ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಮಿಕರಿಗೆ ಏಕರೂಪದ ವೇತನ ಜಾರಿಯಾಗಲಿ’

Last Updated 8 ಜುಲೈ 2017, 5:44 IST
ಅಕ್ಷರ ಗಾತ್ರ

ಮಾನ್ವಿ: ‘ದೇಶದಲ್ಲಿನ ಕಾರ್ಮಿಕರ ಪರವಾದ ಶೇ 80ರಷ್ಟು ಕಾನೂನುಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಕಾರ್ಮಿಕ ನೀತಿಯ ಹೊಸ ಕಾನೂನುಗಳನ್ನು ಜಾರಿ ಗೊಳಿಸಲು ಮುಂದಾಗಿರುವುದು ಖಂಡನೀಯ.  ಕೂಡಲೇ ಕಾರ್ಮಿಕರಿಗೆ ಏಕರೂಪದ ವೇತನ ಕಾಯ್ದೆಯನ್ನು ಅನುಷ್ಠಾನಗೊಳಿಬೇಕು’ ಎಂದು ಸಿಐಟಿ ಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಮಹಾಂತೇಶ ಒತ್ತಾಯಿಸಿದರು.

ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಸಿಐಟಿಯು ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ  ಉಧ್ಘಾಟಿಸಿ ಅವರು ಮಾತನಾಡಿದರು. ‘ಅಸಂಘಟಿತ ಕಾರ್ಮಿಕರ ಪ್ರಮುಖ ಸಮಸ್ಯೆಗಳಾದ ಸಾಮಾಜಿಕ ಭದ್ರತೆ ಮತ್ತು ವೇತನ ಕಾಯ್ದೆ, ಕಾರ್ಮಿಕ ಕಾನೂನು ಸುಧಾರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕ ಸಂಘಟನೆಗಳು ಒಗ್ಗೂಡ ಬೇಕಾಗಿದೆ.

ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಸೆಪ್ಟೆಂಬರ್‌ 14ರಂದು ಬೆಂಗಳೂರು ಹಾಗೂ ಅಕ್ಟೋಬರ್‌ 8ರಂದು ದೆಹಲಿಯಲ್ಲಿ ನಡೆಯಲಿರುವ ಬೃಹತ್ ಚಳವಳಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರು ಪಾಲ್ಗೂಂಡು ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಬೇಕು’ ಎಂದು ಅವರು ಕರೆ ನೀಡಿದರು.

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿ, ‘ದೇಶದಾದ್ಯಂತ ಕಾರ್ಮಿಕ ರನ್ನು ಒಗ್ಗೂಡಿಸುವುದು ಹಾಗೂ ಸಂಘಟನಾ ಶಕ್ತಿಯನ್ನು ಹೆಚ್ಚಿಸಲು ಸಿಐಟಿಯು ಮಹತ್ವ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಗಮನ ಸೆಳೆಯಲಾಗುತ್ತಿದೆ’ ಎಂದು ಹೇಳಿದರು.

‘ಬಂಡವಾಳಶಾಹಿಗಳ ಪರವಾಗಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕೋಮುವಾದ, ಆರ್ಥಿಕ  ವಿರೋಧಿ ನೀತಿಗಳು, ಕಾರ್ಮಿಕರ ವಿನಾಶಕ್ಕೆ ಕಾರಣವಾಗಿದ್ದು, ಈ ಪಕ್ಷಗಳಿಗೆ ತಕ್ಕಪಾಠ ಕಲಿಸಲು ಕಾರ್ಮಿಕರು ಐಕ್ಯತೆಯನ್ನು ಹೊಂದುವುದರ ಜತೆಗೆ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ  ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ವಿರೇಶ, ಸಿಐಟಿಯು ಜಿಲ್ಲಾ ಮುಖಂಡ ಡಿ.ಎಸ್.ಶರಣಬಸವ, ಪಿ.ಗಿರಿಯಪ್ಪ, ಎಂ.ಸಿ.ಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ್, ವರಲಕ್ಷ್ಮೀ, ಮಹಾದೇವಪ್ಪ, ಗೌತಮ್, ಶಕುಂತಲಾ ದೇಸಾಯಿ, ತಾಲ್ಲೂಕ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ, ಸಹಕಾರ್ಯದರ್ಶಿ ಡಿ. ಮಲ್ಲಿಕಾರ್ಜುನ, ಗ್ರಾ.ಪಂ ನೌಕರರ ಸಂಘದ ಪದಾಧಿಕಾರಿಗಳಾದ ಈರಣ್ಣ ಆರೋಲಿ, ಶರಣಪ್ಪ ಬ್ಯಾಗವಾಟ್, ಮಹ್ಮದ್ ನೀರಮಾನ್ವಿ, ಚೌಡಯ್ಯ ನಾಯಕ ದೇವಿಪುರ, ನಿತ್ಯಾನಂದ ಭಾಗವಹಿಸಿದ್ದರು.  ಎಚ್.ಶರ್ಪುದ್ದೀನ್ ಪೋತ್ನಾಳ್  ನಿರೂಪಿಸಿದರು. ಸಿದ್ದಲಿಂಗಯ್ಯ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT