ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಮನೆ ರಕ್ಷಿಸಿ

Last Updated 29 ಜೂನ್ 2017, 19:30 IST
ಅಕ್ಷರ ಗಾತ್ರ

ಮಳೆಗಾಲ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಪ್ರಯತ್ನ ಆರಂಭವಾಗಿವೆ.  ಮೇಲ್ಚಾವಣಿ, ವಿದ್ಯುತ್‌ ಉಪಕರಣ, ಪೈಪ್‌ಲೈನ್‌ ಸಮಸ್ಯೆ ಸೇರಿದಂತೆ ಮನೆಯೊಳಗೆ ನೀರು ನುಗ್ಗದಂತೆ ನೋಡಿಕೊಳ್ಳುವುದು ಅಗತ್ಯ. ಮಳೆಗಾಲಕ್ಕೆ ಮನೆಯನ್ನು ಹೇಗೆ ಸಜ್ಜುಗೊಳಿಸುವುದು ಹೇಗೆ ಎಂಬುದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

* ತಾರಸಿಯ ಸ್ಥಿತಿ ಅವಲೋಕಿಸಿ. ಕಸ ಗುಡಿಸಿ ಸ್ವಚ್ಛಗೊಳಿಸಿ. ಪೈಪಲೈನ್‌ನ ಸಂಧಿಯಲ್ಲಿ ಕಸ ಸೇರಿಕೊಂಡಿದೆಯೇ ಎಂಬುದನ್ನು ಗಮನಿಸಿ. ತಾರಸಿ ಮೇಲೆ ಅನಗತ್ಯ ವಸ್ತುಗಳನ್ನು ಇರಿಸಿದ್ದರೆ ಅದನ್ನು ವಿಲೇವಾರಿ ಮಾಡಿ.

* ಹಂಚಿನ ಮನೆಯಾದರೆ ಹಂಚು ಬಿರುಕು ಬಿಟ್ಟಿದೆಯೇ ಎಂಬುದನ್ನು  ನೋಡಿ ಸರಿಪಡಿಸಿಕೊಳ್ಳಿ.

* ಚಾವಣಿಯ ಬಿರುಕುಗಳನ್ನು ಮುಚ್ಚಲು ರಿಪೇರಿ ಮಾಡಿದ ನಂತರ ಜಲನಿರೋಧಕ ಪೇಂಟ್ ಉಳಿಸಿ.

* ಮಳೆ ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿಕೊಡಿ. ಚಾವಣಿಗೆ ಪೈಪ್ ಅಳವಡಿಸಿ ನೀರು ಹರಿದು ಹೋಗಲು ಬಿಡಿ.

* ಮಳೆ ಪ್ರಾರಂಭವಾದ ಮೇಲೆ ತಾರಸಿಗೆ ಆಗಾಗ ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿರಿ. ಇಲ್ಲದಿದ್ದರೆ ಪಾಚಿ ಕಟ್ಟುವ ಸಾಧ್ಯತೆ ಹೆಚ್ಚು.

* ಮನೆಯ ಅಕ್ಕಪಕ್ಕದಲ್ಲಿ ಮರ, ಗಿಡಗಳಿದ್ದರೆ ಅವುಗಳ ರೆಂಬೆ–ಕೊಂಬೆಗಳನ್ನು ಕತ್ತರಿಸಿ. ಗಾಳಿ ಬಂದಾಗ ಮನೆಯ ಮೇಲೆ ಬಿದ್ದೀತು.

* ಮನೆಯ ಸಮೀಪದಲ್ಲಿನ ವಿದ್ಯುತ್‌ ವೈರ್‌ಗಳ ಮೇಲೆ ಮರದ ರೆಂಬೆ ಹಾದು ಹೋಗಿದ್ದರೆ ಅದನ್ನು ಕತ್ತರಿಸಿ. ಇಲ್ಲದಿದ್ದರೆ ಅದು ವೈರ್‌ನೊಂದಿಗೆ ಮನೆಯ ಮೇಲೆ ಬಿದ್ದು ಅನಾಹುತಗಳಿಗೆ ಎಡೆ ಮಾಡಿಕೊಡಬಹುದು.

* ಮಳೆಗಾಲದಲ್ಲಿ ಮನೆಯನ್ನು ಆದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ತಿಗಣೆ, ಜಿರಳೆಗಳು ಹೆಚ್ಚುವ ಸಾಧ್ಯತೆ ಇದೆ.

* ಗೋಡೆಗಳ ಬಣ್ಣ ಮಾಸಿದ್ದರೆ, ಗಾರೆ ಕಿತ್ತು ಹೋಗಿದ್ದರೆ, ಗೋಡೆಯಲ್ಲಿ ಸೀಳು ಬಿದ್ದಿದ್ದರೆ, ತಾರಸಿಯಲ್ಲಿನ ಕಾಂಕ್ರಿಟ್ ಎದ್ದಿದ್ದರೆ ನಿರ್ಲಕ್ಷ್ಯ ಮಾಡಬೇಡಿ. 

* ಮನೆಯ ಎದುರುಗಡೆ ಚರಂಡಿ ಇದ್ದರೆ ನೀರು ಸರಾಗವಾಗಿ ಹರಿಯುತ್ತಿದ್ದೆಯಾ, ಎಲ್ಲಿಯಾದರೂ ಕಸ– ಹೂಳು ಸಿಕ್ಕಿ ಹಾಕಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಿ. ಇಲ್ಲದಿದ್ದರೆ ಕೊಳಚೆ ನೀರು ಮನೆಯೊಳಗೆ ಹರಿದು ಬರುವ ಅಪಾಯ ಇದೆ.

* ಮಳೆನೀರು ಸಂಗ್ರಹದಂಥ ನೀರು ಸಂರಕ್ಷಣೆಯ ಹಾದಿಯನ್ನು ಕಂಡುಕೊಳ್ಳಿ, ಇದರಿಂದ ಮಳೆನೀರು ವ್ಯರ್ಥವಾಗುವುದನ್ನು ತಡೆಯಬಹುದು.

* ಮನೆಯ ಹೊರ ಮೂಲೆಗಳನ್ನೂ ಆಗಾಗ ಪರಿಶೀಲಿಸಿ. ಅಲ್ಲಿ ತೂತುಗಳಾಗಿ ಮನೆಯೊಳಗೆ ನೀರು ತುಂಬಿಕೊಳ್ಳುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಮಳೆ ಬೀಳುವ ಮೊದಲೇ ಅದನ್ನು ಪರಿಶೀಲಿಸಿ ತೂತನ್ನು ಮುಚ್ಚಿ.

* ಮಳೆಗಾಲದಲ್ಲಿ ಬೆಡ್‌ಶೀಟ್‌ಗಳನ್ನು ತೊಳೆದರೂ, ಒಣಗಿಸಲು ಜಾಗವಿರುವುದಿಲ್ಲ. ಇದರಿಂದ ಅದು ಗಬ್ಬು ವಾಸನೆ ಬರುತ್ತದೆ. ಇದನ್ನು ತಡೆಯಲು ಅದನ್ನು ಪಾಲಿಥಿನ್‌ ಶೀಟ್‌ಗಳಲ್ಲಿ ಸುತ್ತಿಡಿ. 

* ಮನೆಯ ಹೊರಗಡೆ ಅಂದರೆ ನೀರು ಬೀಳುವ ಜಾಗಗಳಲ್ಲಿ ಟೈರ್, ತೆಂಗಿನಚಿಪ್ಪಿನಂತಹ ನೀರು ನಿಲ್ಲುವ ವಸ್ತುಗಳನ್ನು ಇರಿಸಬೇಡಿ. ಇದರಿಂದ   ನಿಂತ ನೀರಿನಲ್ಲಿ ಕ್ರಿಮಿ– ಕೀಟಗಳು ಉತ್ಪತ್ತಿಯಾಗಿ ಕಾಯಿಲೆ ಬರಬಹುದು.

* ಮನೆಯ ಕೈತೋಟದಲ್ಲಿ ಪೀಠೋಪಕರಣಗಳಿದ್ದರೆ ಮಳೆ ಆರಂಭವಾಗುವ ಮೊದಲೇ ಅವುಗಳನ್ನು ರಕ್ಷಿಸುವ ದಾರಿಯನ್ನು ಕಂಡುಕೊಳ್ಳಿ. ಇಲ್ಲದಿದ್ದರೆ ಮಳೆ ನೀರು ಬಿದ್ದು ಅವುಗಳು ಬಣ್ಣ ಕಳೆದುಕೊಳ್ಳುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT