ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಗಳಿಂದ ಗಿಡಗಳಿಗೆ ಮುಕ್ತಿ ನೀಡಿ

Last Updated 29 ಜೂನ್ 2017, 19:30 IST
ಅಕ್ಷರ ಗಾತ್ರ

ಕೈತೋಟವನ್ನು ಎಷ್ಟೇ ಕಾಳಜಿಯಿಂದ ನೋಡಿಕೊಂಡರೂ ಕೆಲವೊಮ್ಮೆ ಗಿಡಗಳಿಗೆ ರೋಗ ತಗಲುತ್ತದೆ. ಇದು ಕೈತೋಟ ಬೆಳೆಸುವ ಆಸೆಯನ್ನು ಮಂಕಾಗಿಸುತ್ತದೆ. ಆದರೆ  ಮನೆಯಲ್ಲಿಯೇ ಔಷಧಿ ತಯಾರಿಸುವ ಮೂಲಕ ಗಿಡಗಳನ್ನು ನಳನಳಿಸುವಂತೆ ಮಾಡಬಹುದು.

* ಗಿಡಗಳಿಗೆ ಅಂಟಿರುವ ಬಿಳಿ ಫಂಗಸ್‌, ಕೀಟಗಳ ಬಾಧೆ ಕಾಡಿದಾಗ ಬೇರು ಸಹಿತ ಗಿಡಗಳನ್ನು ಹೊರಗೆ ತೆಗೆಯಬೇಕು. ಬಳಿಕ ಕುಂಡದ ಮಣ್ಣು ಬದಲಿಸಬೇಕು. ಇಲ್ಲವೇ ಮಣ್ಣಿನ ಎರಡು ಇಂಚು ಅಗೆದು ತೆಗೆದು ಅಲ್ಲಿ ಹೊಸ ಮಣ್ಣನ್ನು ಹಾಕಬೇಕು.
* ತಿಳಿ ಮಜ್ಜಿಗೆಗೆ ಉಪ್ಪು ಸೇರಿಸಿ ಗಿಡಕ್ಕೆ ಸಿಂಪಡಿಸಿದರೂ ಕೀಟಗಳ ತೊಂದರೆ ತಪ್ಪಿಸಬಹುದು. 
* ಹಸುವಿನ ಗಂಜಲ, ಸೆಗಣಿ ಮತ್ತು ಬೇವಿನ ಸೊಪ್ಪಿನ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಿದರೆ ಕ್ರಿಮಿಗಳು ಸಾಯುತ್ತವೆ.
* ಗಿಡಗಳಿಗೆ ಶಿಲೀಂಧ್ರ ಸೋಂಕು ಉಂಟಾಗಿದ್ದರೆ ಚಹಾ ಕಷಾಯ ಮಾಡಿ ಹಾಕಬಹುದು. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಗಿಡ ಸೊಂಪಾಗಿ ಬೆಳೆಯುತ್ತದೆ.
* ಗಿಡಗಳ ಮಧ್ಯೆ ಕಳೆ ಬೆಳೆದಿದ್ದರೆ ಅದಕ್ಕೆ ವಿನಿಗರ್‌ ಸಿಂಪಡಿಸಿ. ಇದರಿಂದ ಕಳೆಗಳು ಬೇಗ ಸಾಯುತ್ತವೆ.
* ಕೈತೋಟದಲ್ಲಿ ಇರುವೆಗಳ ಗೂಡು ಇದ್ದರೆ ಸಮಪ್ರಮಾಣದಲ್ಲಿ ನೀರು ಮತ್ತು ವಿನಿಗರ್‌ ಮಿಶ್ರಣ ಸಿಂಪಡಿಸಿ. ಮತ್ತೆ ಇರುವೆಗಳು ಬಂದರೆ ಕೇಳಿ.
* ಪುದೀನಾ ಎಲೆಗಳ ರಸವನ್ನು ಗಿಡಗಳ ಅಕ್ಕಪಕ್ಕ ಚಿಮುಕಿಸಿದರೆ ಅಲ್ಲಿಗೆ ಇರುವೆಗಳು ಬರುವುದಿಲ್ಲ.
* ಹಸಿಮೆಣಸು, ಬೆಳ್ಳುಳ್ಳಿ, ಆಲೊವೆರಾ ದಿಂದ ಮನೆಯಲ್ಲಿಯೇ ತಯಾರಿಸಿದ ಔಷಧಿಯನ್ನು ಸಿಂಪಡಿಸುವುದರಿಂದ ಕ್ರಿಮಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
* ಮನೆಯ ಸುತ್ತಮುತ್ತ ಹಸಿರು ಗಿಡಗಳಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುವ ಸಂಭವವಿರುತ್ತದೆ. ಇವುಗಳ ನಿರ್ಮೂಲನೆಗೆ ಗಿಡಗಳ ಸುತ್ತ ಬೇವಿನ ಸೊಪ್ಪಿನ ರಸವನ್ನು ಸಿಂಪಡಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT