ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿ ಬೆಳಗೆರೆ ಬಂಧನ ಸದ್ಯ ಬೇಡ:ಗೃಹ ಇಲಾಖೆ

ವಿಧಾನಸಭೆ ಅಧ್ಯಕ್ಷರಿಗೆ ವರದಿ ಸಲ್ಲಿಕೆ
Last Updated 28 ಜೂನ್ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತ ರವಿ ಬೆಳಗೆರೆ ಅವರನ್ನು ಸದ್ಯಕ್ಕೆ ಬಂಧಿಸಬಾರದು’ ಎಂದು ವೈದ್ಯರು ಸಲಹೆ ನೀಡಿರು ವುದಾಗಿ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್‌ ಚಂದ್ರ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

ವಿಧಾನಸಭಾಧ್ಯಕ್ಷರ ಸೂಚನೆ ಮೇರೆಗೆ ಬುಧವಾರ ಮಧ್ಯಾಹ್ನ ಅವರ ಕಚೇರಿಗೆ ಹಾಜರಾದ ಸುಭಾಷ್‌ಚಂದ್ರ , ಪತ್ರಕರ್ತರ ಬಂಧನಕ್ಕೆ ನಡೆಸಿದ ಪ್ರಯತ್ನಗಳನ್ನು ವರದಿಯಲ್ಲಿ ವಿವರಿಸಿ ದ್ದಾರೆ ಎಂದು ಮೂಲಗಳು ಹೇಳಿವೆ.

‘ರವಿ ಬೆಳಗೆರೆಯವರನ್ನು ಈಗಿನ ಸ್ಥಿತಿಯಲ್ಲಿ ಬಂಧಿಸಿದರೆ ಆರೋಗ್ಯ ಸ್ಥಿತಿ ಬಿಗಡಾಯಿಸಬಹುದು’  ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಪತ್ರಕರ್ತರ ಬಂಧನದ ಆದೇಶ  ಪಾಲಿಸದೇ ಇರುವುದನ್ನು ಕರ್ತವ್ಯ ಲೋಪ ಎಂದು ಪರಿಗಣಿಸ ಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ಸ್ಪೀಕರ್‌ ಕಚೇರಿ  ನೀಡಿದೆ ಎಂದೂ  ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸೂಚನೆ: ಕೋಳಿವಾಡ ಅವರು ವರದಿ ಪಡೆದಿರುವ  ಬೆನ್ನಲ್ಲೇ, ರವಿ ಬೆಳಗೆರೆ ಆರೋಗ್ಯ ಸರಿ ಇಲ್ಲದಿರು ವುದರಿಂದ ಅವರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರೂ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವರದಿ: ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ಅವರನ್ನು ಭೇಟಿ ಮಾಡಿದ ಸುಭಾಷ್‌ಚಂದ್ರ ತಮ್ಮ ವರದಿ ಸಲ್ಲಿಸಿ, ಅಧ್ಯಕ್ಷರಿಗೆ ತಲುಪಿಸುವಂತೆ ಹೇಳಿದರು. ಶಾಸಕರ ವಿರುದ್ಧ ತೇಜೋವಧೆ ಮಾಡು ವ ಸುದ್ದಿ ಪ್ರಕಟಿಸಿದ ಆರೋಪದಲ್ಲಿ ‘ಹಾಯ್‌ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್‌’ ಪತ್ರಿಕೆ ಸಂಪಾದಕ ಅನಿಲ್‌ ರಾಜ್‌ ಅವರಿಗೆ ಹಕ್ಕು ಬಾಧ್ಯತಾ ಸಮಿತಿ ಒಂದು ವರ್ಷ ಜೈಲು ಮತ್ತು ₹ 10 ಸಾವಿರ ದಂಡ ವಿಧಿಸುವಂತೆ ಶಿಫಾರಸು ಮಾಡಿತ್ತು. ಅದನ್ನು ಸದನ ಒಪ್ಪಿಕೊಂಡಿದೆ.

ಆದರೆ, ಶಿಕ್ಷೆ ಜಾರಿಯಾಗದ ಕುರಿತು ಗೃಹ ಇಲಾಖೆಯಿಂದ ವರದಿ ಪಡೆಯು ವಂತೆ ಸಭಾಧ್ಯಕ್ಷ ಕೋಳಿವಾಡ ನೀಡಿರು ವ ಸೂಚನೆ ಅನ್ವಯ ಸುಭಾಷ್‌ ಚಂದ್ರ ಅವರಿಗೆ ಮೂರ್ತಿ ಮಂಗಳವಾರ ಪತ್ರ ಬರೆದಿದ್ದರು.

ಪತ್ರಿಕಾ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್‌ ಬದ್ಧ: ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತ ನಾಡಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ‘ಕಾಂಗ್ರೆಸ್ ಯಾವತ್ತೂ ಪತ್ರಕರ್ತರ ಪರವಾಗಿರುವ ಪಕ್ಷ. ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುವುದನ್ನು ಖಂಡಿಸುತ್ತದೆ’ಎಂದರು. ಸಭಾಧ್ಯಕ್ಷರು ನೀಡಿದ ಆದೇಶ ಕುರಿತು ಮುಖ್ಯಮಂತ್ರಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು.

ಆರೋಗ್ಯದಲ್ಲಿ ಚೇತರಿಕೆ
ಹುಬ್ಬಳ್ಳಿ:
ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ರವಿ ಬೆಳಗೆರೆ ಆರೋಗ್ಯದಲ್ಲಿ ಬುಧವಾರ ಚೇತರಿಕೆ ಕಂಡು ಬಂದಿದೆ. ‘ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದೇನೆ. ಕೋರ್ಟ್‌ ಆದೇಶವನ್ನು ಎದುರು ನೋಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT