ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ರಕ್ಷಣೆ; ಸವಾರರಿಗೆ ಅರಿವು

Last Updated 26 ಜೂನ್ 2017, 5:36 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರ ದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಸಂಚಾರ ನಿಯಮಗಳ ಪಾಲನೆಯಾಗಬೇಕು ಹಾಗೂ ಮಳೆ, ಬಿಸಿಲಿನಿಂದ  ಪೊಲೀಸರು ರಕ್ಷಣೆ ಪಡೆ ಯಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಚಾರ  ಪೊಲೀಸರಿಗೆ ಸೌಲಭ್ಯಗಳನ್ನು ಒದಗಿಸಿದೆ.

ವಿವಿಧ ವೃತ್ತಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಸುಗಮ ಸಂಚಾರಕ್ಕಾಗಿ ಕೆಲಸ ಮಾಡುವ ಪೊಲೀಸ್‌ ಸಿಬ್ಬಂದಿಗೆ ಬಿಸಿಲು, ಮಳೆಯಿಂದ ರಕ್ಷಣೆ ಪಡೆದು ಕಾರ್ಯನಿರ್ವಹಿಸಲು ಪುಟ್ಟ ಶೆಲ್ಟರ್‌ ನಿರ್ಮಿಸಿದೆ. ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿ ಸುವ, ವಿವಿಧ ಮಾಹಿತಿ, ಸಂದೇಶಗಳನ್ನು ನೀಡುವ  ಈ ಬ್ಯಾರಿಕೇಡ್‌ ಶೆಲ್ಟರ್‌ಗಳು ಜನರ ಗಮನ ಸೆಳೆದಿವೆ.

ಸಂಚಾರ ದಟ್ಟಣೆ ಇರುವ ಪ್ರದೇಶ ಹಾಗೂ ಮುಖ್ಯ ವೃತ್ತಗಳು ಇರುವಲ್ಲಿ ಹೊಸ ಬ್ಯಾರಿಕೇಡ್‌ಗಳನ್ನು ರಸ್ತೆ ಪಕ್ಕದಲ್ಲಿ ಇಡಲಾಗಿದೆ. ಸಂಚಾರ ನಿಯಮ ಪಾಲ ನೆಗೆ ಹಾಗೂ ಚಾಲಕರಿಗೆ ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಸಂಚಾರ ಪೊಲೀಸರು ಯಾವುದೇ ತೊಂದರೆ ಇಲ್ಲದೇ, ಕೆಲಸ ಮಾಡಲು, ಕರ್ತವ್ಯದ ಸ್ಥಳದಲ್ಲಿ ಕೆಲ ನಿಮಿಷಗಳ ವರೆಗೆ ಕುಳಿತುಕೊಳ್ಳಲು ಆಸನಗಳಿರುವ ಶೆಲ್ಟರ್‌ನ ಬ್ಯಾರಿಕೇಡ್‌ಗಳನ್ನು ಗದುಗಿನ ಪ್ರಮುಖ ವೃತ್ತಗಳಲ್ಲಿ ಇಡಲಾಗಿದೆ. ಈ ಹಿಂದೆ ಸಂಚಾರ ಪೊಲೀಸರು ವಿವಿಧ ಕಂಪೆನಿಗಳ ಜಾಹೀರಾತು ಛತ್ರಿಯ ಕೆಳಗೆ ನಿಂತು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯುತ್ತಿದ್ದರು. ಈಗ ಇಲಾಖೆಯೇ ಅವರಿಗೆ ನೆರಳು ಒದಗಿಸಿದೆ.

ವಿವಿಧ ಸಂದೇಶ ಸಾರುವ ಬ್ಯಾರಿಕೇಡ್‌ ಗಳು: ನಗರದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಇಟ್ಟಿರುವ ಬ್ಯಾರಿಕೇಡ್‌ಗಳ ಮೇಲೆ ‘ಕುಡಿದು ವಾಹನ ಚಲಾಯಿಸ ಬೇಡಿ’, ‘ರಸ್ತೆ ನಿಯಮ ಪಾಲಿಸಿ- ಜೀವ ಉಳಿಸಿ’, ‘ಅತಿ ವೇಗ ಪ್ರಯಾಣ ಮೃತ್ಯು ವಿಗೆ ಆಹ್ವಾನ’, ‘ಸುರಕ್ಷತೆ ಕಡೆಗೆ ಗಮನ ನೀಡಿ– ನಂತರ ವಾಹನ ಚಲಿಸಿ’, ‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ’, ‘ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿ’, ‘ನಿಧಾನ ವಾಗಿ ಚಲಾಯಿಸಿ- ನಿಮಗಾಗಿ ಮನೆ ಯಲ್ಲಿ ಕಾಯುತ್ತಿರುತ್ತಾರೆ’ ಸೇರಿದಂತೆ ವಿವಿಧ ಸಂದೇಶಗಳು ಇವೆ.

‘ಈ ಬ್ಯಾರಿ ಕೇಡ್‌ಗಳು ಸಾರ್ವಜನಿಕರು, ವಾಹನ ಸವಾರರಿಗೆ ರಸ್ತೆ ನಿಯಮ ಪಾಲನೆ ಕುರಿತು ತಿಳಿಸುತ್ತಿವೆ. ಇದರಿಂದ ಜನರು ತಮ್ಮಷ್ಟಕ್ಕೆ ತಾವೇ ಸಂಚಾರ ನಿಯಮ ಗಳನ್ನು ಅರಿತು ಮುಂದೆ ಸಾಗುತ್ತಾರೆ’ ಎನ್ನುತ್ತಾರೆ ಪೊಲೀಸ್‌ ಸಿಬ್ಬಂದಿ.

ಜಿಲ್ಲೆಯಲ್ಲಿ 75ಕ್ಕೂ ಹೆಚ್ಚು ಬ್ಯಾರಿಕೇಡ್‌: ಗದಗ–ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ವಾಹನ ಸವಾರರಿಗೆ ರಸ್ತೆ ನಿಯಮ ಪಾಲನೆ, ವಿವಿಧ ಸಂದೇಶ ನೀಡುವ ಬ್ಯಾರಿಕೇಡ್‌ ಗಳು 50ಕ್ಕೂ ಹೆಚ್ಚು ಮತ್ತು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು, ಆಸನ ವ್ಯವಸ್ಥೆ ಇರುವ, ಶೆಲ್ಟರ್ ಹೊಂದಿದ 25ಕ್ಕೂ ಹೆಚ್ಚು ಬ್ಯಾರಿಕೇಡ್‌ ಇರಿಸಲಾಗಿದೆ.

‘ಜಿಲ್ಲಾ ಪೊಲೀಸ್ ಇಲಾಖೆ ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮ ಗಳ ಪಾಲನೆಗೆ ಹಾಗೂ ಸುರಕ್ಷತೆ ಕಡೆಗೆ ಗಮನ ಹರಿಸುತ್ತಿದೆ. ಇದರಿಂದ ಅಪ ಘಾತಗಳ ಸಂಖ್ಯೆ ಕಡಿಮೆಯಾಗಬೇಕು. ಪ್ರತಿಯೊಬ್ಬ ಚಾಲಕರು ಬ್ಯಾರಿಕೇಡ್‌ಗಳ ಮೇಲಿರುವ ಸಂದೇಶ ಗಮನಿಸಿ ಸಂಚಾ ರಕ್ಕೆ ಮುಂದಾಗಬೇಕು’ ಎನ್ನುತ್ತಾರೆ ನಗರದ ನಿವಾಸಿ ಮಹಾಂತೇಶ ಕಾಳೆ.

* * 

ಬಿಸಿಲು, ಮಳೆಯಲ್ಲಿ ಕೆಲಸ ನಿರ್ವಹಿಸುವ ಸಂಚಾರ ಪೊಲೀಸರಿಗೆ ರಕ್ಷಣೆಗಾಗಿ ಶೆಲ್ಟರ್ ಹೊಂದಿರುವ ಬ್ಯಾರಿಕೇಡ್‌ಗಳನ್ನು ನಗರದ ವಿವಿಧೆಡೆ ಇಡಲಾಗಿದೆ
ಕೆ.ಸಂತೋಷಬಾಬು
ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT