ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಜಿಲ್ಲೆಗಳಲ್ಲಿ ಪ್ರತ್ಯೇಕ ಮರಳು ನೀತಿ

Last Updated 23 ಜೂನ್ 2017, 10:37 IST
ಅಕ್ಷರ ಗಾತ್ರ

ಉಡುಪಿ: ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ತರುವಂತೆ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಮೊದಲಿಗೆ ವಿಷಯ ಪ್ರಸ್ತಾಪಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು, ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳಿನ ಅಭಾವದಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಕುಠಿತವಾಗುತ್ತಿದೆ.

ಹೀಗೆ ಮುಂದುವರೆದರೆ ಮರಳಿನ ಕೊರತೆಯಿಂದ ಜಿಲ್ಲೆ ತತ್ತರಿಸಿ ಹೋಗಲಿದೆ.ಶಾಸಕರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಜತೆ ಮಾತುಕತೆ ನಡೆಸಿ, ಮರಳಿನ ಸಮಸ್ಯೆ  ಬಗ್ಗೆ ಮುಖ್ಯಮಂತ್ರಿ ಅವರನ್ನು  ಭೇಟಿ ಮಾಡಿ ತಿಳಿಸಬೇಕಾಗಿದೆ ಎಂದರು.

ಕೊಕ್ಕರ್ಣೆಯಲ್ಲಿ ₹1.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ  ಕಿಂಡಿ ಅಣೆಕಟ್ಟೆ ಸಂಪೂರ್ಣ ಕಾಳಪೆ ಕಾಮಾ ಗಾರಿಯಿಂದ ಕೂಡಿದೆ. ಗುಣಮಟ್ಟ ಪರೀಕ್ಷಿಸದ  ಅಣೆಕಟ್ಟೆ ನಿರ್ಮಾಣದ ಮೇಲ್ವಿಚಾರಣೆ ನಡೆಸಿದ ಎಂಜಿನಿಯರ್ ಮತ್ತು ಗುತ್ತಿಗೆದಾರರ  ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಒಮ್ಮತದಿಂದ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೇವೆ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಇನ್ನಷ್ಟು ಪರ್ಮಿಟ್ ನೀಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತ್ತು. ಜಿಲ್ಲೆಯಲ್ಲಿ  ಕೆಎಸ್‌ಆರ್‌ಟಿಸಿ ಸೇವೆ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆ ತಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಬಸ್‌ಗಳ ಸೇವೆ ಕೆ ಎಸ್ ಆರ್ ಟಿಸಿ ಅಧ್ಯಕ್ಷರ ಮಾರ್ಗದರ್ಶ ನದಲ್ಲಿ ಇನ್ನಷ್ಟು ದೊರೆಯಲಿ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತವಾಯಿತು.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಪ್ರಸಕ್ತ ವರ್ಷದಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಅನೇಕ ಮನೆಗಳು ಅರ್ಧಕ್ಕೆ ನಿಂತು ಹೋಗಿದ್ದು, ಫಲಾನುಭವಿಗಳು  ಜಿ.ಪಿ.ಎಸ್‌ ಮಾಡಿ ಹಣ ಹಾಕಿದರೂ ಕೂಡ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ತೋನ್ಸೆ ಸಭೆ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿ ಯಿಸಿದ ರಾಜೀವ್ ಗಾಂಧಿ ಯೋಜನಾ ನಿರ್ದೇಶಕಿ  ಈಗಾಗಲೇ  ಕೆಲವೊಂದು ಪಂಚಾಯಿತಿ ವ್ಯಾಪ್ತಿಗೆ ಬರುವ ಫಲಾನು ಭವಿಗಳಿಗೆ ಹಣ ಬಿಡುಗಡೆ ಮಾಡಲಾ ಗಿದೆ. ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗ ಳಿಗೆ ಜೊಡಣೆಯಾಗದೆ ಇರುವುದರಿಂದ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಈಗಿರುವ 1.5 ಮತ್ತು 1.6  ಆವೃತ್ತಿಯಡಿ  ಜಿಪಿಎಸ್ ಮೂಲಕ ದಾಖಲಿಸಲು ವಸತಿ ನಿಗಮದಿಂದ ಸೂಚನೆ ಬಂದಿದೆ ಎಂದು ಅಧಿಕಾರಿಗಳು ಸಭೆಯಲ್ಲಿ  ಉತ್ತರಿಸಿದರು.

ವಾರಹಿ ಎಡದಂಡೆ ನಾಲಾ ಸರಪಳಿ ಕಾಲುವೆ ನೀರು ಹರಿದ ಪರಿಣಾಮವಾಗಿ ಕೃಷಿ ಭೂಮಿಯಲ್ಲಿ ಶೇಖರಣೆಯಾಗಿರುವ ಹೂಳು ತುಂಬಿದ್ದು ಇದಕ್ಕೆ ಪರಿಹಾರ ಕೊಡುವವರು ಯಾರು ಎಂದು  ಜಿಲ್ಲಾ ಪಂಚಾಯಿತಿ ಸದಸ್ಯೆ ಸುಪ್ರೀತ್ ಪ್ರಶ್ನಿಸಿ ದ್ದರು. ಇದಕ್ಕೆ ಉತ್ತರಿಸಿ ಇಲಾಖೆ ಅಧಿಕಾರಿ ಬೆಳೆಗೆ ಈಗಾಗಲೇ ₹24,864 ಪರಿಹಾರ ಧನವನ್ನು ಕಂದಾಯ ಇಲಾಖೆ ನೀಡಿದೆ. ಆದರೆ ಜಮೀನಿನಲ್ಲಿ ಶೇಖರಣೆಯಾ ಗಿರುವ ಮಣ್ಣನ್ನು ತೆಗೆಯುವುದಕ್ಕೆ ಪರಿಹಾರ ನೀಡಲು ಇಲಾಖೆಯಿಂದ ಯಾವುದೇ ಪ್ರಾಧ್ಯಾನ್ಯತೆ ಇಲ್ಲ ಎಂದು ತಿಳಿಸಿದ್ದರು.

ವಾರಾಹಿ ಯೋಜನೆಯಡಿ ಸಂತ್ರಸ್ತ ರಾದವರಿಗೆ ಪರಿಹಾರ ನೀಡುವ ಬಗ್ಗೆಯೂ ಸೂಕ್ತ ಕ್ರಮವಹಿಸು ವಂತೆಯೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆಗ್ರಹಿಸಿದರು.
ಕಾಡು ಪ್ರಾಣಿಗಳ ಕಿರುಕುಳ, ಪರಿಹಾ ರದ ಬಗ್ಗೆಯೂ ಸಭೆಯಲ್ಲಿ ಚರ್ಚಿಸ ಲಾಗಿ, ಕಾಡುಪ್ರಾಣಿಗಳ ಹಾವಳಿಗೆ ಪರಿಹಾರ ನೀಡಲು ಅರಣ್ಯ ಇಲಾಖೆ ಯನ್ನು ಸಂಪರ್ಕಿಸಲು ಅವಕಾಶವಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಶಿಥಿಲಾವಸ್ಥೆಯಲ್ಲಿರುವ 11 ಶಾಲೆಗ ಳನ್ನು ಗುರುತಿಸಿ ಅಂದಾಜು ಪಟ್ಟಿಯನ್ನು  ತಯಾರಿಸಲು ನೀಡಲಾಗಿದೆ ಎಂದು ವಿದ್ಯಾಂಗ ಉಪನಿರ್ದೇಶಕರು ಮಾಹಿತಿ ನೀಡಿದರು. ಗೋಪಾಡಿ ಎ ಎನ್ ಎಂ ಸಮಸ್ಯೆ, ಕುಂದಾಪುರ ಆಸ್ಪತ್ರೆ ಸಮಸ್ಯೆ ಗಳು ಸಭೆಯಲ್ಲಿಂದು  ಚರ್ಚೆಗೆ ಬಂದವು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಕೆ.ಶೀಲಾ ಶೆಟ್ಟಿ,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತ ಪಡುಬಿದ್ರಿ  ಇದ್ದರು.

* * 

ಕೊಕ್ಕರ್ಣೆ ವ್ಯಾಪ್ತಿಯ ಕಿಂಡಿ ಅಣೆಕಟ್ಟು ಕಳಪೆ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆಗೆ ಆದೇಶ.
ಪ್ರಿಯಾಂಕ ಮೇರಿ ಫ್ರಾನ್ಸಿಸ್
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT