ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ 2–7–1967

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

* ನಕ್ಸಲ್‌ಬರಿಯಲ್ಲಿ ಮಾವೊ ನೇತೃತ್ವದಲ್ಲಿ ಸಶಸ್ತ್ರ ಹೋರಾಟ: ರೇಡಿಯೊ ಪಿಕಿಂಗ್‌ ವರದಿ
ನವದೆಹಲಿ, ಜುಲೈ 1–
ನಕ್ಸಲ್‌ಬರಿಯಲ್ಲಿ ಮಾವೊತ್ಸೆ ತುಂಗ್‌ ಮಾರ್ಗದರ್ಶನದಲ್ಲಿ ಭಾರತೀಯ ನಾಗರಿಕರು ಸಶಸ್ತ್ರ ಹೋರಾಟ ಆರಂಭಿಸಿದ್ದಾರೆ ಎಂದು ರೇಡಿಯೊ ಪಿಕಿಂಗ್‌ ವರದಿ ಮಾಡಿದೆ.

ನಿನ್ನೆ ನಡೆದ ಕಾಂಗ್ರೆಸ್‌ ಸಂಸದರ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಕೆಲವು ಸದಸ್ಯರು, ‘ನಕ್ಸಲ್‌ಬರಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ರೇಡಿಯೊ ಪಿಕಿಂಗ್‌ ವರದಿ ಮಾಡುತ್ತಿದೆ. ನಕ್ಸಲ್‌ಬರಿಯಲ್ಲಿ ನಡೆಯುತ್ತಿರುವ ಸಶಸ್ತ್ರ ಹೋರಾಟದ ಹಿಂದೆ ಚೀನಾದ ಕೈವಾಡವಿದೆ’ ಎಂದರು.

ಭಾರತ, ಚೀನಾ ಹಾಗೂ ಜಗತ್ತಿನ ಇತರ ರಾಷ್ಟ್ರಗಳ ಜನರು ಈ ಸಶಸ್ತ್ರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದೂ ರೇಡಿಯೊ ಹೇಳಿಕೊಂಡಿದೆ.

* ಚೀನಾ ಅಧ್ಯಕ್ಷ ಲಿಯು ಶಾವೊ–ಚಿ ಉಚ್ಚಾಟನೆ
ಪೀಕಿಂಗ್‌, ಜುಲೈ 1 –
ತಮ್ಮದೇ ಪಕ್ಷದ ಅಧ್ಯಕ್ಷ, ಮಾವೊ ವಿರುದ್ಧದ ಬಂಡಾಯದ ನಾಯಕತ್ವ ವಹಿಸಿದ್ದ, ಚೀನಾದ ಅಧ್ಯಕ್ಷ ಲಿಯು ಶಾವೊ–ಚಿ ಅವರನ್ನು  ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿರುವುದಾಗಿ ಘೋಷಿಸಲಾಗಿದೆ.

ಚೀನಾದ ಕಮ್ಯುನಿಸ್ಟ್‌ ಪಕ್ಷದ 40ನೇ ವಾರ್ಷಿಕೋತ್ಸವದ ಅಂಗವಾಗಿ ರೂಪಿಸಲಾಗಿದ್ದ ಕಮ್ಯುನಿಸ್ಟ್‌ ಪಕ್ಷದ ಅಧಿಕೃತ ಪತ್ರಿಕೆಯ ಈಚಿನ ಸಂಚಿಕೆಯಲ್ಲಿ ಈ ವಿಚಾರ ಪ್ರಕಟಿಸಲಾಗಿದೆ.

* ಭ್ರಷ್ಟಾಚಾರ: ಬಕ್ಷಿ ಮತ್ತು ಕುಟುಂಬ ತಪ್ಪಿತಸ್ಥರು
ಶ್ರೀನಗರ, ಜುಲೈ 1–
ಕಾಶ್ಮೀರದ ಮಾಜಿ ಪ್ರಧಾನಮಂತ್ರಿ ಬಕ್ಷಿ ಗುಲಾಮ್‌ ಮೊಹಮ್ಮದ್‌ ಹಾಗೂ ಅವರ ಕುಟುಂಬದವರು ಅಕ್ರಮವಾಗಿ 54ಲಕ್ಷ ರೂಪಾಯಿ ಸಂಪಾದಿಸಿದ್ದಾರೆ ಎಂದು ಈ ಬಗ್ಗೆ ತನಿಖೆಗಾಗಿ ನೇಮಕ ಮಾಡಲಾಗಿದ್ದ ಎನ್‌.ರಾಜಗೋಪಾಲ ಅಯ್ಯಂಗಾರ್‌ ಏಕಸದಸ್ಯ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ. ಆಯೋಗ ನಿನ್ನೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರ ಪ್ರಮುಖ ಅಂಶಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT