ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂತ್‌ಬ್ರಶ್‌ ಮೇಲೆ ತಿರುಗುವ ಚೆಂಡು

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಬಾಸ್ಕೆಟ್‌ಬಾಲ್‌, ವಾಲಿಬಾಲ್‌ಗಳನ್ನು ಕೈಬೆರಳಿನ ಮೇಲೆ ತಿರುಗಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಬಾಯಲ್ಲಿ ಟೂತ್‌ಬ್ರಶ್‌ ಇಟ್ಟುಕೊಂಡು ಅದರ ತುದಿಯಲ್ಲಿ ಬಾಸ್ಕೆಟ್‌ಬಾಲ್‌ ಇರಿಸಿ ಗಿರಗಿರ ತಿರುಗಿಸಿ ಗಿನ್ನೆಸ್‌ ವಿಶ್ವದಾಖಲೆ ಮಾಡಿದ್ದಾನೆ.

ಪಂಜಾಬ್‌ನ ಸಂದೀಪ್‌ ಸಿಂಗ್‌ ಈ ದಾಖಲೆ ಮಾಡಿದವರು. ಈಗಿನ್ನೂ 25ರ ಹರೆಯಲ್ಲಿರುವ ಅವರು ಊರ ಜನರ ಎದುರು 53 ಸೆಕೆಂಡ್‌ಗಳ ಕಾಲ ಬಾಲ್‌ ತಿರುಗಿಸಿದರು. ಈ ಮುಂಚೆ ಭಾರತದ ಮೊಹನಿಶ್ ನಿಖಂ ಅವರು 46.16 ಸೆಕೆಂಡ್‌ ಬಾಲ್‌ ತಿರುಗಿಸಿದ್ದು ದಾಖಲೆಯಾಗಿತ್ತು.

ಸಂದೀಪ್‌ ಅವರು ಮೊದಲು ಬೆರಳಲ್ಲಿ ಬಾಲ್ ತಿರುಗಿಸಿ, ನಂತರ ಬ್ರಶ್‌ ಮೇಲೆ ಬಿಡುತ್ತಾರೆ. ಆ ಟೂತ್‌ಬ್ರಶ್‌ಅನ್ನು ಬಾಯಲ್ಲಿಟ್ಟುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT