ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ನಿರ್ದೇಶಕಿ ವಿರುದ್ಧ ತನಿಖೆ: ದಸಂಸ ಆಗ್ರಹ

Last Updated 6 ಜುಲೈ 2017, 5:28 IST
ಅಕ್ಷರ ಗಾತ್ರ

ರಾಯಚೂರು: ಸಮಾಜ ಕಲ್ಯಾಣ ಇಲಾಖೆಯಿಂದ ಖಾಸಗಿ ನಿವೇಶನ ಖರೀದಿಗೆ ಸಂಬಂಧಪಟ್ಟಂತೆ ಉಪ ನಿರ್ದೇಶಕಿ ಸರೋಜಾ ಅವರು ಕಾನೂನು ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶರಣಪ್ಪ ದಿನ್ನಿ ಹಾಗೂ ತಾಲ್ಲೂಕು ಸಂಚಾಲಕ ಚನ್ನಬಸವ ಯಕ್ಲಾಸಪುರ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಇಲಾಖೆಯ ಉಪನಿರ್ದೇಶಕರು ಹಾಗೂ ಕೆಲ ಅಧಿಕಾರಿಗಳು ಅವ್ಯವಹಾರ ದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿ ವೇತನ ಹಾಗೂ ಆಹಾರ ನಿರ್ವಹಣೆಯಲ್ಲೂ ಸುಳ್ಳು ಬಿಲ್ಲು ಸೃಷ್ಟಿಸಿ ಹಣ ದೋಚು ತ್ತಿದ್ದು, ವಾರ್ಡನ್‌ಗಳ ಗಮನಕ್ಕಿಲ್ಲದೆ ವಸತಿ ನಿಲಯಗಳ ಹಣ ಲೂಟಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದು  ಅವರು ದೂರಿದ್ದಾರೆ.

‘ನಿವೇಶನ ಹೆಸರಿನಲ್ಲಿ ಕಟ್ಟಡವನ್ನು ₹1.60 ಕೋಟಿಗೆ ಖರೀದಿ ಮಾಡಲಾಗಿದ್ದು, ಜಿಲ್ಲಾಧಿಕಾರಿ ವಿಚಾರಿಸಿದ್ದರಿಂದ ವಿಷಯ ಬಯಲಾಗಿದೆ. ಜಿಲ್ಲಾಧಿಕಾರಿ ವರದಿ ಆಧಾರದಲ್ಲಿ ತಾಲ್ಲೂಕು ಅಧಿಕಾರಿ ಅಮಾನತುಗೊಂಡಿದ್ದಾರೆ. ಮೇಲ್ವಿಚಾರಕ ದೇವರಾಜ ಕ್ಯಾಷ್‌ ಪುಸ್ತಕ ಬರೆಯದೆ ಸುಳ್ಳು ಬಿಲ್‌ ಮಾಡಿ ಅವ್ಯವಹಾರ ನಡೆಸಿದ್ದಾರೆ.

ಆದರೆ, ಸೇವಾ ಹಿರಿತನ ಹಾಗೂ ಜೇಷ್ಠತೆ ಪರಿಗಣಿಸದೆ ತಾಲ್ಲೂಕು ಅಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ’ ಎಂದ ಅವರು ಆಪಾದಿಸಿದ್ದಾರೆ. ಅವ್ಯವಹಾರದಲ್ಲಿ ತೊಡಗಿರುವ ದೇವರಾಜ ಹಾಗೂ ಜಯಮ್ಮ ವಿರುದ್ಧವೂ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT