ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥೂಲಕಾಯದ ಮಕ್ಕಳು: ಭಾರತಕ್ಕೆ ಎರಡನೇ ಸ್ಥಾನ

Last Updated 27 ಜೂನ್ 2017, 15:04 IST
ಅಕ್ಷರ ಗಾತ್ರ
ADVERTISEMENT

ಸ್ಥೂಲಕಾಯದ ಮಕ್ಕಳ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಾಗತಿಕ ಮಟ್ಟದ ಅಧ್ಯಯನವೊಂದು ಹೇಳಿದೆ. ಚೀನಾ ಮೊದಲನೇ ಸ್ಥಾನದಲ್ಲಿದೆ.

ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಂಡುಬರುತ್ತಿರುವುದು, ಏಷ್ಯಾದ ಎರಡು ದೊಡ್ಡ ರಾಷ್ಟ್ರಗಳ ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ವಿವರಿಸಿದೆ.

ಅಧ್ಯಯನದ ಪ್ರಮುಖ ಅಂಶಗಳು
* ವಿಶ್ವದಾದ್ಯಂತ ಸ್ಥೂಲಕಾಯ ಹೊಂದಿರುವವರಲ್ಲಿ ಮೂರನೇ  ಒಂದು ಭಾಗದಷ್ಟು ಮಕ್ಕಳು ಭಾರತ ಮತ್ತು ಚೀನಾದಲ್ಲಿದ್ದಾರೆ.
* ಕಳೆದ 25 ವರ್ಷಗಳಲ್ಲಿ 195 ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆ ಕುರಿತ ಮಾಹಿತಿ ಈ ಅಧ್ಯಯನದಲ್ಲಿದೆ.
* ದೇಹದ ತೂಕ ಮತ್ತು ಎತ್ತರದ ಅನುಪಾತದ (ಬಾಡಿ ಮಾಸ್‌ ಇಂಡೆಕ್ಸ್‌ – ಬಿಎಂಐ) ಪರಿಮಾಣವನ್ನು ಆಧಾರ
ವಾಗಿಟ್ಟುಕೊಂಡು ಈ ಅಧ್ಯಯನ ಮಾಡಲಾಗಿದೆ.
* ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ 1980 ರಿಂದ 2015ರ ಅವಧಿಯಲ್ಲಿ  ಸ್ಥೂಲಕಾಯ ಹೊಂದಿರುವ ಬಾಲಕ ಮತ್ತು ಬಾಲಕಿಯರ ಸಂಖ್ಯೆ ಶೇ 20 ರಷ್ಟು ಹೆಚ್ಚಿದೆ.
* ಇದೇ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ  ಈ ಸಂಖ್ಯೆ ಇನ್ನೂ ಹೆಚ್ಚಿದೆ. ಇದು ಜನರು ಅನುಸರಿಸುತ್ತಿರುವ ಜೀವನ ಶೈಲಿಯ ಪರಿಣಾಮ ಎಂದು ಅಧ್ಯಯನ ಹೇಳಿದೆ.
* ವ್ಯಕ್ತಿ 14–15 ವರ್ಷ ವಯಸ್ಸಿನವನಾಗಿದ್ದಾಗ ಸ್ಥೂಲಕಾಯ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ.

***

* ಸದ್ಯದ ಮಟ್ಟಿಗೆ ಸ್ಥೂಲಕಾಯದ ಅಂಕಿ–ಅಂಶ ಭಾರತದಲ್ಲಿ ಹೆಚ್ಚು ಕಂಡುಬರದಿದ್ದರೂ, ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಭಾರತದಲ್ಲಿ ಬೊಜ್ಜು ಮತ್ತು ಅಪೌಷ್ಟಿಕಾಂಶದ ಸಮಸ್ಯೆ ಇರುವುದರಿಂದ ಈ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಜೆ. ಎಸ್‌. ಠಾಕೂರ್‌
(ಅಧ್ಯಯನದಲ್ಲಿ ಪಾಲ್ಗೊಂಡ ಸಂಶೋಧಕರಲ್ಲಿ ಒಬ್ಬರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT