ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ ನಿರ್ವಹಣೆಗೆ ಬಿಗಿ ಕ್ರಮ

Last Updated 24 ಜೂನ್ 2017, 9:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ವಾಹನ ಸುಗಮ ಸಂಚಾರ ಮತ್ತು ವ್ಯವಸ್ಥಿತ ಪಾರ್ಕಿಂಗ್‌ ನಿರ್ವಹಣೆ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಹಾತ್ಮ ಗಾಂಧಿ ರಸ್ತೆಯಲ್ಲಿ ಶುಕ್ರವಾರ ಅಂಗಡಿಗೆ ಸರಕು ಇಳಿಸುತ್ತಿದ್ದ ವಾಹನವೊಂದನ್ನು ಟಸ್ಕರ್‌ನಲ್ಲಿ ಠಾಣೆಗೆ ಎಳೆದೊಯ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನ ಸಂಚಾರ, ಪಾರ್ಕಿಂಗ್‌ ವ್ಯವಸ್ಥೆಯನ್ನು ಪರಿಶೀಲಿಸಿ ದರು. ರಸ್ತೆಯಲ್ಲಿ ನಿಂತಿದ್ದ
ಸರಕುಗಳಿದ್ದ ವಾಹನವನ್ನು ಠಾಣೆಗೆ ಎಳೆದೊಯ್ಯಲು ಸೂಚಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘15 ದಿನಗಳ ಹಿಂದೆ ಸಾರ್ವಜನಿಕರು, ವರ್ತಕರ ಸಭೆ ನಡೆಸಿ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ.

ಇಂದಿರಾಗಾಂಧಿ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮತ್ತು ಮಾರುಕಟ್ಟೆ ರಸ್ತೆಗಳ ಅಂಚಿನಲ್ಲಿ 1.5 ಮೀಟರ್‌ ಅಳತೆ ಗುರುತು ಮಾಡಿ ಕೊಂಡು, ಅದರೊಳಗೆ ವಾಹನಗಳನ್ನು ನಿಲುಗಡೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು’ ಎಂದು ಹೇಳಿದರು.

‘ಬಣ್ಣ ಬಳಿದು ಗೆರೆಪಟ್ಟಿ ಹಾಕಿ ಕೊಳ್ಳಲು 15 ದಿನಗಳ ಗಡುವು ನೀಡ ಲಾಗಿತ್ತು. ಈ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರವನ್ನು ಮಾಡಲಾಗಿತ್ತು. ಜೂನ್‌18ಕ್ಕೆ ಗಡುವು ಮುಗಿದಿದೆ. ಅಂಗಡಿಗಳವರು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳಲು ಸ್ಟಿಕ್ಕರ್‌ಗಳನ್ನು ವಿತರಿಸಲಾಗುತ್ತಿದೆ’ ಎಂದು ಹೇಳಿದರು.

‘ಐಜಿ ರಸ್ತೆಯಲ್ಲಿ ಕೆಲವು ಕಡೆ ಹಳದಿ ಬಣ್ಣದ ಗೆರೆ ಹಾಕಿ ಪಾರ್ಕಿಂಗ್ ವ್ಯಾಪ್ತಿ ಗುರುತು ಮಾಡಿದ್ದಾರೆ. ಎಂಜಿ ರಸ್ತೆಯಲ್ಲಿ ಒಂದು ಕಡೆಯೂ ಇದನ್ನು ಮಾಡಿಲ್ಲ. ಈ ರಸ್ತೆಯವರು ಇನ್ನಷ್ಟು ಸಮಯ ಕೇಳುತ್ತಿದ್ದಾರೆ. ಆದರೆ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸಭೆಯಲ್ಲಿ ತಿಳಿಸಿರುವ ಅಂಶಗಳನ್ನು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಡ್ಡಾಯವಾಗಿ ಕಾರ್ಯ ಗತಗೊಳಿಸಲಾಗುವುದು’ ಎಂದರು.

‘ಪಾರ್ಕಿಂಗ್‌ ಜಾಗದ (1.5 ಮೀಟರ್‌) ಆಚೆಗೆ ಇರುವ ವಾಹನಗಳನ್ನು ಮುಲಾಜಿಲ್ಲದೆ ಠಾಣೆಗೆ ಎಳೆದೊಯ್ಯುತ್ತೇವೆ. ಇನ್ನು ಒಂದು ವಾರದೊಳಗೆ ನಗರದ ರಸ್ತೆಗಳಲ್ಲಿನ ಏಕಮುಖ, ದ್ವಿಮುಖ ಸಂಚಾರ ವ್ಯವಸ್ಥೆಯಲ್ಲೂ ಕಟ್ಟುನಿಟ್ಟಾಗಿ ಕೆಲ ಮಾರ್ಪಾಡುಗಳನ್ನು ತರಲಾಗುವುದು. ವಾಹನಗಳ ಪಾರ್ಕಿಂಗ್‌ ನಿಟ್ಟಿನಲ್ಲಿ ಈವರೆಗೆ ಅಂಗಡಿಗಳವರಿಗೆ 250  ಸ್ಟಿಕ್ಕರ್‌ ವಿತರಿಸಲಾಗಿದೆ. ಶೀಘ್ರದಲ್ಲಿ ಎಲ್ಲ ಅಂಗಡಿಗಳವರಿಗೂ ಸ್ಟಿಕ್ಕರ್‌ಗಳನ್ನು ವಿತರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ರಸ್ತೆಗಳಲ್ಲಿ ಪಾರ್ಕಿಂಗ್ ವ್ಯಾಪ್ತಿಗೆ ಗೆರೆ ಹಾಕಿಸುವುದು ಸದ್ಯಕ್ಕೆ ಅಂಗಡಿಗಳವರ ಜವಾಬ್ದಾರಿ. ನಗರಸಭೆಯವರು ಟೆಂಡರ್‌ ಆಹ್ವಾನಿಸಿ   ಪ್ರಕ್ರಿಯೆ ಆರಂಭಿಸಬೇಕಾದರೆ ಕೆಲಕಾಲ ಹಿಡಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT