ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗೇರಿಯಲ್ಲಿ ‘ಗಂಗಾ–ಡೆನ್ಯೂಬ್‌ ಉತ್ಸವ’

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಬುಡಾಪೆಸ್ಟ್‌: ಇಲ್ಲಿನ ಭಾರತೀಯ ರಾಯಭಾರ ಕಚೇರಿ ವತಿಯಿಂದ ಹಂಗೇರಿಯ 15 ನಗರಗಳಲ್ಲಿ ಜೂನ್‌ 23ರಿಂದ 25ರವರೆಗೆ ಎರಡನೇ ಆವೃತ್ತಿಯ ‘ಗಂಗಾ–ಡೆನ್ಯೂಬ್‌: ಭಾರತೀಯ ಸಂಸ್ಕೃತಿ ಉತ್ಸವ’ ಹಾಗೂ ಮೂರನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ನಡೆಯುತ್ತಿದೆ.

ಭಾರತದ 70ನೇ ಸ್ವಾತಂತ್ರ್ಯ ದಿನದ ಜಾಗತಿಕ ಆಚರಣೆಗೂ ಈ ಉತ್ಸವದ ಮೂಲಕ ಚಾಲನೆ ನೀಡಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ಯೋಗಾಭ್ಯಾಸ, ಯೋಗ ಕಾರ್ಯಾಗಾರ, ಭಾರತೀಯ ಜಾನಪದ ಕಲೆ ‘ಹೆನ್ನಾ’, ಆಹಾರ ಉತ್ಸವ ಹಾಗೂ ಬಾಲಿವುಡ್‌್ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರಧ್ವಜದ ಬಣ್ಣ ಬಳಕೆ: ಉತ್ಸವಕ್ಕೆ ಚಾಲನೆ ನೀಡುವ ಸಲುವಾಗಿ ಅಂತರರಾಷ್ಟ್ರೀಯ ಯೋಗ ದಿನವಾದ ಜೂನ್‌ 21ರಂದು, ವಿದ್ಯುತ್ ದೀಪಗಳನ್ನು ಬಳಸಿ ಬುಡಾಪೆಸ್ಟ್‌ನ ಐತಿಹಾಸಿಕ ಗುರುತಾಗಿರುವ ‘ಚೈನ್‌ ಬ್ರಿಡ್ಜ್’ ಅನ್ನು ಬೆಳಗಿಸಲಾಗಿತ್ತು.

ಭಾರತೀಯ ಶಾಸ್ತ್ರೀಯ ನೃತ್ಯ ಹಾಗೂ ಸಂಗೀತದಲ್ಲಿ ಪರಿಣತಿ ಹೊಂದಿರುವ ಹಂಗರಿಯ 50 ಕಲಾವಿದರು ಈ ಉತ್ಸವಕ್ಕೆ ನೆರವು ಒದಗಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT