ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಸಾಂಖ್ಯಿಕ ಇಲಾಖೆ ಅಗತ್ಯ

ಸಾಂಖ್ಯಿಕ ದಿನಾಚರಣೆಯಲ್ಲಿ ಕೆ. ಹರೀಶ್‌ಕುಮಾರ್‌ ಅಭಿಪ್ರಾಯ
Last Updated 30 ಜೂನ್ 2017, 4:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಂಖ್ಯಾ ಸಂಗ್ರಹಣಾ ಇಲಾಖೆ ವಿವಿಧ ಇಲಾಖೆಗಳ ವಾರ್ಷಿಕ ಮಾಹಿತಿ ಸಂಗ್ರಹಣೆ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ ಕುಮಾರ್‌ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ರುವ ಕೆಡಿಪಿ ಸಭಾಂಗಣದಲ್ಲಿ ಗುರುವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾ ಲಯ ಬೆಂಗಳೂರು ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯಿಂದ ಪ್ರೊ.ಪಿ.ಸಿ. ಮಹಾಲನೋಬಿಸ್‌ ಜನ್ಮದಿನಾಚರಣೆ ಹಾಗೂ 11ನೇ ಸಾಂಖ್ಯಿಕ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣ ಹಾಗೂ ತ್ರೈಮಾಸಿಕ ಪ್ರಗತಿ ಪರಿಶೀಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ವಿಚಾರದ ಬಗ್ಗೆ ಮಾಹಿತಿ ನೀಡುವಾಗ ಹಾಗೂ ಲೇಖನ ಬರೆಯು ವಾಗ ಅಂಕಿ–ಅಂಶಗಳಿದ್ದರೆ ಅದಕ್ಕೆ ಹೆಚ್ಚಿನ ಮನ್ನಣೆ. ಆದರೆ, ಆ ಅಂಕಿ ಅಂಶ ಸೇರಿಸುವಾಗ ಆಲೋಚಿಸಿ ಸೇರಿಸಬೇಕು. ಇದಕ್ಕೆ ಸಂಬಂಧಿಸಿದಂತಹ ಮಾರ್ಗ ಸೂಚಿ ಅನುಸರಿಸಬೇಕು ಎಂದರು.

ಸರ್ಕಾರ ಅಭಿವೃದ್ಧಿ ಹಾದಿಯಲ್ಲಿ ಹೋಗುತ್ತಿದೆ ಎಂದು ತಿಳಿಯಲು ಸಾಂಖ್ಯಿಕ ಇಲಾಖೆ ಮಾರ್ಗಸೂಚಿ ಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿ ನಿಧಿಗಳು ಜನರಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಲು ಹಾಗೂ ಆ ಯೋಜನೆಯಲ್ಲಿನ ನ್ಯೂನತೆಯನ್ನು ಸರಿಪಡಿಸಿ ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಸಾಂಖ್ಯಿಕ ಇಲಾಖೆ ಸಹಕಾರಿ ಯಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಮನುಷ್ಯನ ಹುಟ್ಟಿ ನಿಂದಲೇ ಅಂಕಿ ಅಂಶಗಳ ಲೆಕ್ಕಾಚಾರ ಪ್ರಾರಂಭವಾಗುತ್ತದೆ. ಬಳಿಕ ಜಗತ್ತಿನ ಎಲ್ಲ ವಹಿವಾಟಿಗೂ ವ್ಯಾಪಿಸುತ್ತದೆ. ಎಲ್ಲ ಕ್ಷೇತ್ರಕ್ಕೂ ಅಂಕಿ ಅಂಶ ಅವಶ್ಯಕವಾಗಿದೆ ಎಂದು ತಿಳಿಸಿದರು.

ಆಡಳಿತದಲ್ಲಿ, ಖಾಸಗಿ ಕಂಪೆನಿಗಳಲ್ಲಿ ಲಾಭ, ನಷ್ಟಗಳ ಲೆಕ್ಕಾಚಾರಕ್ಕೆ ಅಂಕಿ–ಅಂಶ ಅಗತ್ಯವಾಗಿದೆ. ಅಂಕಿ ಅಂಶ ಇಲ್ಲದ ಯೋಜನಾ ಕಾರ್ಯಕ್ರಮವೂ ಇರುವುದಿಲ್ಲ ಎಂದರು.

ಈ ವೇಳೆ ಸಾಂಖ್ಯಿಕ ಇಲಾಖೆಯಿಂದ ಇತ್ತೀಚೆಗೆ ನಗರದ ಜೆಎಸ್‌ಎಸ್‌ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸ ಲಾಯಿತು. ಬಳಿಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳಿಗೆ ಸ್ಕೂಲ್‌ಬ್ಯಾಗ್‌ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿ ಕಾರಿ ಎಂ. ಮಾದೇಶು, ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲೇಶ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜು, ಬೆಂಗಳೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಂಖ್ಯಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ. ರವೀಂದ್ರ ನಾಯ್ಕ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿ ಕಾರಿ ಎನ್‌. ಕೃಷ್ಣಮೂರ್ತಿ, ಪ್ರಥಮ ದರ್ಜೆ ಸಹಾಯಕಿ ಆರ್. ರೇವತಿ ಹಾಜರಿದ್ದರು.

**

ಸಾಂಖ್ಯಿಕ ಇಲಾಖೆಯು ಜನ ಜೀವನ, ದೇಶ ಹಾಗೂ ರಾಜ್ಯದ ಯೋಜನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದ್ದು, ದೇಶದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡುತ್ತಿದೆ.
-ಡಾ.ಕೆ.ಹರೀಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT