳ ಗೂಡಾಗಿರುವ ಕೊಠಡಿಗಳಲ್ಲಿ ಬಿರುಕುಬಿಟ್ಟ ಗೋಡೆಗಳು, ಸೋರುವ ಮೇಲ್ಚಾವಣಿ, ಮಳೆ ಸುರಿದರೆ ಗೋಡೆ ಗಳ ಮೇಲೆ ಬೀಳುವ ನೀರನ್ನು ದಿಟ್ಟಿಸು ತ್ತಲೇ ವಿದ್ಯಾರ್ಥಿಗಳು ಪಾಠ ಕೇಳ ಬೇಕಿ ದೆ. ಅಲ್ಲದೆ, ಮೇಲ್ಚಾವಣಿ ಕುಸಿಯುವ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತದೆ.

2008-2009ರಲ್ಲಿ ನಬಾರ್ಡ್ ಹಾಗೂ ಆರ್.ಐ.ಡಿ.ಎಫ್. ಯೋಜನೆ ಯಡಿ ನಿರ್ಮಿಸಲಾಗಿರುವ ಎರಡು ಕೊಠಡಿಗಳು ಕಳಪೆ ಕಾಮಗಾರಿ ಯಿಂದಾಗಿ ಮಳೆಗಾಲದಲ್ಲಿ ನೀರು ಸದಾ ಜಿನುಗುತ್ತಿರುತ್ತದೆ. ‘ಸಂಪ್ ವ್ಯವಸ್ಥೆ ಹದಗೆಟ್ಟು ನೀರು ತರಗತಿಗಳ ಮುಂದಿರುವ ಗುಂಡಿಗಳಲ್ಲಿ ಸದಾ ನಿಂತಿರುತ್ತದೆ. ಸ್ವಚ್ಛತೆಯ ಪಾಠ ಹೇಳಬೇಕಾಗಿರುವ ಶಿಕ್ಷಣ ವ್ಯವಸ್ಥೆ ರೋಗಮಾಲಿನ್ಯವನ್ನು ಸೃಷ್ಟಿಸುವಂತಿದೆ’ ಎಂಬುದು ಇಲ್ಲಿನ ವಿದ್ಯಾರ್ಥಿಗಳ ದೂರು.

ವಾಣಿಜ್ಯ ಶಾಸ್ತ್ರ, ಭೌತಶಾಸ್ತ್ರ ಉಪ ನ್ಯಾಸಕ, ದೈಹಿಕ ಶಿಕ್ಷಕ ಶಿಕ್ಷಕ, ಗ್ರಂಥ ಪಾಲಕ, ಪ್ರಯೋಗಾಲಯ ಸಹಾಯಕ, ಗ್ರೂಪ್ ಡಿ ದರ್ಜೆಯ ಹುದ್ದೆಗಳು ಖಾಲಿ ಇದೆ. ಇಲ್ಲಿದ್ದ ಇಬ್ಬರು ಉಪನ್ಯಾಸಕರು ಪದವಿ ಕಾಲೇಜಿಗೆ ನೇಮಕಗೊಂಡಿ  ದ್ದರಿಂದ   ಅವೆರಡು ಹುದ್ದೆಗಳು ಮುಂದೆ ಖಾಲಿಯಾಗಲಿವೆ.

ಉರ್ದು ಭಾಷಾ ಶಿಕ್ಷಕರ ಹುದ್ದೆ ಹಲವು ವರ್ಷಗಳಿಂದ ಖಾಲಿ ಇರುವುದರಿಂದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಏಕಲವ್ಯ ಶಿಕ್ಷಣದ ಮಾದರಿಯಲ್ಲಿ ತಮಗೆ ತಾವೇ ಪಾಠ ಮಾಡಿಕೊಳ್ಳುತ್ತಿದ್ದಾರೆ.ಇದೇ ಪರಿಸ್ಥಿತಿ ಮುಂದುವರಿದರೆ ಈ ಕಾಲೇಜನ್ನು ಮುಚ್ಚುವ ದಿನ ದೂರವಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಗಮನ ಹರಿಸು ವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT