ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತಗಳ ಆಗರ ಹಾಲಿವುಡ್ ಸ್ಟುಡಿಯೊ

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಸ್ಫಟಿಕದ ಶಿಲೆಯಂಥ ಮಂಜಿನ ಗುಹೆಗಳು, ಹಿಮ ಸರೋವರಗಳು, ಬೆಂಕಿ ಉಗುಳುವ ಜ್ವಾಲಾಮುಖಿಗಳು, ಲಾವಾರಸ ಚಿಮ್ಮುವ ಬುಗ್ಗೆಗಳು...

ಇವನ್ನೆಲ್ಲಾ ನೋಡಿದರೆ ಒಮ್ಮೆ ಬೆಚ್ಚಿಬೀಳುವುದು ಗ್ಯಾರಂಟಿ. ಒಂದೇ ಸ್ಥಳದಲ್ಲಿ ಇವೆಲ್ಲಾ ಇರೋದು ಸಾಧ್ಯವೇ ಎಂದು ಯೋಚಿಸುತ್ತಿದ್ದೀರಾ? ಖಂಡಿತ ಸಾಧ್ಯ. ಪ್ರಕೃತಿಗೆ ಸಡ್ಡು ಹೊಡೆಯುವಂತೆ ಮನುಷ್ಯನ ಕೈಚಳಕದಿಂದ ತಯಾರಾಗಿರುವ ಹಾಲಿವುಡ್‌ನ ಸ್ಟುಡಿಯೊದಲ್ಲಿ ಇವೆಲ್ಲವನ್ನೂ ಕಾಣಬಹುದು.

ಐಸ್‌ಲ್ಯಾಂಡ್‌ನ ಆಸ್ಟರ್‌ಲ್ಯಾಂಡ್ ಪ್ರದೇಶದಲ್ಲಿರುವ ದ್ವೀಪದಲ್ಲಿ ಇರುವ ಹಾಲಿವುಡ್ ಸ್ಟುಡಿಯೊದಲ್ಲಿ ಪ್ರಕೃತಿಯ ನೈಜಸೃಷ್ಟಿಗಳನ್ನು ಮರುಸೃಷ್ಟಿಸಲಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ  ಇರುವ ಈ ದ್ವೀಪ ಹಾಲಿವುಡ್ ನಿರ್ಮಾಪಕರ ಪಾಲಿಗೆ ಸ್ವರ್ಗ.

ದಕ್ಷಿಣ ಅಟ್ಲಾಂಟಿಕದಲ್ಲಿರುವ ಈ ಪ್ರದೇಶದಲ್ಲಿ ಇಂಥದ್ದೊಂದು ಸ್ಟುಡಿಯೊ ಸೃಷ್ಟಿಸಿದ್ದು ಅದ್ಭುತ ಸಂಗತಿ. ‘2008ರಲ್ಲಿ ಐಸ್‌ಲ್ಯಾಂಡ್‌ನ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿತ್ತು. ಆಗ ಹಾಲಿವುಡ್ ನಿರ್ಮಾಪಕರನ್ನು ಗಮನದಲ್ಲಿಟ್ಟುಕೊಂಡು ಇಂಥ ಅದ್ಭುತವಾದ ಸ್ಟುಡಿಯೊ ನಿರ್ಮಾಣ ಮಾಡಲಾಯಿತು’ ಎನ್ನುತ್ತಾರೆ ಅಸೋಸಿಯೇಷನ್ ಆಫ್ ಐಸ್‌ಲ್ಯಾಂಡಿಕ್ ಫಿಲಂ ಪ್ರೊಡ್ಯೂಸರ್ಸ್‌ನ ಅಧ್ಯಕ್ಷ ಕ್ರಿಸ್ಟಿನ್ ಥೋಡರ್ಸನ್.

‘ಹಾಲಿವುಡ್ ಸ್ಟುಡಿಯೊ ನಿರ್ಮಾಣವಾದದ್ದೇ ತಡ, ನಿಧಾನವಾಗಿ ಪ್ರವಾಸೋದ್ಯಮವೂ ಚೇತರಿಸಿಕೊಂಡಿತು. ದೇಶಕ್ಕೂ ಆದಾಯ ಬರತೊಡಗಿತು’ ಎನ್ನುತ್ತಾರೆ ಕ್ರಿಸ್ಟಿನ್.

ಐಸ್‌ಲ್ಯಾಂಡ್‌ಗಳ ಚಿತ್ರೀಕರಣಕ್ಕೂ ಹಾಗೂ ಹಿಮಾಲಯ, ಮಂಗೋಲಿಯನ್, ಸೈಬೀರಿಯಾ, ಗ್ರೀನ್‌ಲ್ಯಾಂಡ್‌ಗಳಲ್ಲಿನ ಚಿತ್ರೀಕರಣಕ್ಕೂ ಈ ಐಸ್‌ಲ್ಯಾಂಡ್ ಬಳಸಬಹುದು. ಲ್ಯಾಂಡ್‌ಸ್ಕೇಪ್‌ಗಳನ್ನು ವಿಜ್ಞಾನಕ್ಕೆ ಸಂಬಂಧಿಸಿದ ಸಿನಿಮಾಗಳಲ್ಲಿ ಬೇರೆ ಗ್ರಹಗಳನ್ನು ಸೃಷ್ಟಿಸಲು ಬಳಸಲಾಗಿದೆ.

‘ಬ್ಲಾಕ್ ಮಿರರ್’, ‘ಇಂಟರ್‌ಸ್ಟೀಲರ್’,‘ಲಾರಾ ಕ್ರಾಫ್ಟ್:ಟೂಂಬ್‌ ರೈಡರ್’, ‘ಸ್ಟಾರ್ ವಾ್ರ್ಸ್‌’ ಮೊದಲಾದ ಧಾರಾವಾಹಿಗಳಲ್ಲಿ ಹಾಗೂ ಜೇಮ್ಸ್ ಬಾಂಡ್ ಚಿತ್ರಗಳು, ‘ಫಾಸ್ಟ್ ಆಂಡ್ ಫ್ಯೂರೀಸ್ 8’ ಸೇರಿದಂತೆ ಅನೇಕ ಚಿತ್ರಗಳ ಚಿತ್ರೀಕರಣ ಈ ದ್ವೀಪದಲ್ಲೇ ಆಗಿರುವುದು ವಿಶೇಷ.

ಈ ಸ್ಟುಡಿಯೊ ಸಿನಿಮಾ ನಿರ್ದೇಶಕರಿಗೆ, ಚಿತ್ರದಲ್ಲಿ ಸಾಹಸ ದೃಶ್ಯ, ಕಾಲ್ಪನಿಕ ಪ್ರಪಂಚವನ್ನು ಸೃಷ್ಟಿಸಲು ಪೂರಕವಾಗಿದೆ.

2014ರಲ್ಲಿ ಸಿನಿಮಾ ನಿರ್ಮಾಪಕ ಡಾರೆನ್ ಅರೊನೊಫ್ಸ್ಕಿ ಅವರ ‘ನೋಹ್’ ಚಿತ್ರಕ್ಕಾಗಿ ಈ ಐಲ್ಯಾಂಡ್‌ ಅನ್ನು ಬಳಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT