ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಪ್ರಶಸ್ತಿಯ ಕೊರಗು ನೀಗಬಹುದು

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

* ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಕೈಗೆಟುಕದಾಗಿದೆಯಲ್ಲ?
ಭಾರತ ಇದುವರೆಗೂ ಎಂಟು ವಿಶ್ವಕಪ್‌ಗಳಲ್ಲಿ ಆಡಿದ್ದು ಎಲ್ಲಾ ಟೂರ್ನಿ ಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದೆ. ಎರಡು ಬಾರಿ ಸೆಮಿಫೈನಲ್‌ ಪ್ರವೇಶಿದ್ದು ಒಮ್ಮೆ ರನ್ನರ್ಸ್‌ ಅಪ್‌ ಆಗಿದೆ. 2005ರಲ್ಲಿ ಚೊಚ್ಚಲ ಫೈನಲ್‌ ಪ್ರವೇಶಿಸಿದ್ದ ತಂಡ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. ಮಹಿಳಾ ಕ್ರಿಕೆಟ್‌ ಎಂದರೆ ಮೂಗು ಮುರಿಯುತ್ತಿದ್ದ ಕಾಲಘಟ್ಟದಲ್ಲಿ ಫೈನಲ್‌ ಪ್ರವೇಶಿಸಿದ್ದು ಕಡಿಮೆ ಸಾಧನೆಯೇನಲ್ಲ.

* ಈ ಬಾರಿ ಪ್ರಶಸ್ತಿಯ ಕೊರಗು ನೀಗಬಹುದೇ?
ತಂಡ ಪ್ರಶಸ್ತಿ ಗೆಲ್ಲಬೇಕು ಎಂಬುದು ಎಲ್ಲರ ಆಸೆ. ಆದರೆ ಕ್ರಿಕೆಟ್‌ನಲ್ಲಿ ಪಂದ್ಯದ ದಿನ ಏನಾದರೂ ಆಗಬಹುದು. ಹೀಗಾಗಿ ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ಈಗಲೇ ಹೇಳುವುದಕ್ಕೆ ಆಗುವು ದಿಲ್ಲ. ಆದರೆ ಫೈನಲ್‌ ಪ್ರವೇಶಿಸುತ್ತಾರೆ ಎಂಬ ವಿಶ್ವಾಸವಂತೂ ಖಂಡಿತ ವಾಗಿಯೂ ಇದೆ.

* ತಂಡದ ಬಗ್ಗೆ ನಿಮ್ಮ ಅಭಿಪ್ರಾಯ?
ಮಿಥಾಲಿ ರಾಜ್‌ ಸಾರಥ್ಯದ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ತಂಡ ಆಡಿರುವ ರೀತಿ ಇದಕ್ಕೆ ನಿದರ್ಶನದಂತಿದೆ. ಪೂನಂ ರಾವುತ್‌ ಮತ್ತು ಸ್ಮೃತಿ ಮಂದಾನ ಅವರು ಅಮೋಘ ಲಯದಲ್ಲಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಜೊತೆಗೆ ನಾಯಕಿ ಮಿಥಾಲಿ ಮತ್ತು ಹರ್ಮನ್‌ ಪ್ರೀತ್‌ ಅವರ ಬಲವೂ ಇದೆ.  ಬೌಲಿಂಗ್‌ನಲ್ಲೂ ತಂಡ ಪರಿಣಾಮಕಾರಿ ಸಾಮರ್ಥ್ಯ ತೋರುತ್ತಿದೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್‌ ಅವರನ್ನು ಕಣಕ್ಕಿಳಿಸದಿರುವುದು ಅಚ್ಚರಿ ಮೂಡಿಸಿದೆ. ರಾಜೇಶ್ವರಿ, ಶ್ರೇಷ್ಠ ಸ್ಪಿನ್ನರ್‌. ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದರೆ ತಂಡಕ್ಕೆ ಇನ್ನಷ್ಟು ಬಲ ಬರ ಲಿದೆ. ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಮುಂದಿನ ಪಂದ್ಯಗಳಲ್ಲಿ ಲಯ ಕಂಡುಕೊಳ್ಳುವುದು ಅಗತ್ಯ.

*
ತಂಡದಲ್ಲಿ ರಾಜ್ಯದ ಆಟಗಾರ್ತಿ ಯರ ಸಂಖ್ಯೆ ಕ್ಷೀಣಿಸಿದೆಯಲ್ಲವೇ?

ಹೌದು. ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಆಟಗಾರ್ತಿಯರ ಸಂಖ್ಯೆ ವಿರಳವಾಗಿದೆ. ವಿ.ಆರ್‌. ವನಿತಾ ಅವರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ.

ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್‌ ಅವರು ಕರ್ನಾಟಕದವರೇ ಆದರು ರೈಲ್ವೇಸ್‌ ತಂಡವನ್ನು ಪ್ರತಿನಿಧಿಸುತ್ತಾರೆ. ನಮ್ಮಲ್ಲಿ ಪ್ರತಿಭೆಗಳಿಗೇನೂ ಬರವಿಲ್ಲ. ಆದರೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಶಾಲಾ ಹಂತದಲ್ಲಿ ಮಕ್ಕಳಲ್ಲಿ ಅರಿವು ಮೂಡಿ ಸುವ ಮತ್ತು ಲೀಗ್‌ ಪಂದ್ಯಗಳನ್ನು ಆಯೋಜಿಸುವತ್ತ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಗಮನ ಹರಿಸ ಬೇಕು. ಹೀಗಾದರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ರಾಜ್ಯದ ಆಟಗಾರ್ತಿಯರ ಆಟ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT