ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯೆಚ್ಚ ಕುತಂತ್ರಾಂಶ ದಾಳಿ: ಪರಿಣಾಮಗಳೇನು? ದಾಳಿ ನಡೆದರೆ ಏನು ಮಾಡಬೇಕು?

Last Updated 28 ಜೂನ್ 2017, 6:32 IST
ಅಕ್ಷರ ಗಾತ್ರ

ಬೆಂಗಳೂರು: ಯುರೋಪ್‌ನಾದ್ಯಂತ ತಲ್ಲಣವನ್ನುಂಟು ಮಾಡಿದ್ದ ಪಿಯೆಚ್ಚ ಕುತಂತ್ರಾಂಶ ಇದೀಗ ಭಾರತಕ್ಕೆ ಲಗ್ಗೆ ಇಟ್ಟಿದೆ. ಉಕ್ರೇನ್ ಮತ್ತು ರಷ್ಯಾದಲ್ಲಿ ಪಿಯೆಚ್ಚ ಕುತಂತ್ರಾಂಶ ಹಲವು ಸಂಸ್ಥೆಗಳ ಕಂಪ್ಯೂಟರ್ ಕೆಲಸಗಳನ್ನು ಬಡಮೇಲು ಮಾಡಿತ್ತು. ಸುದ್ದಿ ಮಾಧ್ಯಮಗಳ ವರದಿ ಪ್ರಕಾರ ಮುಂಬೈನ ಜವಾಹರ್ ಲಾಲ್ ನೆಹರು ಬಂದರು ಮಂಡಳಿಯ ಕಂಪ್ಯೂಟರ್‍‍ಗಳ ಮೇಲೆ ಪಿಯೆಚ್ಚ ಕುತಂತ್ರಾಂಶ ದಾಳಿ ನಡೆದಿದೆ.

ಏನಿದು ಪಿಯೆಚ್ಚ ಕುತಂತ್ರಾಂಶ?
ವನ್ನಾಕ್ರೈ ಕುತಂತ್ರಾಂಶದಂತಿರುವ ಕುತಂತ್ರಾಂಶವಾಗಿದೆ ಪಿಯೆಚ್ಚ. ಕಂಪ್ಯೂಟರ್ ಸುರಕ್ಷತಾ ಸಂಶೋಧನಾ ಸಂಸ್ಥೆ ಕೆಸ್ಪರ್ಸ್ಕಿ ಪ್ರಕಾರ ಪಿಯೆಚ್ಚ (Petya) ಕುತಂತ್ರಾಶವು  Petya.A, Petya.D, ಅಥವಾ PetrWrap ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಆದರೆ ಇದು ವನ್ನಾಕ್ರೈ ಕುತಂತ್ರಾಂಶದ್ದೇ ಭಾಗವಲ್ಲ.

ಪಿಯೆಚ್ಚ ಕುತಂತ್ರಾಂಶ ದಾಳಿ ಹೇಗಿರುತ್ತದೆ?
ವನ್ನಾಕ್ರೈ ರೀತಿಯಲ್ಲಿಯೇ ಪಿಯೆಚ್ಚ ಕುತಂತ್ರಾಶವೂ ಕಂಪ್ಯೂಟರ್‍‍ಗಳ ಮೇಲೆ ದಾಳಿ ನಡೆಸುತ್ತದೆ. ಈ ಕುತಂತ್ರಾಂಶವು ಕಂಪ್ಯೂಟರ್‍‍ನಲ್ಲಿರುವ ಕಡತಗಳನ್ನು ಲಾಕ್ ಮಾಡುತ್ತದೆ. ಲಾಕ್ ತೆರೆಯಲು 300 ಡಾಲರ್ ಬಿಟ್ ಕಾಯಿನ್‍ ನೀಡುವಂತೆ ಹ್ಯಾಕರ್‍‍ಗಳು ಬೇಡಿಕೆಯೊಡ್ಡುತ್ತಾರೆ. ವನ್ನಾಕ್ರೈ ರೀತಿಯಲ್ಲಿಯೇ ಹ್ಯಾಕರ್‍ಗಳು ಕಂಪ್ಯೂಟರ್‍‍ನಲ್ಲಿರುವ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಮಾರ್ಪಡಿಸುತ್ತಾರೆ.

ಪಿಯೆಚ್ಚ ಕುತಂತ್ರಾಂಶ ದಾಳಿ ನಡೆದರೆ, ಕಂಪ್ಯೂಟರ್ ಪರದೆಯಲ್ಲಿ “If you see this text, then your files are no longer accessible, because they are encrypted. Perhaps you are busy looking for a way to recover your files, but don’t waste your time. Nobody can recover your files without our decryption service.” - ಹೀಗೊಂದು ಸಂದೇಶ ಕಾಣುತ್ತದೆ.

ಒಂದು ವೇಳೆ ಈ ಮಾಲ್‍ವೇರ್ ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ನಡೆಸಿದ್ದರೆ ಕೆಲವು ನಿಮಿಷ ಅಥವಾ ಗಂಟೆಗಳ ನಂತರ ಸಿಸ್ಟಂ ರೀಬೂಟ್ ಆಗುತ್ತದೆ. ರೀಬೂಟ್ ಆದ ನಂತರ  ಹ್ಯಾಕರ್‍‍ಗಳ ಸಂದೇಶ ಗೋಚರಿಸುತ್ತದೆ. ರೀಬೂಟ್ ಆಗುವ ಹೊತ್ತಲ್ಲಿ ಯಾವುದೇ ಕಾರಣಕ್ಕೂ ಕಂಪ್ಯೂಟರ್‍‍ನ್ನು ಸ್ವಿಚ್ ಆಫ್ ಮಾಡುವುದು ಬೇಡ. ಹಾಗೆ ಮಾಡಿದರೆ ಕಂಪ್ಯೂಟರ್‍‍ನಲ್ಲಿರುವ ಕಡತಗಳು ಕಳೆದುಹೋಗುತ್ತವೆ.

ಹ್ಯಾಕರ್‍‌ಗಳು ಕಂಪ್ಯೂಟರ್ ಬಳಕೆದಾರರಿಂದ ಬಿಟ್ ಕಾಯಿನ್ ಮೂಲಕವೇ ಹಣ ಪಾವತಿ ಮಾಡಲು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT