ಇದರ ಜೊತೆಗೆ, ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಹಾಕುವಾಗ, ಆದಾಯ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಸುವಾಗ ಮತ್ತು ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತದ ವ್ಯವಹಾರ ನಡೆಸುವಾಗ ಆಧಾರ್ ಸಂಖ್ಯೆ ಅಥವಾ ಆಧಾರ್ ನೋಂದಣಿ ಗುರುತು ಸಂಖ್ಯೆಯನ್ನು ಉಲ್ಲೇಖಿಸುವುದೂ ಕಡ್ಡಾಯ. 2017–18ನೇ ಸಾಲಿನ ಹಣಕಾಸು ಮಸೂದೆಯಲ್ಲಿ ತೆರಿಗೆ ಪ್ರಸ್ತಾವಗಳಿಗೆ ತಿದ್ದುಪಡಿ ಮೂಲಕ ಪ್ಯಾನ್‌ಗೆ ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.