ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತಕ್ಕೆ ಧರ್ಮದ ಸ್ಥಾನ ನೀಡಿ

Last Updated 3 ಜುಲೈ 2017, 9:08 IST
ಅಕ್ಷರ ಗಾತ್ರ

ಮೈಸೂರು: ಬಸವಣ್ಣ ಅವರು ಪ್ರತಿ ಪಾದಿಸಿದ ಮೌಲ್ಯಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ಲಿಂಗಾಯತ ಸಮುದಾಯಕ್ಕೆ ಧರ್ಮದ ಸ್ಥಾನ ನೀಡಬೇಕು ಎಂದು ಬಿಜೆಪಿ ಮುಖಂಡ ಶಂಕರ್‌ ಬಿದರಿ ಅಭಿಪ್ರಾಯಪಟ್ಟರು.

ಇಲ್ಲಿನ ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಬಸವಸೇನೆ ವಿಶ್ವ ಅಖಂಡ ಲಿಂಗಾಯತ ಮಹಾಸಭಾ ಹಾಗೂ ಬಸವ ಭಾರತ ಮಾಸಪತ್ರಿಕೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ‘ಬಸವ ಭಾರತ ವಿಶೇಷ ಸಂಚಿಕೆ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ವಿಶಾಲ ತಳಹದಿಯ ಮೇಲೆ ಬಸವಣ್ಣ ಅವರು ಧರ್ಮ ಸ್ಥಾಪಿಸಿದರು. ವರ್ಗ ಮತ್ತು ಜಾತಿರಹಿತ ಪರಿಕಲ್ಪನೆ ಯನ್ನು ಸಮಾಜಕ್ಕೆ ಪರಿಚಯಿಸಿದರು. ಲಿಂಗಾಯತ ಸಮುದಾಯಕ್ಕೆ ಧರ್ಮದ ಸ್ಥಾನ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಕೆಲಸ ಪೂರ್ಣಗೊಳ್ಳುವವರೆಗೆ ಲಿಂಗಾ ಯತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ, ‘ಧರ್ಮಕ್ಕೆ ಅಗತ್ಯ ವಿರುವ ಎಲ್ಲ ಅರ್ಹತೆ ಲಿಂಗಾಯತ ಸಮುದಾಯಕ್ಕೆ ಇದೆ. ಬಸವಣ್ಣ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೇ ಲಾಂಛನ, ಆದರೂ ಲಿಂಗಾಯತಕ್ಕೆ ಧರ್ಮದ ಸ್ಥಾನ ಸಿಗದಿರುವುದು ಖೇದಕರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT