ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಮದ್ಯದ ಅಂಗಡಿಗಳಿಗೆ ಶೇ 50 ಶುಲ್ಕ ವಿನಾಯಿತಿ ಪ್ರಕಟ

Last Updated 28 ಜೂನ್ 2017, 19:54 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳಾಂತರಗೊಳ್ಳುವ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳಿಗೆ ಪರವಾನಗಿ ನವೀಕರಣ ಶುಲ್ಕದಲ್ಲಿ ಶೇ 50ರಷ್ಟು  ವಿನಾಯಿತಿ ಪ್ರಕಟಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಮೂರು ತಿಂಗಳ ಒಳಗೆ ಸ್ಥಳಾಂತರ ಮಾಡಿಕೊಳ್ಳುವ  ಸಿಎಲ್‌–2 ದರ್ಜೆಯ ಅಂಗಡಿಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಿಎಲ್‌–2 ದರ್ಜೆ ಪರವಾನಗಿ ನವೀಕ ರಣ ಶುಲ್ಕ ₹2.25 ಲಕ್ಷ ಇದ್ದು,  ಸ್ಥಳಾಂತರ ಆಗುವ ಅಂಗಡಿ ಗಳಿಗೆ ಅದರ ಲ್ಲೂ ಶೇ 50ರಷ್ಟು ವಿನಾಯಿತಿ ಸಿಗಲಿದೆ. ಸುಪ್ರೀಂ ಆದೇಶ ದಿಂದ ಮದ್ಯದಂಗಡಿ ಮಾಲೀಕರು ಕಷ್ಟಕ್ಕೆ ಸಿಲುಕಿರುವುದರಿಂದ 2017–18ನೇ ಸಾಲಿನ ನವೀಕರಣಕ್ಕೆ ಮಾತ್ರ ಈ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT