ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಂಪೆನಿ ಖಾಸಗೀಕರಣಕ್ಕೆ ವಿರೋಧ

Last Updated 3 ಜುಲೈ 2017, 9:12 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಕಾರ್ಮಿಕರ ಸಚಿವರ ರಾಜೀನಾಮೆಗೆ ಒತ್ತಾಯಿಸುವುದು, ಖಾಸಗೀಕರಣಕ್ಕೆ ವಿರೋಧ ಹಾಗೂ ಎಐಸಿಸಿ ಅಧ್ಯಕ್ಷರನ್ನಾಗಿ ರಾಹುಲ್‌ ಗಾಂಧಿ ಅವರನ್ನು ನೇಮಿಸಲು ಬೆಂಬಲ ಸೂಚನೆ ಸೇರಿದಂತೆ ಹಲವು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಇಂಡಿ ಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ (ಐಎನ್‌ಟಿಯುಸಿ) ಅಧ್ಯಕ್ಷ ಡಾ.ಜಿ.ಸಂಜೀವ ರೆಡ್ಡಿ ತಿಳಿಸಿದರು.

‘ಐಎನ್‌ಟಿಯುಸಿಯನ್ನು ರಾಜಕೀಯ ವಾಗಿ ಮೂಲೆಗುಂಪು ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೆ, ಅಂತರರಾಷ್ಟ್ರೀಯ ಕಾರ್ಮಿಕರ ಸಂಘಟನೆ (ಐಎಲ್‌ಒ) ನಿಯೋಗ ಹಾಗೂ ಆಡಳಿತ ಮಂಡಳಿಯಲ್ಲಿ ಐಎನ್‌ ಟಿಯುಸಿಗೆ ಪ್ರಾತಿನಿಧ್ಯ ನೀಡಲು ಅನು ಮತಿ ಕಲ್ಪಿಸಿಲ್ಲ. ಇಂಥ ಸಂದರ್ಭದಲ್ಲಿ ಇಂಟರ್‌ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಐಟಿಯುಸಿ) ನಮ್ಮ ನೆರವಿಗೆ ಬಂದಿದ್ದು, ಐಎಲ್‌ಒನಲ್ಲಿ ಪ್ರಾತಿನಿಧ್ಯ ಕಲ್ಪಿಸಿದೆ. ಇದು ಕೇಂದ್ರ ಸರ್ಕಾರಕ್ಕೆ ಆಗಿರುವ ದೊಡ್ಡ ಹಿನ್ನಡೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಹೇಳಿದರು.

‘ಎರಡು ದಿನ ನಡೆದ ಐಎನ್‌ಟಿ ಯುಸಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಂಡಿ ದ್ದೇವೆ. ಕಾಂಗ್ರೆಸ್‌ ಪಕ್ಷಕ್ಕೆ ಯುವ ನಾಯಕ ತ್ವದ ಅವಶ್ಯವಿದೆ. ಪ್ರಸಕ್ತ ಸನ್ನಿವೇಶದಲ್ಲಿ ರಾಹುಲ್‌ ಅವರ ನಾಯಕತ್ವ ಪಕ್ಷಕ್ಕೆ ತುಂಬಾ ನೆರವಾಗಲಿದೆ. ಹೀಗಾಗಿ, ಅವ ರನ್ನು ಅಧ್ಯಕ್ಷರನ್ನಾಗಿ ನೇಮಿಸಲು ನಮ್ಮ ಬೆಂಬಲ ವ್ಯಕ್ತಪಡಿಸಿದ್ದೇವೆ’ ಎಂದರು.

‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ರೈಲ್ವೆ, ರಕ್ಷಣಾ ತಯಾರಿಕಾ ಸಂಸ್ಥೆ, ಬಂದರು, ಏರ್‌ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಣ ಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನಿಷ್ಪ್ರಯೋಜಕರಾಗಿದ್ದಾರೆ. ಅವರಿಗೆ ಕಾರ್ಮಿಕರ ಸಮಸ್ಯೆಯೇ ಗೊತ್ತಿಲ್ಲ.  ಸಂಘಟನೆಗಳ ಬಗ್ಗೆ ಕಿಂಚಿತ್‌ ಗೌರವವಿಲ್ಲ. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅವರನ್ನು ವಜಾಗೊಳಿಸಿ ಸಮರ್ಥ ಸಚಿವರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ಆಗಸ್ಟ್‌ 8ರಂದು ನವದೆಹಲಿಯ ತಲ್ಕೋಟರ ಕ್ರೀಡಾಂಗಣದಲ್ಲಿ ಕಾರ್ಮಿ ಕರ ರಾಷ್ಟ್ರೀಯ ಸಮಾವೇಶ ಆಯೋಜಿ ಸಲಾಗಿದೆ. ರಾಷ್ಟ್ರವ್ಯಾಪಿ ಆಂದೋಲನ ರೂಪಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ಸಂಘಟನಾ ಕಾರ್ಯದರ್ಶಿ ಎಸ್‌.ಎಸ್‌.ಪ್ರಕಾಶಂ, ಗ್ರಾಮಾಂತರ ಘಟಕದ ಅಧ್ಯಕ್ಷ ಮಾವನಹಳ್ಳಿ ರವಿ, ಕೇರಳ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್‌, ಮುಖಂಡರಾದ ವೆಂಕಟೇಶ್‌, ವಿಷಕಂಠಮೂರ್ತಿ, ಪ್ರಕಾಶ್‌ ಕುಮಾರ್‌, ಧನಂಜಯ, ಮಂಜುನಾಥ್‌ ಇದ್ದರು.

ಎಚ್‌ಎಂಎಸ್ ವಿಲೀನ ಪ್ರಸ್ತಾವ; ಚರ್ಚೆ
ಮೈಸೂರು: ಹಿಂದ್ ಮಜ್ದೂರ್‌ ಸಭಾ (ಎಚ್‌ಎಂಎಸ್) ಜತೆ ಸಂಘಟನೆಯನ್ನು ವಿಲೀನಗೊಳಿಸುವ ಕುರಿತು ಇಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ)ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆದವು.

ಮೊದಲಿಗೆ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಡಾ.ಜಿ.ಸಂಜೀವ ರೆಡ್ಡಿ, ‘ಸಂಘಟನೆಯೊಂದಿಗೆ ವಿಲೀನವಾಗಲು ಎಚ್‌ಎಂಎಸ್ ಪ್ರಸ್ತಾಪ ಇರಿಸಿದೆ. ವಿಲೀನದಿಂದ ಸಂಘಟನೆ ಹೆಚ್ಚು ಬಲಯುತವಾ ಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಎಚ್‌ಎಂಎಸ್‌ನಿಂದ ಬರುವ ಪದಾಧಿಕಾರಿಗಳಿಗೂ ನಾವು ಇಲ್ಲಿ ಸ್ಥಾನ ಕೊಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಗೊಂದಲಗಳಿಗೆ ಅವಕಾಶ ಇರಬಾರದು. ಇದಕ್ಕೆ ಎಲ್ಲ ರಾಜ್ಯದ ಪ್ರತಿನಿಧಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು’ ಎಂದು ಹೇಳಿದರು.

ನಂತರ, ಮಾತನಾಡಿದ ಬಹಳಷ್ಟು ಮಂದಿ ವಿಲೀನದ ಪರವಾಗಿ ಮಾತನಾಡಿದರು. ಹರಿಯಾಣದಿಂದ ಬಂದಿದ್ದ ಅನೂಪ್‌ ಸಿಂಗ್, ‘ಹೋರಾಟವು ಒಂದು ಸಮುದ್ರವಿದ್ದಂತೆ. ಇದರಲ್ಲಿ ಈಜಬೇಕಾದರೆ ವಿಲೀನದ ಅಗತ್ಯ ಇದೆ’ ಎಂದು ಪ್ರತಿಪಾದಿಸಿದರು.

ಟಾಟಾ ವರ್ಕಸ್ ಯೂನಿಯನ್ ವತಿಯಿಂದ ಬಂದಿದ್ದ ಆರ್.ರವಿ ‘ನಮ್ಮ ನೀತಿ ಒಪ್ಪಿಕೊಂಡು ಬರುವವರನ್ನು ಸ್ವಾಗತಿಸೋಣ. ವಿಲೀನಕ್ಕೆ ಒಪ್ಪುವುದೇ ಸರಿ. ಸರ್ಕಾರಿ ನೌಕರರಿಗಿಂತ ಖಾಸಗಿ ನೌಕರರು ಕಷ್ಟದಲ್ಲಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಉತ್ತರ ಪ್ರದೇಶದಿಂದ ಬಂದಿದ್ದ ರಮೇಶ್‌ ಸಿಂಗ್, ‘ಎಚ್‌ಎಂಎಸ್ ಜತೆ ವಿಲೀನವಾಗುವುದರಿಂದ ಸಂಘಟನೆಯ ಶಕ್ತಿ ಹೆಚ್ಚುತ್ತದೆ. ಕೇಂದ್ರ ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಹೋರಾಡುವುದಕ್ಕೆ ಸಂಘಟಿತವಾಗುವುದೊಂದೇ ದಾರಿ. ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ಪಂಜಾಬಿನ ಕಲ್ಯಾಣ್‌ ಸಿಂಗ್, ರಘುನಾಥ್ ಪಾಂಡ್ಯಜಿ, ಬಿ.ಕೆ.ರಾಯ್ ಸೇರಿದಂತೆ ಮೊದಲಾದವರು ವಿಲೀನದ ಪರವಾಗಿ ಮಾತನಾಡಿ ದರು. ಆದರೆ, ಕೆಲವರು ವಿಲೀನವಾ ಗುವಾಗ ಎಚ್ಚರವಹಿಸಬೇಕಾದುದು ಅನಿವಾರ್ಯ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT