ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಚಾರ್ಜರ್‌ ಬಳಕೆ ಹೀಗಿರಲಿ

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಮೊಬೈಲ್‌ಫೋನ್‌ ಇಲ್ಲದ ಜೀವನ ಊಹಿಸಲೂ ಸಾಧ್ಯವಾಗದಂತಹ ಸ್ಥಿತಿಗೆ ನಾವು ತಲುಪಿದ್ದೇವೆ. ಆದರೆ, ಬ್ಯಾಟರಿ  ಖಾಲಿಯಾಗುತ್ತಿದ್ದಂತೆ ಮೊಬೈಲ್‌ಗಳಿಗೆ ಜೀವವೇ ಇರುವುದಿಲ್ಲ.

ಬ್ಯಾಟರಿ ಖಾಲಿ ಆಗದಂತೆ ಇರಬೇಕೆಂದರೆ ಚಾರ್ಜ್‌ ಮಾಡುವುದು ಅನಿವಾರ್ಯವಾಗುತ್ತದೆ. ಎಂತಹ ಚಾರ್ಜರ್‌ ಬಳಕೆಗೆ ಉತ್ತಮ ಎಂಬ ಪ್ರಶ್ನೆ ಕಾಡುವುದು ಸಹಜ. ಇಂತಹ ಹಲವು ಅನುಮಾನಗಳಿಗೆ ಇಲ್ಲಿ ಪ್ರಶ್ನೋತ್ತರ ರೂಪದಲ್ಲಿ ಉತ್ತರ ಕಂಡುಕೊಳ್ಳಲಾಗಿದೆ.

ಪ್ರಶ್ನೆ: ಅಮೆಜಾನ್‌ನಂತ ಆನ್‌ಲೈನ್‌ ಶಾಪಿಂಗ್ ತಾಣಗಳಲ್ಲಿ ಉತ್ತಮ ಚಾರ್ಜರ್‌ಗಾಗಿ ಹುಡುಕಿದರೆ 32,819 ಚಾರ್ಜರ್‌ಗಳ ಪಟ್ಟಿ ಕಾಣಿಸುತ್ತದೆ. ಇವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡುವುದು ಹೇಗೆ?
ಉತ್ತರ: ನಿಮಗೆ ಎಂತಹ ಚಾರ್ಜರ್‌ ಬೇಕು ಎಂಬ ಪರಿಕಲ್ಪನೆ ಇದ್ದರೆ, ಹಲವು ಆಯ್ಕೆಗಳು ಬಂದಾಗ, ಉತ್ತಮವಾದುದನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವೇನಲ್ಲ.

ಉತ್ತಮ ಆಯ್ಕೆ ಎಂದರೆ  ‘ಪವರ್‌ಪೋರ್ಟ್‌ –4’ ಇದು ನಾಲ್ಕು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಈ ಪ್ರತಿಯೊಂದು ಪೋರ್ಟ್‌ ಕೂಡ 2.4 ಎಎಂಪಿಸ್‌ (ವಿದ್ಯುತ್‌ ಪ್ರವಾಹದ ಪರಿಮಾಣ) ಅನ್ನು ಒಳಗೊಂಡಿದೆ. ಈಗಾಗಲೇ ನಾವು ಬಳಸುತ್ತಿರುವ ಬಹುತೇಕ ಚಾರ್ಜರ್‌ಗಳು ಇದರಷ್ಟು ಉತ್ತಮವಾಗಿ ಚಾರ್ಜ್‌ ಮಾಡುವ ಎಎಂಪಿಸ್‌ಗಳನ್ನು ಒಳಗೊಂಡಿಲ್ಲ. ಹೀಗಾಗಿ ಇದು ಏಕಕಾಲಕ್ಕೆ ದೊಡ್ಡ ಗಾತ್ರದ ಫೋನ್‌, ಟ್ಯಾಬ್ಲೆಟ್ ಸೇರಿದಂತೆ ನಾಲ್ಕು ಉಪಕರಣಗಳನ್ನು ವೇಗವಾಗಿ ಚಾರ್ಜ್‌ ಮಾಡುತ್ತದೆ.

* ಸದಾ ಪ್ರಯಾಣ ಮಾಡುವವರಿಗೆ ಚಾರ್ಜರ್‌ ಅನ್ನು ಜತೆಯಲ್ಲೇ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಪ್ರಯಾಣ ಸಂದರ್ಭದಲ್ಲಿ ಎಂತಹ ಚಾರ್ಜರ್‌ ಉತ್ತಮ?
ಉತ್ತರ: ಪವರ್‌ ಪೋರ್ಟ್‌ 4 ಚಾರ್ಜರ್‌ ಅನ್ನು ಸುಲಭವಾಗಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದು. ಆದರೆ, ಜೇಬಿನಲ್ಲಿ ಇಟ್ಟುಕೊಳ್ಳಲು ಸ್ವಲ್ಪ ದೊಡ್ಡದಾಗುತ್ತದೆ. ಪ್ರಯಾಣ ಸಂದರ್ಭದಲ್ಲಿ ಉತ್ತಮ ಆಯ್ಕೆ ಎಂದರೆ ಐ ಕ್ಲವರ್ಸ್‌ನ  ವಾಲ್‌ ಚಾರ್ಜರ್‌.  ಇದು ಎರಡು ಯುಸಿಬಿ ಪೋರ್ಟ್‌ಗಳನ್ನು ಒಳಗೊಂಡಿದೆ. ಅಲ್ಲದೇ ಗಾತ್ರದಲ್ಲೂ ಚಿಕ್ಕದು. ಒಂದು ಇಂಚಿಗಿಂತಲೂ ಸ್ವಲ್ಪ ದಪ್ಪವಿರುತ್ತದೆ. ಒಂದೂವರೆ ಇಂಚಿನಷ್ಟು ಅಗಲ ಇರುತ್ತದೆ.

* ಸಾರ್ವಜನಿಕ ಪ್ರದೇಶಗಳಲ್ಲಿ ನಮ್ಮ ಮೊಬೈಲ್‌ಗಳನ್ನು ಚಾರ್ಜ್‌ ಮಾಡಿಕೊಳ್ಳುವುದು ಎಷ್ಟು ಸುರಕ್ಷಿತ? ಇಂತಹ ಕಡೆ ಚಾರ್ಜ್‌ ಮಾಡಿದರೆ ಮೊಬೈಲ್‌ನಲ್ಲಿರುವ ಮಾಹಿತಿಗೆ ಏನಾದರೂ ಧಕ್ಕೆ ಆಗುತ್ತದೆಯೇ?
ಉತ್ತರ: ಇದಕ್ಕೆ ಹೆಚ್ಚಾಗಿ ಕಳವಳ ಪಡುವ ಅಗತ್ಯವಿಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿ ಚಾರ್ಜ್‌ ಮಾಡಿಕೊಳ್ಳುವುದರಿಂದ  ನಿಮ್ಮ ಮೊಬೈಲ್‌ಫೋನ್‌ನಲ್ಲಿರುವ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆ  ತಳ್ಳಿಹಾಕುವಂತಿಲ್ಲ.  ನಿಮ್ಮದೇ ಆದ ಚಾರ್ಜರ್‌ ಇದ್ದರೆ ಭಯವಿಲ್ಲದೇ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬಹುದು.

ಬಸ್‌, ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಅಪರಿಚಿತರು  ನಿಮ್ಮ ಚಾರ್ಜ್‌ರ್‌ ಬಳಸಿಕೊಂಡರೂ ನಿಮ್ಮ ಮೊಬೈಲ್‌ಗೆ ಯಾವುದೇ ಸಮಸ್ಯೆ ಇಲ್ಲ.

* ಕಾರಿನಲ್ಲಿ ಬಳಸಬಹುದಾದ ಉತ್ತಮ ಚಾರ್ಜರ್‌ ಯಾವುದು?
ಉತ್ತರ: ಆ್ಯಂಕರ್‌ನ (Anker)  ‘ಪವರ್ ಡ್ರೈ 2’ ಚಾರ್ಜರ್ ಕಾರಿನಲ್ಲಿ ಬಳಸಬಹುದಾದ ಉತ್ತಮ ಚಾರ್ಜರ್‌ಗಳಲ್ಲಿ ಒಂದು. ಇದು ವೇಗವಾಗಿ ಚಾರ್ಜ್‌ ಮಾಡಲು ನೆರವಾಗುವ ಎರಡು 2.4 ಎಎಂಪಿ ಪೋರ್ಟ್‌ಗಳನ್ನು ಒಳಗೊಂಡಿದೆ. ಇದರ ಬೆಲೆ ಸುಮಾರು ₹ 640.

ಈ ಬೆಲೆಗೆ ಹಲವು ಉತ್ತಮ ಚಾರ್ಜರ್‌ಗಳು ಲಭಿಸುತ್ತವೆ. ಆದರೆ ಆ್ಯಂಕರ್ ಸಂಸ್ಥೆ  18 ತಿಂಗಳ ವಾರಂಟಿ ಕೊಡುತ್ತದೆ. ಅಲ್ಲದೆ ಇದರಲ್ಲಿ ಅಳವಡಿಸಿರುವ ಲೈಟ್‌ಗಳು ಚಾರ್ಜಿಂಗ್‌ನ ಸ್ಥಿತಿಗತಿ  ತಿಳಿಸುತ್ತವೆ.

* ಹಲವರು ಆ್ಯಂಕರ್ ಸಂಸ್ಥೆಯ ಚಾರ್ಜರ್‌ಗಳನ್ನೇ ಹೆಚ್ಚು ಬಳಸುತ್ತಿದ್ದಾರೆ.  ಅಮೆಜಾನ್‌ ಬೇಸಿಕ್ಸ್‌ ಮತ್ತು ಮೊನೊಪ್ರೈಸ್ ಸಂಸ್ಥೆಗಳ ಚಾರ್ಜರ್‌ಗಳು ಹೇಗಿವೆ?
ಆ್ಯಂಕರ್‌ ಸಂಸ್ಥೆ ಉತ್ತಮವಾದ ಚಾರ್ಜರ್‌ಗಳನ್ನು ತಯಾರಿಸುತ್ತಿದೆ. ಹೀಗಾಗಿ ಕೆಲವು ವರ್ಷಗಳಿಂದ ಈ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ. ಇವುಗಳ ವಿನ್ಯಾಸವೂ ಚೆನ್ನಾಗಿರುತ್ತದೆ. ಮತ್ತು ಕೈಗೆಟುಕುವ ದರದಲ್ಲಿ ಸಿಗುತ್ತವೆ.

ಅಮೆಜಾನ್ ಬೇಸಿಕ್ಸ್‌ ಮತ್ತು ಮೊನೊಪ್ರೈಸ್‌ ಸಂಸ್ಥೆ ತಯಾರಿಸುವ ಚಾರ್ಜರ್‌ಗಳು ಸಹ ಉತ್ತಮವಾಗಿವೆ. ಬೆಲೆಯೂ ಕಡಿಮೆ ಇರುತ್ತದೆ.  ಆದರೆ, ಈ ಸಂಸ್ಥೆಯ ಚಾರ್ಜರ್‌ಗಳ ಕೇಬಲ್ ವೈರ್‌ಗಳು ಒಮ್ಮೊಮ್ಮೆ ಕಳಪೆ ಗುಣಮಟ್ಟದ್ದಾಗಿರುತ್ತವೆ.

ಅಲ್ಲದೆ, ಈ ಸಂಸ್ಥೆಗಳ ಉತ್ಪನ್ನಗಳನ್ನು ನಕಲು ಮಾಡಿ ಹೆಸರಷ್ಟೇ ನಮೂದಿಸಿ ಮಾರುವ ಜಾಲವೂ ಹರಡಿದೆ.  ಆನ್‌ಲೈನ್‌ನಲ್ಲಿ ಕೊಂಡ ವಸ್ತುಗಳಿಗೂ ಮತ್ತು ಸ್ಟೋರ್‌ಗಳಲ್ಲಿ ದೊರೆಯುವ ವಸ್ತುಗಳಿಗೂ ಹಲವು ವ್ಯತ್ಯಾಸಗಳಿವೆ.

* ಇತರ ಪರಿಕರಗಳ ಜತೆ ನಮ್ಮ ಮೊಬೈಲ್‌ ಅನ್ನು ಜೋಡಿಸಲು ಯಾವ ಕೇಬಲ್‌ ಕೋರ್ಡ್ (cord) ಉತ್ತಮ?
ಇದರಲ್ಲೂ ಸಹ ಆ್ಯಂಕರ್ ಸಂಸ್ಥೆಯ ಉತ್ಪನ್ನಗಳೇ ಉತ್ತಮವಾಗಿವೆ. ಅವುಗಳ ಪವರ್‌ಲೈನ್‌, ಲೈಟಿಂಗ್ಸ್‌, ಮೈಕ್ರೊ ಯುಎಸ್‌ಬಿ ಕೇಬಲ್‌ಗಳು ಗುಣಮಟ್ಟದ್ದಾಗಿವೆ. ಬೆಲೆ ಕೂಡ ಕಡಿಮೆ.  ಅನುಕೂಲವಾಗುವ ಅಳತೆಯಲ್ಲಿ ಕೇಬಲ್ ಇರುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಮತ್ತೆ ಸಂಸ್ಥೆಯ ಭರವಸೆಯೂ ಸಿಗುತ್ತದೆ.

* ಮುರಿದ ಮತ್ತು ತುಂಡಾದ ಮೊಬೈಲ್‌, ಕೇಬಲ್‌, ಚಾರ್ಜರ್‌ ಇತ್ಯಾದಿ ಪರಿಕರಗಳನ್ನು ಜೋಡಿಸಲು ‘ಸುಗ್ರು’ (Sugru) ಸಂಸ್ಥೆಯ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದರಿಂದ ಏನಾದರೂ ಸಮಸ್ಯೆ ಇದೆಯೇ?
ಉತ್ತರ: ಈ ರೀತಿ ಸುಗ್ರು ಸಂಸ್ಥೆಯ ಅಂಟಿನಂತಹ ವಸ್ತು ಬಳಸಿ ಜೋಡಿಸಿರುವುದನ್ನು ಹಲವು ಬಾರಿ ನೋಡಿದ್ದೇನೆ. ಆದರೆ ಈ ರೀತಿ ಮಾಡುವುದರಿಂದ ಕೇಬಲ್‌, ಅಥವಾ ಪರಿಕರ ಹಾಳಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ಲಗ್‌ ಕೊನೆಯಲ್ಲಿ ಜೋಡಣೆಯಾಗಿರುವ ಕೇಬಲ್ ಹೆಚ್ಚು ದೃಢವಾಗಿದ್ದರೆ ಮುರಿಯುವ, ತುಂಡಾಗುವ ಸಾಧ್ಯತೆ ಕಡಿಮೆ. ಈ ವಿಷಯದಲ್ಲಿ ಆ್ಯಂಕರ್   ಉತ್ಪನ್ನಗಳೇ ಉತ್ತಮ. ಏಕೆಂದರೆ ಈ ಉತ್ಪನ್ನಗಳನ್ನು 5 ಸಾವಿರ ಬಾರಿ ಬೆಂಡ್‌ ಮಾಡಿದರೂ ಮುರಿಯುವ ಸಾಧ್ಯತೆ ಕಡಿಮೆ ಎಂದು ಸಂಸ್ಥೆ ತಿಳಿಸಿದೆ.

* ಚಾರ್ಜ್‌ರ್‌ಗಳನ್ನು ಪರೀಕ್ಷಿಸುವುದು ಹೇಗೆ?
ಚಾರ್ಜರ್‌ಗಳ ಗುಣಮಟ್ಟ ಪರೀಕ್ಷಿಸುವುದು ಕಷ್ಟವೇನಲ್ಲ.  ಚಾರ್ಜರ್‌ಗಳನ್ನು ವಿದ್ಯುತ್‌ ಪ್ಲಗ್‌ ಜೋಡಿಸಿದ ನಂತರ ಚಾರ್ಜಿಂಗ್ ವೇಗವಾಗಿ ಆಗುತ್ತಿದೆಯೇ ಅಥವಾ ನಿಧಾನವಾಗಿದೆಯೇ ಎಂಬುದನ್ನು ಪರೀಕ್ಷಿಸಿ.  ಚಾರ್ಜರ್‌ನಲ್ಲಿ ಬೆಂಕಿ ಕಾಣಿಸಿಕೊಂಡರೆ, ಹೊಗೆ ಬಂದರೆ ಅದು ಕಳಪೆ ಗುಣಮಟ್ಟದ್ದು ಎಂದು ಭಾವಿಸಬಹುದು. ಅದು ಪ್ಲಗ್‌ಗೆ ಸರಿಯಾಗಿ ಹೊಂದಿಕೊಳ್ಳುತ್ತಿದ್ದೆಯೇ ಎಂಬುದನ್ನು  ಖಾತ್ರಿಮಾಡಿಕೊಳ್ಳಿ, ವಿನ್ಯಾಸದ ಕಡೆಗೂ ಗಮನವಿರಲಿ, ಸರಿಯಾದ ಆಕಾರವಿಲ್ಲದ ವಸ್ತುಗಳನ್ನು ಕೊಳ್ಳುವುದಾದರೂ ಯಾಕೆ?

* ಇದುವರೆಗೆ ನೀವು ನೋಡಿರುವ ಅತ್ಯುತ್ತಮ ಚಾರ್ಜರ್ ಯಾವುದು?
ಉತ್ತರ: ನಾನು ನೋಡಿರುವಂತೆ ಕೆಲವು  ಕಾರ್‌ ಚಾರ್ಜರ್‌ಗಳು  ಉತ್ತಮವಾಗಿ ಕೆಲಸ ಮಾಡುತ್ತವೆ. ಇವುಗಳ ಕೇಬಲ್‌ ಸಹ ಉದ್ದವಾಗಿರುತ್ತದೆ. ಹಿಂಬದಿ ಕೂರುವವರೂ ಚಾರ್ಜ್‌ ಮಾಡಿಕೊಳ್ಳಲು ಅನುಕೂಲವಾಗಿವೆ.

ಅಲ್ಲದೆ, ಮಕ್ಕಳು ವಿಡಿಯೊ ನೋಡುವಾಗ, ಆಟ ಆಡುವಾಗ ಚಾರ್ಜರ್‌ ಒಂದೆಡೆ ಕೂರುವುದು ಕಷ್ಟ. ಇಂತಹ ಸಂದರ್ಭದಲ್ಲಿ ಕೇಬಲ್ ಉದ್ದವಾಗಿದ್ದರೆ ಚಾರ್ಜಿಂಗ್‌ ಮಾಡಲು ಸಮಸ್ಯೆ ಇರುವುದಿಲ್ಲ.
ನಿಕ್‌ ಗೈ,(ನ್ಯೂಯಾರ್ಕ್‌ ಟೈಮ್ಸ್‌)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT