ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ನಡುವೆ ನಾಟಿ ಸಂಭ್ರಮ

Last Updated 28 ಜೂನ್ 2017, 10:17 IST
ಅಕ್ಷರ ಗಾತ್ರ

ಮಂಗಳೂರು: ಹೆಚ್ಚಿನ ಪ್ರಮಾಣದ ಮಳೆ ಬೀಳುವ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ, ಎರಡು ವರ್ಷಗಳಿಂದ ಮಳೆಯ ಕೊರತೆ ಎದುರಾಗಿದೆ. ಈ ವರ್ಷವೂ ಉತ್ತಮ ಮಳೆಯಾಗುತ್ತಿದ್ದರೂ, ವಾಡಿ ಕೆಗಿಂತ ಕಡಿಮೆ ಪ್ರಮಾಣದ ಮಳೆ ಸುರಿ ದಿದೆ. ಮಳೆಯಿಂದಾಗಿ ಹಸಿಯಾಗಿರುವ ಗದ್ದೆಗಳಲ್ಲಿ ಭತ್ತದ ನೇಜಿ ನಾಟಿ ಭರ ದಿಂದ ನಡೆಯುತ್ತಿದ್ದು, ಮುಂದಿನ ಸ್ಥಿತಿ ಹೇಗೆ ಎನ್ನುವ ಆತಂಕ ಮಾತ್ರ ಮರೆಯಾಗಿಲ್ಲ.

ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯ ತೀವ್ರ ಅಭಾವ ಎದುರಾಗಿದೆ. ಶೇ 40ಕ್ಕಿಂತ ಹೆಚ್ಚು ಮಳೆಯ ಕೊರತೆ ಎದುರಾಗಿದ್ದರಿಂದ ಮಂಗಳೂರು ಹಾಗೂ ಬಂಟ್ವಾಳ ತಾಲ್ಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿವೆ. ಈ ಬಾರಿಯ ಮಳೆಯ ಆರ್ಭಟವನ್ನು ನೋಡಿದರೆ, ಉತ್ತಮ ಮಳೆಯಾಗುವ ಆಶಾಭಾವ ರೈತರದ್ದಾಗಿದೆ. ಸದ್ಯಕ್ಕೆ ಬಿದ್ದಿರುವ ಮಳೆಯ ಪ್ರಮಾಣ, ಜಿಲ್ಲೆಯ ವಾಡಿಕೆಗಿಂತ 493.4 ಮಿ.ಮೀ.ನಷ್ಟು ಮಳೆಯ ಕೊರತೆ ಎದುರಾಗಿದೆ.

ವಾಡಿಕೆಯಂತೆ ಜೂನ್‌ ತಿಂಗಳ ಲ್ಲಿಯೇ ಜಿಲ್ಲೆಯಲ್ಲಿ ಸರಾಸರಿ 941.8 ಮಿ.ಮೀ. ಮಳೆ ಆಗಬೇಕು. ಈ ಬಾರಿ 558.1 ಮಿ.ಮೀ. ಮಳೆ ಸುರಿದಿದ್ದು, ಕಳೆದ ವರ್ಷ ಇದೇ ಹೊತ್ತಿಗೆ 570 ಮಿ.ಮೀ. ಮಳೆ ದಾಖಲಾಗಿತ್ತು. ಹೀಗಾಗಿ ಎರಡೂ ವರ್ಷ ಸುಮಾರು 400 ಮಿ.ಮೀ.ನಷ್ಟು ಮಳೆಯ ಕೊರತೆ ಎದುರಾಗಿದೆ ಎಂಬುದು ಕೃಷಿ ಇಲಾ ಖೆಯ ಅಧಿಕಾರಿಗಳು ಹೇಳುವ ಮಾತು.

ಜೂನ್‌ ಮೊದಲ ವಾರದಲ್ಲಿ ಅಪಾರ ಪ್ರಮಾಣದ ಮಳೆಯಾಗಿದ್ದು, ಒಂದೇ ದಿನ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನಲ್ಲಿ 100 ಮಿ.ಮೀ. ಗೂ ಅಧಿಕ ಮಳೆ ದಾಖಲಾಗಿತ್ತು. ಆದರೆ, ದಿನ ಕಳೆದಂತೆ ಮಳೆ ಕ್ಷೀಣಿ ಸಿದ್ದು, ತಿಂಗಳಿನ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಸಂತಸದಿಂ ದಲೇ ಭತ್ತದ ನಾಟಿ ಆರಂಭಿಸಿರುವ ರೈತಾಪಿ ವರ್ಗಕ್ಕೆ, ಬರುವ ದಿನಗಳಲ್ಲಿ ಮಳೆ ಹೇಗೆ ಆಗಲಿದೆ ಎನ್ನುವ ಚಿಂತೆ ಕಾಡುತ್ತಲೇ ಇದೆ.

ಕ್ಷೀಣಿಸಿದ ಭತ್ತದ ಪ್ರಮಾಣ: ಪ್ರಕೃತಿ ವಿಕೋಪ, ಮಳೆಯ ಅಭಾವ, ಬೆಲೆ ನಷ್ಟ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಭತ್ತದ ಕ್ಷೇತ್ರದಲ್ಲಿ ಸಾಕಷ್ಟು ಕುಸಿತ ಕಾಣುತ್ತಿದೆ. ಇದೀಗ ಜಿಲ್ಲೆಯು ತೋಟ ಗಾರಿಕೆ ಕ್ಷೇತ್ರವಾಗಿ ಪರಿವರ್ತನೆ ಆಗು ತ್ತಿದೆ ಎನ್ನುವ ಮಾತು ರೈತ ಮುಖಂಡರದ್ದಾಗಿದೆ.

‘ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ ತೋಟಗಳಿವೆ. 18 ಸಾವಿರ ಹೆಕ್ಟೇರ್‌ನಲ್ಲಿ ರಬ್ಬರ್‌ ಬೆಳೆ ಇದೆ. 25 ಲಕ್ಷ ತೆಂಗಿನ ಮರಗಳಿವೆ. ಹೀಗಾಗಿ ಭತ್ತದ ಕೃಷಿ ಕ್ಷೇತ್ರ ಕೇವಲ 3 ಸಾವಿರದಿಂದ ಮೂರೂವರೆ ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿಕಿರಣ ಪುಣಚ ಹೇಳುತ್ತಾರೆ.

‘ಮಂಗಳೂರು, ಬಂಟ್ವಾಳ, ಬೆಳ್ತಂ ಗಡಿ ತಾಲ್ಲೂಕಿನಲ್ಲಿ ಅಲ್ಪಸ್ವಲ್ಪ ಭತ್ತದ ಕೃಷಿ ಇನ್ನೂ ಉಳಿದಿದೆ. ಪುತ್ತೂರು, ಸುಳ್ಯ ಭಾಗದಲ್ಲಿ ಜನರು ತೋಟಗಾರಿಕೆ ಬೆಳೆಯತ್ತ ವಾಲುತ್ತಿದ್ದಾರೆ. ಭತ್ತದ ಬಿತ್ತನೆ ಪ್ರಮಾಣ ಕಡಿಮೆ ಆಗಿರುವುದರಿಂದ, ಬಿತ್ತನೆ ಬೀಜದ ಬೇಡಿಕೆಯೂ ಕುಗ್ಗಿದೆ’ ಎನ್ನುವುದು ಅವರ ವಿವರಣೆ.

‘ಕಳೆದ ವರ್ಷವೂ ಜೂನ್‌ ತಿಂಗ ಳಲ್ಲಿ ಅಪಾರ ಪ್ರಮಾಣದ ಮಳೆ ಸುರಿ ಯಿತು. ನಂತರದ ದಿನಗಳಲ್ಲಿ ಮಳೆ ಕ್ಷೀಣಿಸಿದ್ದರಿಂದ, ಬೇಸಿಗೆಯ ಹೊತ್ತಿಗೆ ಕುಡಿಯುವ ನೀರಿಗೂ ತೊಂದರೆ ಅನು ಭವಿಸುವಂತಾಯಿತು. ಈ ವರ್ಷವೂ ಮತ್ತೆ ಅಂಥದ್ದೇ ಸ್ಥಿತಿ ಉದ್ಭವಿಸಲಿದೆ ಯೇ ಎನ್ನುವ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಕೃಷಿಕ ಹರೀಶ್‌ ಕುಮಾರ್.

* * 

ಕೃಷಿ ಇಲಾಖೆ ಅಧಿಕಾರಿಗಳು ಹಳೆಯ ಸಂಖ್ಯೆಯನ್ನೇ ಹೇಳುತ್ತಿದ್ದಾರೆ. ವಾಸ್ತವವಾಗಿ 3 ಸಾವಿರದಿಂದ ಮೂರೂವರೆ ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ.
ರವಿಕಿರಣ ಪುಣಚ
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT