ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟದತ್ತ ಭಕ್ತರ ದಂಡು

ಆಷಾಢ ಶುಕ್ರವಾರ; 20 ಸಾವಿರ ಖರ್ಜೂರ ಹೋಳಿಗೆ, 10 ಸಾವಿರ ಲಾಡು
Last Updated 30 ಜೂನ್ 2017, 4:14 IST
ಅಕ್ಷರ ಗಾತ್ರ

ಮೈಸೂರು: ಮೊದಲ ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟ ಸಜ್ಜು ಗೊಂಡಿದೆ. ಸುಮಾರು ಒಂದು ಲಕ್ಷ ಭಕ್ತರು ದೇವಿಯ ದರ್ಶನ ಪಡೆಯಲಿದ್ದು, ಸರತಿ ಸಾಲಿನಲ್ಲಿ ಬರಲು ಬ್ಯಾರಿಕೇಡ್ ಹಾಕಲಾಗಿದೆ.

ವಾಹನಗಳ ದಟ್ಟಣೆ ತಡೆಯಲು ಗುರುವಾರ ರಾತ್ರಿಯಿಂದಲೇ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಖಾಸಗಿ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್ ಬಳಿ ನಿಲಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಂದ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ದೇವ ಸ್ಥಾನಕ್ಕೆ ತೆರಳಬಹುದು. ಬೆಳಗಿನ ಜಾವ 3ರಿಂದ ಬಸ್‌ಗಳ ಸಂಚಾರ ಆರಂಭ ವಾಗಲಿದ್ದು, ರಾತ್ರಿ 9 ಗಂಟೆಯವರೆಗೂ ಇರುತ್ತದೆ.

ಇದು ಬೆಟ್ಟದಲ್ಲಿನ ವ್ಯವಸ್ಥೆಯಾದರೆ, ಇನ್ನು ಭಕ್ತರು ಶುಕ್ರವಾರ ಬೆಳಗಿನ ಜಾವಕ್ಕಾಗಿ ಕಾಯುತ್ತಿದ್ದಾರೆ. ರಾತ್ರಿ 2 ಗಂಟೆಗೇ ಎದ್ದು ಬೆಳಗಿನ ಜಾವ ಹೆಲಿಪ್ಯಾಡ್‌ ಬಳಿಯಿಂದ ಬಸ್‌ ಹತ್ತಿ ಬೆಟ್ಟದಲ್ಲಿರಲು ಹವಣಿಸುತ್ತಿದ್ದಾರೆ.

20 ಸಾವಿರ ಹೋಳಿಗೆ, 10 ಸಾವಿರ ಲಾಡು:  ನಗರದ ನೂರಡಿ ರಸ್ತೆಯ ಚಾಮುಂಡೇಶ್ವರಿ ಸೇವಾ ಸಮಿತಿ ವತಿ ಯಿಂದ 20 ಸಾವಿರ ಖರ್ಜೂರ ಹೋಳಿಗೆ ಹಾಗೂ 10 ಸಾವಿರ ಲಾಡು ಶುಕ್ರವಾರದ ಅನ್ನಸಂತರ್ಪಣೆಯಲ್ಲಿ ಬಳಕೆಯಾಗಲಿವೆ.

‘11 ವರ್ಷಗಳಿಂದ ಅನ್ನಸಂತರ್ಪಣೆ ಏರ್ಪಡಿಸುತ್ತಿದ್ದೇವೆ. 14 ವರ್ಷಗಳಿಂದ ಸಿಹಿ ವಿತರಿಸುತ್ತಿದ್ದೇವೆ. 28 ವರ್ಷಗಳಿಂದ ದೇವಸ್ಥಾನದಲ್ಲಿ ಹೂವು ಹಾಗೂ ಹಣ್ಣಿನ ಅಲಂಕಾರ ಮಾಡುತ್ತಿ ದ್ದೇವೆ’ ಎಂದು ಚಾಮುಂಡೇಶ್ವರಿ ಸೇವಾ ಸಮಿತಿ ಟ್ರಸ್ಟಿ ಎಸ್‌.ವಿ.ನಾಗೇಶ್ ಸ್ಮರಿಸಿದರು.

300 ಕೆ.ಜಿ ಖರ್ಜೂರ, 300 ಕೆ.ಜಿ ಸಕ್ಕರೆ, 10 ಕೆ.ಜಿ ಮೈದಾ, ಒಂದು ಟಿನ್‌ ಅಡುಗೆ ಎಣ್ಣೆ, 120 ಕೆ.ಜಿ ಕಡ್ಲೆಹಿಟ್ಟು, 250 ಕೆ.ಜಿ ಕೊಬ್ಬರಿಪುಡಿ ಬಳಸಿ ಸೋಮವಾರ ಸಂಜೆಯಿಂದ ಆರಂಭ ಗೊಂಡ ಹೋಳಿಗೆ ತಯಾರಿ ಕಾರ್ಯ ಬುಧವಾರ ರಾತ್ರಿಯವರೆಗೂ ಮುಂದುವರಿಯಿತು. ಇದಕ್ಕಾಗಿ 35 ಕೆಲಸಗಾರರು ದುಡಿದಿದ್ದಾರೆ.

200 ಕೆ.ಜಿ ಕಡ್ಲೆಹಿಟ್ಟು, 5 ಕೆ.ಜಿ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಬಳಸಿ 10 ಸಾವಿರ ಲಾಡು ತಯಾ ರಿಸಲಾಗಿದೆ. ಈ ಎರಡೂ ಸಿಹಿತಿಂಡಿಗಳ ಪ್ರಾಯೋಜಕತ್ವವನ್ನು ಅರುಣಕುಮಾರ್‌ ಜೈನ್‌ ಹಾಗೂ ಅವರ ಮಿತ್ರರು ವಹಿಸಿ ಕೊಂಡಿದ್ದಾರೆ.

ಹೋಳಿಗೆ, ಲಾಡುಗಳನ್ನು ದೇವಸ್ಥಾನದ ಪಕ್ಕದಲ್ಲಿ ಹಾಕಿರುವ ದೊಡ್ಡ ಪೆಂಡಾಲಿನಲ್ಲಿ ಸಮಿತಿ ಅಧ್ಯಕ್ಷ ಎಸ್‌ಎಎಲ್‌ ರಾಜು ಹಾಗೂ ಖಜಾಂಚಿ ಸ್ವಾಮಿನಾಥನ್‌ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಅನ್ನ ಸಂತರ್ಪಣೆಯಲ್ಲಿ ಬಡಿಸಲಾ ಗು ವುದು. ಜತೆಗೆ, ಎರಡು ಪಲ್ಯ, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಅನ್ನ ಸಾಂಬಾರು, ರಸಂ, ಮೊಸರು ಇರುತ್ತದೆ. ಅನ್ನಸಂತರ್ಪಣೆಗೆ ದಾನಿಗಳು ನೀಡಿ ರುವ 100 ಕ್ವಿಂಟಲ್‌ ಅಕ್ಕಿ ಜತೆಗೆ, ಸಮಿತಿಯ 26 ಕ್ವಿಂಟಲ್ ಅಕ್ಕಿ ಬಳಸಲಿದೆ.  ಬೆಟ್ಟದ ಬಸ್‌ ನಿಲ್ದಾಣದ ಎದುರು ವಾಹನ ನಿಲ್ಲಿಸುವ ಸ್ಥಳದಲ್ಲಿ ವಿವಿಧ ಭಕ್ತರ ತಂಡ ಆಹಾರ ವಿತರಿಸಲಿವೆ.

ಆಹಾರ ವಿತರಿಸಲು ಗುರುವಾರ ಸಂಜೆ 6ರ ವರೆಗೆ ಪರವಾನಗಿ ಪಡೆದಿದ್ದ ತಂಡಗಳ ಸಂಖ್ಯೆ 30.

*

ಸೇಬು, ಮೂಸಂಬಿ, ದ್ರಾಕ್ಷಿ ಅಲಂಕಾರ

ಮೊದಲ ಆಷಾಢ ಶುಕ್ರವಾರಕ್ಕೆ ಚಾಮುಂಡೇಶ್ವರಿ ಸೇವಾ ಸಮಿತಿಯು ದೇವಸ್ಥಾನವನ್ನು ಅಲಂಕಾರ ಗೊಳಿಸಿದೆ. ತಲಾ 100 ಕೆ.ಜಿ ಸೇಬು, ಮೂಸಂಬಿ, ದ್ರಾಕ್ಷಿಯನ್ನು ಬಳಸ ಲಾಗಿದೆ. ಅಲ್ಲದೆ, ತಲಾ 250 ಕೆ.ಜಿ ಸೇವಂತಿಗೆ, ಮಲ್ಲಿಗೆ, ಡೇರೆ ಹೂವು ಗಳ ಮೂಲಕ ಗರ್ಭಗುಡಿಯಿಂದ ಮುಖ್ಯದ್ವಾರವನ್ನು ಅಲಂಕಾರಗೊಂಡಿದೆ.

‘ಅಲಂಕಾರಗೊಳಿಸಲು 32 ಕೆಲಸಗಾರರನ್ನು ತಮಿಳುನಾಡಿನ ಈರೋಡಿನಿಂದ ಆಹ್ವಾನಿಸಿದ್ದೇವೆ. ಹೂವು ಕಟ್ಟುವಲ್ಲಿ ಅವರು ನಿಪು ಣರು’ ಎಂದು ಸೇವಾ ಸಮಿತಿಯ ಟ್ರಸ್ಟಿ ಎಸ್‌.ವಿ.ನಾಗೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT