ಪ್ರಜಾವಾಣಿ ರೆಸಿಪಿ

ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಕಬಾಬ್ ಅಂದಾಕ್ಷಣ ಮಾಂಸದ ನೆನಪಾಗುವುದು ಸಹಜ. ಆದರೆ ಮಾಂಸ ಸೇವನೆ ಮಾಡದವರು ಕೂಡ ಕಬಾಬ್ ತಿನ್ನಬಹುದು!  ಅದುವೇ ತರಕಾರಿ ಕಲ್ಮಿ ಕಬಾಬ್‌. ಎಲ್ಲ ತರಕಾರಿಗಳನ್ನು ಸಣ್ಣಗೆ ಹಚ್ಚಿ ಬೇಯಿಸಿದ ನಂತರ ಬ್ರೇಡ್ ಪುಡಿ ಬಳಸಿ ತರಕಾರಿ ಕಲ್ಮಿ ಕಬಾಬ್‌ ಮಾಡಬಹುದು.

ಕಬಾಬ್ ಅಂದಾಕ್ಷಣ ಮಾಂಸದ ನೆನಪಾಗುವುದು ಸಹಜ. ಆದರೆ ಮಾಂಸ ಸೇವನೆ ಮಾಡದವರು ಕೂಡ ಕಬಾಬ್ ತಿನ್ನಬಹುದು!  ಅದುವೇ ತರಕಾರಿ ಕಲ್ಮಿ ಕಬಾಬ್‌. ಎಲ್ಲ ತರಕಾರಿಗಳನ್ನು ಸಣ್ಣಗೆ ಹಚ್ಚಿ ಬೇಯಿಸಿದ ನಂತರ ಬ್ರೇಡ್ ಪುಡಿ ಬಳಸಿ ತರಕಾರಿ ಕಲ್ಮಿ ಕಬಾಬ್‌ ಮಾಡಬಹುದು.

ಸಾಮಗ್ರಿಗಳು
1) ಬೀನ್ಸ್ -                                                 04
2) ಕ್ಯಾರೇಟ್ -                                             01
3) ಆಲೂಗಡ್ಡೆ                                               01
4) ಗೋಬಿ ಹೋಳುಗಳು                                 ಸ್ವಲ್ಪ
5) ಬೀಟ್‍ರೂಟ್ ಹೋಳುಗಳು                          1/4 ಕಪ್
6) ಈರುಳ್ಳಿ -                                               01
7) ಶುಂಠಿ ಬೆಳ್ಳುಳ್ಳಿ ಪೇಸ್ಟ್ -                             ಒಂದು ದೊಡ್ಡ ಚಮಚ
8) ಹಸಿಮೆಣಸಿನ ಕಾಯಿ -                               04
9) ಗರಮ್ ಮಸಾಲ -                                   1/2 ಚಮಚ
10) ಜೀರಿಗೆ ಪುಡಿ -                                       1/2 ಚಮಚ
11) ಬ್ಲಾಕ್ ಸಾಲ್ಟ್ -                                      1/2 ಚಮಚ
12) ಖಾರದ ಪುಡಿ -                                       ಸ್ವಲ್ಪ
13) ಉಪ್ಪು –                                              ರುಚಿಗೆ ತಕ್ಕಷ್ಟು
14) ತಂದೂರಿ ಬಣ್ಣ -                                     ಚಿಟಿಕೆ
15) ಬ್ರೆಡ್ ಪುಡಿ -                                         ಒಂದು ಕಪ್
16) ವುಡನ್ ಸ್ಟಿಕ್ಸ್ -                                      06
17) ಎಣ್ಣೆ -                                                 ಕರಿಯಲು
18) ಮೈದಾ -                                             02 ದೊಡ್ಡ ಚಮಚ
ಮಾಡುವ ವಿಧಾನ: ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಬೇಯಿಸಬೇಕು. ನಂತರ, ಬಾಂಡ್ಲಿಯಲ್ಲಿ 2 ದೊಡ್ಡ ಚಮಚ ಎಣ್ಣೆ ಬಿಸಿಮಾಡಿ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಬೆಂದ ತರಕಾರಿ, ಉಪ್ಪು, ತಂದೂರಿ ಬಣ್ಣ, 1/2 ಕಪ್ ಬ್ರೆಡ್ ಪುಡಿ ಸೇರಿಸಿ ಚೆನ್ನಾಗಿ  ಬೇಯಿಸಿ ತಣ್ಣಗಾದ ನಂತರ ಚಿಕ್ಕ ಉಂಡೆಗಳನ್ನು ಮಾಡಿ, ಸಣ್ಣ ಸಣ್ಣ ಪೂರಿ ಲಟ್ಟಿಸಬೇಕು. ಇದಕ್ಕೆ ಸಿಗಾರ್ ಆಕಾರ ಕೊಟ್ಟು, ಮೈದಾಹಿಟ್ಟಿನಲ್ಲಿ ಹೊರಳಿಸಿ, ಬ್ರೆಡ್ ಪುಡಿಯನ್ನೂ ಸುತ್ತಲೂ ಹಾಕಿ ಕಾದ ಎಣ್ಣೆಯಲ್ಲಿ ಕರಿದರೆ ಕಲ್ಮಿ ಕಬಾಬ್ ಸವಿಯಲು ಸಿದ್ಧ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017
ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

ಪ್ರಜಾವಾಣಿ ರೆಸಿಪಿ
ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

30 Jun, 2017