ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಸಂಪೂರ್ಣ ನೀರಾವರಿ: ಶೀಘ್ರ ಪೂರ್ಣ

Last Updated 7 ಜುಲೈ 2017, 7:09 IST
ಅಕ್ಷರ ಗಾತ್ರ

ಅರಷಣಗಿ (ಬಸವನಬಾಗೇವಾಡಿ): ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಆದರೆ ಈ ವಿಷಯದಲ್ಲಿ  ನಾನು ಎಂದಿಗೂ ರಾಜ ಕೀಯ ಮಾಡಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಗ್ರಾಮದಲ್ಲಿ  ಗಾಂಧಿಪಥ- ಗ್ರಾಮ ಪಥ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ₹ 4.50 ಕೋಟಿ ವೆಚ್ಚದಲ್ಲಿ  ತೆಲಗಿ, ಕವಲಗಿ ಹಾಗೂ ಅರಷಣಗಿ ಗ್ರಾಮದವರೆಗಿನ ರಸ್ತೆ ಅಭಿ ವೃದ್ಧಿ ಕಾಮಗಾರಿ ಹಾಗೂ ಅರಷಣಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿದ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿನ ಯಾವುದೇ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಹೊರ ಹೊಮ್ಮ ಬೇಕಾದರೆ ಆ ಕ್ಷೇತ್ರಕ್ಕೆ ಅಗತ್ಯವಿರವ ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಶೌಚಾಲಯ, ಪ್ರವಾಸೋದ್ಯಮ, ನೀರಾವರಿ ಸೇರಿದಂತೆ ಅನೇಕ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು.

ಕಳೆದ ನಾಲ್ಕು ವರ್ಷದಲ್ಲಿ ಕ್ಷೇತ್ರದಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಫಲವಾಗಿ ಇಂದು ಜಿಲ್ಲೆಯಲ್ಲೇ ಮಾದರಿ ಕ್ಷೇತ್ರವಾಗಿ ಹೊರ ಹೊಮ್ಮಲು ಸಾಧ್ಯವಾಗಿದೆ ಎಂದರು.

ಕೊಲ್ಹಾರದ ಕಲ್ಲಿನಾಥ ದೇವರು ಸಾನಿಧ್ಯ ವಹಿಸಿದ್ದರು. ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಪಾಟೀಲ, ತಾ.ಪಂ. ಸದಸ್ಯ ಶಿವಾನಂದ ಅಂಗಡಿ, ಕೊಲ್ಹಾರ ಪ.ಪಂ. ಸದಸ್ಯ ಸಿದ್ದು ಗುಣಕಿ, ತಾನಾಜಿ ನಾಗರಾಳ, ಎ.ಪಿ.ಎಂ.ಸಿ ಸದಸ್ಯ ಸುರೇಶ ತಳವಾರ, ಲಕ್ಷ್ಮಣ ಸೊನ್ನದ, ಭೀಮನಗೌಡ ಪಾಟೀಲ, ಬಸವನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ರುದ್ರಗೌಡ ಪಾಟೀಲ, ಸಿ.ಬಿ. ಚಿಕ್ಕಲಕಿ, ಬಿ.ಎಸ್. ರಾಠೋಡ, ರಾಮು ಕವಲಗಿ, ಜೆ.ವಿ. ಕಿರಸೂರ, ಅಶೋಕ ಪಾಟೀಲ, ಕೊಲ್ಹಾರ ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ರಫೀಕ್ ಪಕಾಲಿ ಇತರರು ಇದ್ದರು.

ತೆಲಗಿ ವರದಿ: ಎನ್‌ಟಿಪಿಸಿ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಸಿಸಿ ರಸ್ತೆ, ಗ್ರಾಮೀಣ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ನಂತರ ಜರುಗಿದ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಜಿಲ್ಲೆಯೂ ಸಂಪೂರ್ಣ ನೀರಾವರಿಗೆ ಒಳಪಡುವ ಕಾಲ ಸನ್ನಿಹಿತವಾಗಿದೆ. ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡ ಮೇಲೆ ಬರಗಾಲ ಜಿಲ್ಲೆ ಎಂಬ ಹಣೆ ಪಟ್ಟಿಯಿಂದ ಹೊರಬರಲಿದೆ ಎಂದು ಹೇಳಿದರು.

ಮುಂದೆ ನಮಗೂ ನೀರಾವರಿ ಸೌಲಭ್ಯ ದೊರಕುತ್ತದೆ ಎಂಬ ಮಹದಾಸೆಯಿಂದ ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕಾಗಿ ಈ ಭಾಗದ ರೈತರು ಫಲವತ್ತಾದ ಭೂಮಿಯನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗದ ಫಲವಾಗಿ ಜಿಲ್ಲೆಯಲ್ಲಿನ ವಿವಿಧ ಏತ ನೀರಾವರಿ ಯೋಜನೆಯಿಂದಾಗಿ ಮುಂಬರುವ ದಿನಗಳಲ್ಲಿ ಜಿಲ್ಲೆ ಸಂಪೂರ್ಣ ನೀರಾ ವರಿಗೆ ಒಳಪಡಲಿದೆ ಎಂದು ಹೇಳಿದರು. 

ಕಲ್ಲಿನಾಥ ದೇವರು ಸಾನಿಧ್ಯ ವಹಿಸಿದ್ದರು. ತೆಲಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಬಾಯಿ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ತಹಶೀಲ್ದಾರ ಎಂ.ಎನ್‌.ಚೋರಗಸ್ತಿ, ಸಂಜೀವ್‌ ಕಿಶೋರ, ಈಶ್ವರ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT