ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕ್ ಮೆಸೇಜಿಂಗ್ ಆ್ಯಪ್‌ನಲ್ಲಿ ಹೊಸತು

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ವಾಟ್ಸ್ಅ್ಯಪ್ ಮಾದರಿಯ ಹೈಕ್ ಮೆಸೇಜಿಂಗ್ ಆ್ಯಪ್ ಇದೀಗ ಎರಡು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಒಂದು ಪೇಟಿಎಂ ಮಾದರಿಯ ವಾಲೆಟ್‌ ಮತ್ತೊಂದು ಯುಪಿಐ ಪೇಮೆಂಟ್.

ಇನ್ನು ಮುಂದೆ ಹೈಕ್ ಬಳಸುವ ಬಳಕೆದಾರರು ಇದರ ಮೂಲಕ ಸುಲಭವಾಗಿ ಹಣ ವರ್ಗಾವಣೆ ಸೇರಿದಂತೆ ಬಿಲ್‌ಗಳನ್ನು ಪಾವತಿ ಮಾಡಬಹುದು ಎಂದು ಹೈಕ್ ಆ್ಯಪ್ ನ ಸಿಇಓ ಕವಿನ್ ಭಾರ್ತಿ ಮಿತ್ತಲ್ ತಿಳಿಸಿದ್ದಾರೆ.

ಯೆಸ್ ಬ್ಯಾಂಕ್ ಸಹಯೋಗದಲ್ಲಿ ಈ ಎರಡು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದೀಗ ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ ಸಾಮಾಜಿಕ ಜಾಲತಾಣಗಳು ಭಾರತದಲ್ಲಿ ಯುಪಿಐ ಮತ್ತು ವಾಲೆಟ್ ಪರಿಚಯಿಸುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ಗೆ ಪೈಪೋಟಿ ನೀಡಲು ಹೈಕ್ ನಲ್ಲಿ ಈ ಎರಡು ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ಆ್ಯಪ್ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಭಾರತವು ವಾಲೆಟ್ ಮತ್ತು ಯುಪಿಐ ಪೇಮೆಂಟ್‌ನ ದೊಡ್ಡ ಮಾರುಕಟ್ಟೆಯಾಗಿದೆ. ನೋಟು ರದ್ದತಿ ಬಳಿಕ ಶೇ 60 ರಷ್ಟು ಜನರು ವಾಲೆಟ್ ಮತ್ತು ಯುಪಿಐ ಪೇಮೆಂಟ್ ಮೂಲಕ ಬಿಲ್ ಪಾವತಿ ಮತ್ತು ಹಣವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.

ಹೈಕ್ ಬಳಕೆದಾರರಿಗೆ ಮಾಹಿತಿ ಮತ್ತು ಮನರಂಜನೆ ಜತೆಗೆ ಹಣಕಾಸಿನ ವ್ಯವಹಾರ ನಡೆಸಲು  ವಾಲೆಟ್‌ ಮತ್ತು ಯುಪಿಐ ಪರಿಚಯಿಸಿದ್ದೇವೆ ಎಂದು ಮಿತ್ತಲ್ ಹೇಳುತ್ತಾರೆ. ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಹೈಕ್ ಲಭ್ಯವಿದ್ದು ಗ್ರಾಹಕರು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಗೂಗಲ್ ಪ್ಲೇಸ್ಟೋರ್: hike app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT