ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣ್ಣೆ ಹಣ್ಣಿನ ತಣ್ಣನೆಯ ಅಡುಗೆ

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಜೊತೆಗೆ ಚರ್ಮದ ಹೊಳಪು ಕೂಡ ಹೆಚ್ಚುತ್ತದೆಯಂತೆ. ಅಷ್ಟೇ ಅಲ್ಲದೆ, ಈ  ಹಣ್ಣಿನಲ್ಲಿ ಮಿಟಮಿನ್ ಅಂಶ ಅಧಿಕವಾಗಿದೆ. ಬೆಣ್ಣೆಹಣ್ಣಿನಿಂದ ಜ್ಯೂಸ್, ಮಿಲ್ಕಶೇಕ್, ಐಸ್‌ಕ್ರೀಂ ಮೊದಲಾದ ತಿನಿಸುಗಳನ್ನು ತಯಾರಿಸುವ ಬಗೆಯನ್ನು ವಿವರಿಸಿದ್ದಾರೆ, ಸಹನಾ ಕಾಂತಬೈಲು.

ಬೆಣ್ಣೆಹಣ್ಣಿನ ಮೊಸರುಗೊಜ್ಜು
ಬೇಕಾಗುವ ಸಾಮಗ್ರಿಗಳು: 
ಬೆಣ್ಣೆಹಣ್ಣು –1, ಹಸಿಮೆಣಸು – 2, ಮೊಸರು – 1 ಕಪ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ, ಈರುಳ್ಳಿ– 1/2, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಬೆಣ್ಣೆಹಣ್ಣಿನ ತಿರುಳು ತೆಗೆದು ಚೆನ್ನಾಗಿ ಕಿವುಚಿ. ಈರುಳ್ಳಿ, ಹಸಿಮೆಣಸುಗಳನ್ನು ಹೆಚ್ಚಿ ಹಾಕಿ. ಮೊಸರನ್ನು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಒಗ್ಗರಣೆಯನ್ನು ಕೊಡಿ. ಬೆಣ್ಣೆಹಣ್ಣು ಪೌಷ್ಟಿಕಾಂಶಗಳಿಂದ ಕೂಡಿದ್ದು ಗರ್ಭಿಣಿಯರಿಗೆ ತುಂಬ ಒಳ್ಳೆಯದು.

*


ಬೆಣ್ಣೆಹಣ್ಣಿನ ಮಿಲ್ಕ್‌ಶೇಕ್
ಬೇಕಾಗುವ ಸಾಮಗ್ರಿಗಳು: ಬೆಣ್ಣೆ ಹಣ್ಣಿನ ತಿರುಳು –1 ಕಪ್‌, ಹಾಲು – 1 ಕಪ್‌, ನೀರು – 1 ಕಪ್‌, ಸಕ್ಕರೆ – 4 ಚಮಚ

ತಯಾರಿಸುವ ವಿಧಾನ
ಬೆಣ್ಣೆಹಣ್ಣಿನ ತಿರುಳು, ನೀರು, ಹಾಲು, ಸಕ್ಕರೆ – ಇಷ್ಟನ್ನು ಮಿಕ್ಸಿಯಲ್ಲಿ ಹಾಕಿ ತಿರುವಿ. ಈಗ ಸವಿಯಾದ ಬೆಣ್ಣೆಹಣ್ಣಿನ ಮಿಲ್ಕ್‌ಶೇಕ್ ಸಿದ್ಧ. ಬೇಕಿದ್ದರೆ ಐಸ್‌ ಅನ್ನು ಸೇರಿಸಬಹುದು.

*


ಬೆಣ್ಣೆಹಣ್ಣಿನ ಸಲಾಡ್
ಬೇಕಾಗುವ ಸಾಮಗ್ರಿಗಳು:
ಬೆಣ್ಣೆಹಣ್ಣಿನ ತಿರುಳು – 1/2 ಕಪ್, ಸ್ವೀಟ್‌ಕಾರ್ನ್ – 1 ಕಪ್, ಕ್ಯಾರೆಟ್ ತುರಿ –1 ಕಪ್, ಮೊಳಕೆ ಬರಿಸಿದ ಹೆಸರುಕಾಳು –1/2 ಕಪ್, ತೆಂಗಿನತುರಿ – 6 ಚಮಚ, ಹಸಿಮೆಣಸು – 2, ಲಿಂಬೆರಸ–  2 ಚಮಚ, ಕೊತ್ತಂಬರಿ ಸೊಪ್ಪು – 2 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆಹಣ್ಣಿನ ತಿರುಳಿನ ಜೊತೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಅನಂತರ ಸಾಸಿವೆಯ ಒಗ್ಗರಣೆಯನ್ನು ನೀಡಿ, ಬಳಿಕ ಬಡಿಸಿ; ಊಟಕ್ಕೆ ಚೆನ್ನಾಗಿರುತ್ತದೆ.

*


ಬೆಣ್ಣೆಹಣ್ಣಿನ ಐಸ್‌ಕ್ರೀಂ
ಬೇಕಾಗುವ ಸಾಮಗ್ರಿಗಳು:
ಹಾಲು –1ಲೀ, ಸಕ್ಕರೆ – 1 ಕಪ್‌, ಬೆಣ್ಣೆ ಹಣ್ಣು – 1, ಏಲಕ್ಕಿ ಪುಡಿ – 1/4 ಚಮಚ.

ತಯಾರಿಸುವ ವಿಧಾನ: ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ, ಸಕ್ಕರೆ ಮತ್ತು ಏಲಕ್ಕಿಪುಡಿಯನ್ನು ಹಾಕಿ ಚೆನ್ನಾಗಿ ಕದಡಿ. ಫ್ರಿಜ್ಡ್‌ನ ಫ್ರೀಜರ್‌ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹಳ ರುಚಿಯಾಗಿರುವ ಈ ಐಸ್‌ಕ್ರೀಂ ಅನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ.

*


ಸಹನಾ ಕಾಂತಬೈಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT