ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿವಾಡ ಮುಂದೆ ಕೈಕಟ್ಟಿ ನಿಲ್ಲಲ್ಲ: ರವಿ ಬೆಳಗೆರೆ

ಸದನ ಸಮಿತಿ ಶಿಫಾರಸಿಗೆ ಪ್ರತಿಕ್ರಿಯೆ
Last Updated 24 ಜೂನ್ 2017, 9:59 IST
ಅಕ್ಷರ ಗಾತ್ರ
ADVERTISEMENT

ಧಾರವಾಡ: ‘ನಾನು ಕೋಳಿವಾಡರಂತೆ ದಡ್ಡ, ಮೂರ್ಖ ಅಲ್ಲ. ಅವರು ಬೇಕಾದ್ದು ಮಾಡಲಿ. ಹೋರಾಟ ಮಾಡದೆ ಕೈಕಟ್ಟಿಕೊಂಡು ನಿಂತು ಅವರಿಗೆ ಶರಣಾಗುವಂತಹ ಪರಿಸ್ಥಿತಿ ನನಗಿಲ್ಲ. ಅಂತಹ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ...’

– ಶಾಸಕರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ದೂರಿಗೆ ಸಂಬಂಧಿಸಿದಂತೆ ಹಕ್ಕು ಬಾಧ್ಯತಾ ಸಮಿತಿಯು 1 ವರ್ಷ ಜೈಲು ಮತ್ತು ₹ 10 ಸಾವಿರ ದಂಡಕ್ಕೆ ಶಿಫಾರಸು ಮಾಡಿರುವುದಕ್ಕೆ ‘ಹಾಯ್ ಬೆಂಗಳೂರ್’ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರ ಪ್ರತಿಕ್ರಿಯೆ ಇದು.

ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಾಗಿರುವ ರವಿ ಬೆಳಗೆರೆ, ‘ಸದನ ಸಮಿತಿ ತೀರ್ಪಿನ ವಿರುದ್ಧ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ವರೆಗೂ ಹೋಗುವೆ’ ಎಂದಿದ್ದಾರೆ.

ಹೇಳಿಕೆಯ ಪೂರ್ಣಪಾಠ:
‘ನಮಸ್ಕಾರ. ನಾನು ರವಿ ಬೆಳಗೆರೆ. ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕ. ಲೇಖಕ, ಕಾದಂಬರಿಕಾರ ಮತ್ತು ಬೆಂಗಳೂರಿನಲ್ಲಿ ಒಂದು ಅದ್ಭುತವಾದ ಶಾಲೆ ನಡೆಸ್ತಿದ್ದೀನಿ. ನನಗೆ 1 ವರ್ಷ ಜೈಲು, ₹ 10 ಸಾವಿರ ದಂಡ ಅಂತ ಈ ಸದನ ಸಮಿತಿ ತೀರ್ಪು ನೀಡಿದೆ. ಅದರ ವಿರುದ್ಧ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ವರೆಗೂ ಹೋಗಿ ನಾನು ಬಡಿದಾಡ್ತೀನಿ. ಈ ಸರ್ಕಾರಕ್ಕೆ ಇನ್ನು ಒಂದು ವರ್ಷ ಇದೆ ಚುನಾವಣೆಗೆ. ಇವರ ಜೀವನ ಮುಗೀತು ಇನ್ನು. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ. ಯಾವುದೇ ವಿಚಾರಕ್ಕೆ ನನ್ನನ್ನು ಯಾಕೆ ಜವಾಬ್ದಾರನನ್ನಾಗಿ ಮಾಡ್ತೀರಿ. ಇದು ಬಹಳ ದಮನಕಾರಿ ಆಕ್ರಮಣ. ನಾನು ಇದನ್ನು ವಿರೋಧಿಸುತ್ತೇನೆ. ಈ ವ್ಯವಸ್ಥೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ನಾನು ಕೈ ಕಾಲು ಇಲ್ಲದವನಲ್ಲ. ನಾನು ಕೋಳಿವಾಡರಂತೆ ದಡ್ಡ, ಮೂರ್ಖ ಅಲ್ಲ. ಅವರು ಬೇಕಾದ್ದು ಮಾಡಲಿ. ಹೋರಾಟ ಮಾಡದೆ ಕೈಕಟ್ಟಿಕೊಂಡು ನಿಂತು ಅವರಿಗೆ ಶರಣಾಗುವಂತಹ ಪರಿಸ್ಥಿತಿ ನನಗಿಲ್ಲ. ಅಂತಹ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ. ಕಾಂಗ್ರೆಸ್‌ನ ನಾಗರಾಜ್‌ ಅವರನ್ನು ನಾನು ನೋಡಿಲ್ಲ. ಶುಕ್ರವಾರ ಅವರು ಫೋನ್‌ಗೆ ಸಿಕ್ಕಿದ್ದರು. ಅವರದ್ದೇನೋ ಯಲಹಂಕದ ಮಠದ ಗಲಾಟೆ. ವಿಶ್ವನಾಥ್‌ ಅಂದ.. ನನಗೆ ವೈಯಕ್ತಿಕವಾಗಿ ಶತ್ರುಗಳು ಅಂತ ಇಲ್ಲ. ಸದನಕ್ಕೆ ಕಾಲಿಟ್ಟರೆ ಎಲ್ಲರೂ ಮಿತ್ರರೇ, ಹೊರಗೆ ಬಂದರೆ ಎಲ್ಲರೂ ಶತ್ರುಗಳೇ. ನನ್ನ ಪರಿಚಯದ, ನನ್ನ ಸ್ನೇಹದ, ಆತ್ಮೀಯವಾದ ಅಷ್ಟೂ ಜನ ರಾಜಕಾರಣಿಗಳು ಬಹಳ ಇದ್ದಾರೆ...’

ಇದನ್ನೂ ಓದಿ...
ರವಿ ಬೆಳಗೆರೆ, ಅನಿಲ್‌ ರಾಜ್‌ ಶಿಕ್ಷೆ ಜಾರಿಗೆ ಆದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT