ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ ಮರಗಳ ಮಾಹಿತಿಗೆ ಮೈ ಪ್ಲಾಂಟ್’ ಆ್ಯಪ್

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಸರ್ಕಾರ ಸಸಿಗಳು,ಮರಗಳ ಮಾಹಿತಿ ಮತ್ತು ಸಸಿಗಳನ್ನು ನೆಡುವುದಕ್ಕಾಗಿ ‘ ಮೈ ಪ್ಲ್ಯಾಂಟ್’ ಎಂಬ ಮೊಬೈಲ್ ಆ್ಯಪ್ ಅನ್ನು ಬರುವ ಜುಲೈ 1 ರಂದು ಬಿಡುಗಡೆ ಮಾಡಲಿದೆ.

ನಾಗರಿಕರು, ಪರಿಸರ ಹೋರಾಟಗಾರರು, ಪರಿಸರ ಪ್ರಿಯರು, ಸ್ವಯಂ ಸೇವಾ ಸಂಸ್ಥೆಗಳು. ಸಂಘ ಸಂಸ್ಥೆಗಳಿಗೆ ಈ ಆ್ಯಪ್‌ ಹೆಚ್ಚು ಪ್ರಯೋಜನಕ್ಕೆ ಬರಲಿದೆ.

ರಾಜ್ಯದಲ್ಲಿ ಯಾವುದಾದರೂ ಹೊಸ ತಳಿಯ ಗಿಡ, ಮರ ಕಂಡಬಂದರೆ,  ಅದರ ಮಾಹಿತಿ,  ಅದು ಎಲ್ಲಿ ಕಂಡು ಬರುತ್ತದೆ ಎಂಬುದನ್ನು ಈ ಆ್ಯಪ್‌ನಲ್ಲಿ ಅಪ್್ಲೋಡ್ ಮಾಡಬಹುದು.

ಹಾಗೆಯೇ ಗಿಡ ನೆಡುವ ಕಾರ್ಯಕ್ರಮಗಳು, ಪರಿಸರ ಆಂದೋಲನ, ಕಾಡಿನ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಮತ್ತು ಸಭೆ ಸಮಾರಂಭಗಳ ಸುದ್ದಿಗಳನ್ನೂ ಸಾರ್ವಜನಿಕರು ಇಲ್ಲಿ ಅಪ್ ಲೋಡ್ ಮಾಡಬಹುದು.

ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಘಗಳು ಬಂಜರು ಪ್ರದೇಶ ಅಥವಾ ಅರಣ್ಯ ಪ್ರದೇಶಗಳಲ್ಲಿ ಸಸಿ ಬೆಳೆಸುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಬಹುದು.

ಯಾರು ಅತಿ ಹೆಚ್ಚು ಸಸಿಗಳನ್ನು ನೆಡುತ್ತಾರೋ ಅವರಿಗೆ ಸರ್ಕಾರ ಸೂಕ್ತ ಬಹುಮಾನ ನೀಡಲಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ಎಲ್ಲಾ ಮಾದರಿಯ ಗಿಡ ಮತ್ತು ಮರಗಳ ಮಾಹಿತಿಯನ್ನು ನೀಡಿರುವುದು  ಈ ಆ್ಯಪ್‌ನ ಇನ್ನೊಂದು ವಿಶೇಷತೆಯಾಗಿದೆ.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಗೂಗಲ್ ಪ್ಲೇಸ್ಟೋರ್:  my plant app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT