ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್ ಸೇರ್ಪಡೆ; ಒಮ್ಮತ ಮೂಡಿಸಲು ಯತ್ನ

ಹುಣಸೂರಿನಲ್ಲಿ ಪಕ್ಷದ ಉಭಯ ಬಣಗಳ ಮುಖಂಡರೊಂದಿಗೆ ಎಚ್.ಡಿ.ದೇವೇಗೌಡ ಚರ್ಚೆ
Last Updated 30 ಜೂನ್ 2017, 4:41 IST
ಅಕ್ಷರ ಗಾತ್ರ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿನ ಎರಡು ಬಣಗಳ ಜತೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಗುರುವಾರ ಚರ್ಚೆ ನಡೆಸಿದರು.

ಒಂದು ಗುಂಪು ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರ ಪರವಾಗಿ, ಮತ್ತೊಂದು ಗುಂಪು ಜಿ.ಟಿ.ದೇವೇಗೌಡ ಕುಟುಂಬದವರ ಪರವಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಲಾಬಿ ನಡೆಸಿತ್ತು.

ಎರಡೂ ಬಣದ ಪ್ರಮುಖರೊಂದಿಗೆ ಮಾತನಾಡಿದ ಎಚ್.ಡಿ.ದೇವೇಗೌಡ, ಸದ್ಯ ಈ ಇಬ್ಬರು ನಾಯಕರ ಬದಲಿಗೆ ಕುರುಬ ಸಮುದಾಯದ ವಿಶ್ವನಾಥ್ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಜೆಡಿ ಎಸ್‌ಗೆ ಆಗುವ ಲಾಭದ ಕುರಿತು ಮನ ವರಿಕೆ ಮಾಡಿಸುವ ಪ್ರಯತ್ನ ನಡೆಸಿದರು.

ದೇವೇಗೌಡರೇ ಬಂದು ಕೇಳುವಾಗ ಇಲ್ಲ ಎನ್ನಲು ಆದೀತೆ’ ಎಂಬ ಅಭಿ ಪ್ರಾಯವನ್ನು ಪ್ರಮುಖರು ವ್ಯಕ್ತಪಡಿ ಸಿದ್ದು, ಜುಲೈ 4ರಂದು ಬೆಂಗಳೂರಿ ನಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ವಿಶ್ವನಾಥ್ ಪರವಾಗಿ ಪ್ರಚಾರಕ್ಕೆ ಇಳಿಯಲು ಸಮ್ಮತಿಸಿದರು ಎನ್ನಲಾಗಿದೆ.

ಪಕ್ಷಕ್ಕೆ ಸೇರ್ಪಡೆಯಾದ ನಂತರ 15 ದಿನಗಳಲ್ಲಿ ಹುಣಸೂರಿನಲ್ಲಿ ಸಾರ್ವಜನಿ ಕರ ಬೃಹತ್ ಸಭೆ ಕರೆದು ವಿಶ್ವನಾಥ್ ಅವರನ್ನು ಅಭ್ಯರ್ಥಿಯನ್ನಾಗಿಸುವ ಅನಿ ವಾರ್ಯತೆ ಕುರಿತು ಎಚ್.ಡಿ. ಕುಮಾರಸ್ವಾಮಿ ವಿವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕಾರ್ಯಕರ್ತರ ಅಭಿಪ್ರಾಯ ಅಂತಿಮ’
ಹುಣಸೂರು:
ವಿಶ್ವನಾಥ್‌ ಅವರು ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಪ್ರತಿನಿಧಿಸಲಿದ್ದಾರೆ ಎಂಬ ಆತಂಕ, ಗೊಂದಲ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಕಾರ್ಯಕರ್ತರು ಗೊಂದಲ ತೆಗೆದುಹಾಕಿ ಪಕ್ಷ ಗೆಲ್ಲಿಸುವ ದಿಕ್ಕಿನಲ್ಲಿ ಚಿಂತಿಸಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಗಾಗಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಇದೇ ವೇಳೆ ಅವರು ಕಾರ್ಯಕರ್ತರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸದ ಹೊರತು ವಿಶ್ವನಾಥ್‌ ಸೇರ್ಪಡೆಗೆ ಹಸಿರು ನಿಶಾನೆ ತೋರಿಸು ವುದಿಲ್ಲ ಅವರು ಸ್ಪಷ್ಟಪಡಿಸಿದರು.

**

‘ವಿಶ್ವನಾಥ್‌ ಬರುವುದಾದರೆ ಸಂತೋಷ’

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಅಡಗೂರು ಎಚ್.ವಿಶ್ವನಾಥ್ ಜೆಡಿಎಸ್‌ಗೆ ಬರುವುದಾದರೆ ಸಂತೋಷ. ಪಕ್ಷ ಅವರನ್ನು ಬರಮಾಡಿಕೊಳ್ಳಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ ನಿವಾಸಕ್ಕೆ ಗುರು ವಾರ ಭೇಟಿ ನೀಡಿದ ಅವರು, ಸುದ್ದಿ ಗಾರರೊಂದಿಗೆ ಮಾತನಾಡಿದರು.ಪ

ಕ್ಕೆ ಬಂದರೆ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ದೇವೇಗೌಡ, ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.

ದೇವೇಗೌಡ ಜತೆ ವಿಶ್ವನಾಥ್ ಚರ್ಚೆ: ಹುಣಸೂರಿನಲ್ಲಿ ಕಾರ್ಯಕರ್ತರ ಸಭೆ ಮುಗಿಸಿ ರಂಗಪ್ಪ ಅವರ ನಿವಾಸಕ್ಕೆ ವಾಪಸಾದ ದೇವೇಗೌಡ ಅವರನ್ನು ವಿಶ್ವನಾಥ್ ಭೇಟಿ ಮಾಡಿದರು. ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದರು.

**

ಹುಣಸೂರು ಕ್ಷೇತ್ರದ ಅಭ್ಯರ್ಥಿ ಕುರಿತು ಊಹಾಪೋಹ ಸೃಷ್ಟಿಸ ಲಾಗಿದೆ. ನಾನು ಕೂಡ ಒಂದು ಹಂತ ದಲ್ಲಿ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಆದರೆ, ಈಗ ಎಚ್‌.ಡಿ.ಕೋಟೆಗೆ ಸೀಮಿತನಾಗಿದ್ದೇನೆ
-ಚಿಕ್ಕಮಾದು,
ಶಾಸಕ

**

ಪಕ್ಷದಿಂದ ಯಾರಿಗೇ ಟಿಕೆಟ್‌ ನೀಡಲಿ, ನಮ್ಮ ಕುಟುಂಬ ಸ್ಥಳೀಯರ ಸಮಸ್ಯೆಗಳಿಗೆ ಯಾವಾಗಲೂ ಸ್ಪಂದಿಸಲಿದೆ. ವರಿಷ್ಠರು ಘೋಷಿಸುವ ಅಭ್ಯರ್ಥಿ ಜತೆ ಕೈಜೋಡಿಸಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ.
-ಜಿ.ಟಿ.ದೇವೇಗೌಡ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT