ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವಕ್ಕಾಗಿ ಹೋರಾಟ

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಏಪ್‌ ಜಾತಿಯ ಕೋತಿಗಳನ್ನು ಮುಖ್ಯ ಭೂಮಿಕೆಯಲ್ಲಿರಿಸಿಕೊಂಡು ನಿರ್ಮಿಸಲಾಗಿದ್ದ ಚಿತ್ರ ‘ಕಾನ್‌ಕ್ವೆಸ್ಟ್ ಆಫ್ ದಿ ಏಪ್ಸ್‌’ 1972ರಲ್ಲಿ ಬಿಡುಗಡೆ ಆಗಿತ್ತು.

‘ರೈಸ್ ಆಫ್‌ ದಿ ಪ್ಲಾನೆಟ್ ಆಫ್‌ ದಿ  ಏಪ್’ (2011) ಮತ್ತು ‘ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್’ (2014) ಚಿತ್ರಗಳಲ್ಲಿಯೂ ಈ ಪರಂಪರೆ ಮುಂದುವರೆದಿತ್ತು. ಈ ಪಟ್ಟಿಗೆ ಹೊಸ ಸೇರ್ಪಡೆ ‘ವಾರ್‌ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್‌’.

ಮನುಷ್ಯ ಸದಾ ತನ್ನ ಆವಿಷ್ಕಾರಗಳಿಗಾಗಿ ಪ್ರಾಣಿಗಳ ಮೇಲೆ ಹಿಂಸೆ ಮಾಡುತ್ತಲೇ ಬಂದಿದ್ದಾನೆ. ಪ್ರಾಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವುಗಳ ಜೀವಕ್ಕೆ ಗೌರವ ನೀಡುವ ಪ್ರಯತ್ನ ಮನುಷ್ಯನಿಂದ ಆಗಿಲ್ಲ ಎಂಬ ಅಂಶವನ್ನು ಪ್ರಧಾನವಾಗಿಟ್ಟುಕೊಂಡು ಈ ಚಿತ್ರ ನಿರ್ಮಿಸಲಾಗಿದೆ.

ಏಪ್‌ಗಳು ಮತ್ತು ಮಾನವರ ಮಧ್ಯೆ ಅಸ್ತಿತ್ವಕ್ಕಾಗಿ ಭೀಕರ ಹೋರಾಟ ನಡೆಯಲಿದೆ. ಅಂತಿಮ ಜಯ ಯಾರದ್ದು ಎಂದು ತಿಳಿಯಲು ಜುಲೈ 14ರವರೆಗೆ ಕಾಯಬೇಕಿದೆ. ‘ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್’ ಚಿತ್ರ ನಿರ್ದೇಶಿಸಿದ್ದ ಮ್ಯಾಟ್ ರಿವೀಸ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT