ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಕರೆ ಬಂದ್ ಮಾಡುವ ಆ್ಯಪ್

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಸೈಕಲ್, ಬೈಕ್ ಅಥವಾ ಸ್ಕೂಟರ್‌ನಲ್ಲಿ ಹೋಗುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಯುವಕರ ಹೊಸ ಫ್ಯಾಷನ್ ಆಗಿದೆ. ಈ ರೀತಿ ಮಾಡುವುದರಿಂದ ಅನಾಹುತಗಳು ಸಂಭವಿಸುವುದೇ ಹೆಚ್ಚು. 

ನೆದರ್ಲೆಂಡ್‌ನಲ್ಲಿ  ಬೈಕ್ ಅಥವಾ ಸೈಕಲ್ ಸವಾರಿ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡುತ್ತ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪುತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣಕ್ಕೆ  ಡಚ್ ಸರ್ಕಾರ ಮೊಬೈಲ್ ಕರೆಗಳನ್ನು ಬಂದ್ ಮಾಡುವ ಆ್ಯಪ್ ಅಭಿವೃದ್ಧಿಪಡಿಸಿದೆ.

ಬಳಕೆದಾರರು ಈ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಯಾಣ ಅಥವಾ ಸವಾರಿ ಮಾಡುವಾಗ ಈ ಆ್ಯಪ್ ಅನ್ನು ಅನ್ ಮೋಡ್‌ನಲ್ಲಿ ಇಟ್ಟರೆ ಸಾಕು ಅದು ಬಳಕೆದಾರರ ಒಳಬರುವ ಎಲ್ಲ ಕರೆ ಮತ್ತು ಸಂದೇಶಗಳನ್ನು ಸ್ಥಗಿತಗೊಳಿಸುತ್ತದೆ.

ಈ  ಆ್ಯಪ್ ನೆರವಿನಿಂದ  ಫೋನ್‌ನಲ್ಲಿ ಮಾತನಾಡುತ್ತ ಸವಾರಿ ಮಾಡುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಗೂಗಲ್ ಪ್ಲೇಸ್ಟೋರ್: dutch invent phone app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT