ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಲಗೂರದಲ್ಲಿ ಯಾತ್ರಿ ನಿವಾಸ’

Last Updated 6 ಜುಲೈ 2017, 6:13 IST
ಅಕ್ಷರ ಗಾತ್ರ

ನಿಡಗುಂದಿ: ಸುಕ್ಷೇತ್ರ ಯಲಗೂರದಲ್ಲಿ ವಿವಿಧ ಅನುದಾನದಡಿ ನಿರ್ಮಿಸಲಾಗು ತ್ತಿರುವ ಯಾತ್ರಿ ನಿವಾಸವನ್ನು ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸ ಬೇಕು ಇಲ್ಲದಿದ್ದರೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಸೂಚನೆ ನೀಡಿದರು.

ಸಮೀಪದ ಸುಕ್ಷೇತ್ರ ಯಲಗೂರದಲ್ಲಿ  ₹ 106 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗು ತ್ತಿರುವ ಯಾತ್ರಿನಿವಾಸ ಕಟ್ಟಡದ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ಹಲವು ತಿಂಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಯನ್ನು ತ್ವರಿತಗೊಳಿಸಬೇಕು, ಇನ್ನಷ್ಟು ವಿವಿಧ ಸೌಕರ್ಯಗಳನ್ನು ಯಾತ್ರಿ ನಿವಾಸದೊಳಗೆ ಅಳವಡಿಸಬೇಕು, ಈಗ ಬಂದಿ ರುವ ವಿವಿಧ ಅನುದಾನ ಸಾಲದಿದ್ದರೆ ಬೇರೆ ಯಾವುದಾದರೂ ಅನುದಾನದಲ್ಲಿ ಹಣಕಾಸಿನ ನೆರವು ನೀಡಲಾಗುವುದು ಎಂದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಿ.ಎಸ್. ನಾಡಗೌಡ, ಸುಕ್ಷೇತ್ರ ಯಲಗೂರು ಆಂಜನೇಯ ದೇವಸ್ಥಾನದಿಂದ ಇಡೀ ರಾಜ್ಯದಾದ್ಯಂತ ಪ್ರಸಿದ್ಧವಾಗಿದ್ದು, ಇಲ್ಲಿ ಬಂದ ಭಕ್ತರಿಗೆ ವಸತಿ ಸೌಕರ್ಯದ ಕೊರತೆಯಿತ್ತು, ಅದಕ್ಕಾಗಿ ವಿವಿಧ ಶಾಸಕರ, ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರ, ಸಂಸದ ರನ್ನು ಸಂಪರ್ಕಿಸಿ ಅವರಿಂದ ₹ 56 ಲಕ್ಷ ಅನುದಾನವನ್ನು ಪಡೆಯಲಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ₹ 50 ಲಕ್ಷ  ಅನುದಾನ ಬಂದಿದೆ. ಒಟ್ಟಾರೆ ₹ 106 ಲಕ್ಷ ವೆಚ್ಚದಲ್ಲಿ ಈ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದರು.

ಎರಡು ಅಂತಸ್ತಿನ ಕಟ್ಟಡದಲ್ಲಿ 12000 ಚದುರ ಅಡಿಯ ಕಟ್ಟಡವಿದ್ದು, ಮೇಲಂತಿಸ್ತಿನಲ್ಲಿ ನಾಲ್ಕು ಕೋಣೆ, ನೆಲ ಅಂತಸ್ತಿನಲ್ಲಿ ಆರು ಡಾರ್ಮೆಟರಿ, ಅಡುಗೆ ಕೋಣೆ, ಅಗತ್ಯ ಶೌಚಾಲಯ, ಸ್ನಾನಗೃಹ ನಿರ್ಮಿಸಲಾಗುತ್ತಿದ್ದು, ಹೊರಗಡೆ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡ ಲಾಗುವುದು ಎಂದು ಹೇಳಿದರು.

ನಿರ್ಮಿತಿ ಕೇಂದ್ರದ  ಗೋಪಿನಾಥ ಮಂಜಿ, ಕೂಡಲಸಂಗಮ ಪ್ರಾಧಿಕಾ ರದ ನಿರ್ದೇಶಕ ಶ್ಯಾಮ ಪಾತರದ, ಚೆನ್ನಿಗಾವಿ ಶೆಟ್ರು, ಜಿ.ಬಿ. ತಳವಾರ, ಯಲ್ಲಪ್ಪ ಮೇಟಿ, ಡಾ.ಮಹಾದೇವ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT