ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ದಾಂದಲೆ ತಡೆಗೆ ರೈಲ್ವೆ ಹಳಿ ತಡೆಗೋಡೆ

ಕೆಲವೆಡೆ ಸಿಮೆಂಟ್‌ ತಡೆಗೋಡೆ: ಉದ್ಯಾನದಂಚಿನ ಗ್ರಾಮಗಳ ರೈತರಿಗೆ ತುಸು ನೆಮ್ಮದಿ
Last Updated 27 ಜೂನ್ 2017, 6:29 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಆನೆಗಳ ದಾಂದಲೆ ಯಿಂದ ಬೆಳೆ ನಾಶ,  ಮಾನವ–ಆನೆ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಈಗ ಇದೀಗ ರೈಲ್ವೆ ಹಳಿ ತಡೆಗೋಡೆ ನಿರ್ಮಾಣವಾಗಿದೆ. ಕೃಷಿಕರಿಗೂ ನೆಮ್ಮದಿ ತಂದಿದೆ.

ರಾಷ್ಟ್ರೀಯ ಉದ್ಯಾನದದಂಚಿನ ಗ್ರಾಮಗಳಲ್ಲಿ ಆನೆ, ಇತರ ಕಾಡುಪ್ರಾಣಿ ಗಳ ದಾಂದಲೆ, ದಾಳಿಯಿಂದ ಜನರು ಬೇಸತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವೈಫಲ್ಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನು ತಡೆಯಲು ಇಲಾಖೆ ಹಲವು ಕ್ರಮಕೈಗೊಂಡಿದ್ದರೂ ಯಶ ಸಿಕ್ಕಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕಾಡಾನೆ ದಾಂದಲೆ ತಡೆಗೆ ರೈಲ್ವೆ ಹಳಿ ಬಳಸಿ ನಿರ್ಮಿಸಿದ್ದ ತಡೆಗೋಡೆ ಯಶಸ್ವಿಯಾದ ಮಾಹಿತಿ ಆಧರಿಸಿ, ಇಲ್ಲೂ ಅದರ ಬಳಕೆಗೆ ಒಲವು ತೋರಲಾಯಿತು.

ಸರ್ಕಾರದ ಅನುಮೋದನೆ ದೊರೆತು, ಅದರ ಜಾರಿಗೊಳಿಸಿದ ಪರಿ ಣಾಮ, ಈಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ರೈಲುಹಳಿ ಬಳಸಿ ತಡೆ ಗೋಡೆ ನಿರ್ಮಿಸುವ ಕ್ರಮ ಜಾರಿಯಲ್ಲಿದೆ. ‘ನಾಗರಹೊಳೆ ರಾಷ್ಟ್ರೀಯ ಉದ್ಯಾನ 643 ಚದರ ಕಿ.ಮಿ ವ್ಯಾಪ್ತಿ ಯಲ್ಲಿ ಹರಡಿಕೊಂಡಿದೆ. ಈ ಭಾಗದ ಆನೆ ಕಾರಿಡಾರ್‌ ದೇಶದಲ್ಲೇ ಪ್ರಸಿದ್ಧ ಆನೆಯ ಚಲನ ವಲನ ಅತಿಯಾಗಿ ಕಾಣಲು ಸಾಧ್ಯ’ ಎನ್ನುತ್ತಾರೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್‌.

ಇಲ್ಲಿ ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆಹಳಿ ಯನ್ನು ಬಳಕೆ ಮಾಡಿ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಎರಡು ವರ್ಷದ ಹಿಂದೆ ಚಾಲನೆ ಸಿಕ್ಕಿತು. ಈಗ  24 ಕಿ.ಮೀ ಉದ್ದದ ತಡೆಗೋಡೆ ನಿರ್ಮಾಣವಾ ಗಿದ್ದು, ಪ್ರತಿ ಕಿ.ಮೀಗೆ ₹ 1.2 ಕೋಟಿ ವೆಚ್ಚವಾಗಿದೆ.

2017–18ನೇ ಸಾಲಿನಲ್ಲಿ 30 ಕಿ.ಮಿ. ತಡೆಗೋಡೆ ನಿರ್ಮಿಸುವ ಗುರಿ ಇಲಾಖೆ ಯದು. ಈಗಾಗಲೇ ಇಲಾಖೆಗೆ ₹ 5 ಕೋಟಿ ಅನುದಾನ ಬಂದಿದೆ.  ವೀರನ ಹೊಸಹಳ್ಳಿ, ಹುಣಸೂರು ವಲಯದ ವ್ಯಾಪ್ತಿಯಲ್ಲಿ 12 ಕಿ.ಮೀ ತಡೆಗೋಡೆ;  ಎಚ್.ಡಿ.ಕೋಟೆ ಭಾಗದ ಅಂತರಸಂತೆ ವಲಯದಲ್ಲಿ 9 ಕಿ.ಮೀ,  ಕೊಡಗು ಜಿಲ್ಲೆಯಲ್ಲಿ 3 ಕಿ.ಮೀ ತಡೆಗೋಡೆ ನಿರ್ಮಾಣ ಗುರಿಯಿದೆ ಎಂದರು.

ಆನೆ ಉಪಟಳ ಕುಸಿತ: ಆನೆ –ಮಾನವ ಸಂಘರ್ಷ ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಕಂಡುಬರುತ್ತದೆ ಎನ್ನುತ್ತಾರೆ ವೀರನಹೊಸಹಳ್ಳಿ ವಲಯ ಅರಣ್ಯಾಧಿ ಕಾರಿ ಮಧುಕುಮಾರ್‌. ಈಗ ರೈಲ್ವೆ ಹಳಿ ತಡೆಗೋಡೆ ನಿರ್ಮಾಣದಿಂದ ವೀರನ ಹೊಸಹಳ್ಳಿ ವಲಯದ ಕಾಡಂಚಿನ 23 ಗ್ರಾಮಗಳಿಗೆ ನೆರವಾಗಿದೆ.  ಹುಣಸೂರು ವಲಯದಲ್ಲಿ 14 ಗ್ರಾಮಗಳಿಗೆ ಈ ಕ್ರಮದಿಂದ ತುಸು ನೆಮ್ಮದಿ ಸಿಗಬಹುದು ಎನ್ನುತ್ತಾರೆ ಅವರು.

ಬೇಸಿಗೆಯಲ್ಲಿ ಅರಣ್ಯದಲ್ಲಿ ಮೇವು ಹಾಗೂ ನೀರಿನ ಕೊರತೆ ಕಾಡಿದಾಗ ಆನೆ ಆಹಾರ ಅರಸಿ ನಾಡಿಗೆ ಬರಲಿದೆ. ಕಾಡಂಚಿನಲ್ಲಿ ಬಾಳೆ, ಮುಸುಕಿನ ಜೋಳ ಬೆಳೆದ ಭೂಮಿಗೆ ಲಗ್ಗೆ ಹಾಕಲಿದೆ. ಇದರಿಂದ ಬೆಳೆ ನಷ್ಟವಾಗಲಿದೆ. ಎರಡು ವರ್ಷದಿಂದ ರೈಲು ಹಳಿ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಗೊಂಡ ಬಳಿಕ  ಈ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳುತ್ತಾರೆ.

**

ಪರಿಹಾರ: ವೀರನಹೊಸಹಳ್ಳಿ ವಲಯ ಪರಿಹಾರ ಕೋರಿ ಬಂದ ಅರ್ಜಿಗಳಲ್ಲಿ ಆನೆ–ಮಾನವ ಸಂಘರ್ಷ ಪ್ರಕರಣಗಳೇ ಅಧಿಕ.  2013–14ನೇ ಸಾಲಿನಲ್ಲಿ 482 ಅರ್ಜಿ ಬಂದಿದ್ದರೆ, 2015–16ನೇ ಸಾಲಿಗೆ 158 ಅರ್ಜಿಗಳು ಬಂದಿವೆ.

ಸಾವು: ಆನೆ ಮಾನವನ ಸಂಘರ್ಷದಲ್ಲಿ ಈವರಗೆ 2 ಆನೆ ಸಾವನ್ನಪ್ಪಿದೆ. 2013–14ರಲ್ಲಿ ಮತ್ತು 2016–17ನೇ ಸಾಲಿನಲ್ಲಿ ಒಂದು ಸಾವನ್ನಪ್ಪಿದೆ. ಆನೆ ದಾಳಿಯಲ್ಲಿ ಈ ವರಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವುದು ದಾಖಲಾಗಿದೆ.

₹17 ಲಕ್ಷ-  2013–14ರಲ್ಲಿ

₹19 ಲಕ್ಷ- 2016–17ರಲ್ಲಿ

₹18 ಲಕ್ಷ- 2015–16ರಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT