ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಸಂಕಷ್ಟ ನಿವಾರಣೆಗೆ ಬದ್ಧ’

Last Updated 8 ಜುಲೈ 2017, 7:38 IST
ಅಕ್ಷರ ಗಾತ್ರ

ಮುಧೋಳ: ಭಾರತದಲ್ಲಿ 70 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು 3 ವರ್ಷಗಳಲ್ಲಿ ಆಗುತ್ತಿವೆ. ವಿಶ್ವವೇ ಭಾರತ ನೋಡುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಗುರುವಾರ ಸಂಜೆ ಭುವನೇಶ್ವರ ಮೂರ್ತಿ ಅನಾವರಣಗೊಳಿಸಿ ಮಾತನಾಡಿ ದೇಶದಲ್ಲಿ ದೇವೆಗೌಡ ಅವರು ಪ್ರಧಾನಿ ಇದ್ದಾಗ ದೇಶದ ಆದಾಯ  ₹ 9 ಲಕ್ಷ ಕೋಟಿ ಇತ್ತು, ವಾಜಪೇಯಿ ಪ್ರಧಾನಿ ಇದ್ದಾಗ  ₹ 13 ಲಕ್ಷ ಕೋಟಿ ಆಯಿತು. ಮನಮೋಹನ ಅವರ ಅವಧಿಯಲ್ಲಿ  ₹14 ಲಕ್ಷ ಕೋಟಿ ಆಯಿತು.

ಆದರೇ ಮೋದಿ ಪ್ರಧಾನಿಯಾಗಿ 3 ವರ್ಷದ ಅವಧಿಯಲ್ಲಿ  ₹ 17 ಲಕ್ಷ ಕೋಟಿ ಏರಿದೆ. ಇನ್ನು ಅನು ಷ್ಠಾನಗೊಂಡ ಜಿಎಸ್‌ಟಿ ಮೂಲಕ  ₹ 3 ಲಕ್ಷ ಕೋಟಿ ಆದಾಯ ನಿರೀಕ್ಷಿಸಲಾಗುತ್ತಿದೆ. ಭಾರತ ಅಭಿವೃದ್ಧಿಯಲ್ಲಿ ಎಲ್ಲ ಹಂತದಲ್ಲಿ ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧಿಸಿದೆ. ರಾಜ್ಯದಲ್ಲಿ ಜಾತಿ ಧರ್ಮ ನೋಡದೆ ಸರ್ವರಿಗೂ ಸಮಪಾಲು ಮಾದರಿಯಲ್ಲಿ ರಾಜ್ಯದಲ್ಲಿ ಆಡಳಿತ ನಡಿಸಿದ್ದೇವು. ರಾಜ್ಯದ ರೈತರ ಸಂಕಷ್ಟ ನಿವಾರಣೆಯಾಗಲು, ನೀರಾವರಿ ಯೋಜನೆ ಪೂರ್ಣಗೊಳ್ಳಲು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.

ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಕೇಂದ್ರ ಸರ್ಕಾರ ರೈತರಿಗೆ ನೀಡುವ ಶೇ 3 ಅನುದಾನವನ್ನು ನಾವು ಅಧಿಕಾರ ದಲ್ಲಿದ್ದಾಗ ನೇರವಾಗಿ ರೈತರ ಖಾತೆ ಜಮಾಡುತ್ತಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ್ ರೈತರಿಗೆ ನೀಡದೇ ಮೋಸ ಮಾಡಿದೆ ಎಂದು ಆರೋಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಹಾಗೂ ರಾಜ್ಯದ ಅಭಿವೃದ್ದಿಗೆ ಯಡಿಯೂರಪ್ಪ ಅವರ ಕೈಬಲಪಡಿಸಲು ಮನವಿ ಮಾಡಿದರು.

ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಮಾಜಿ ಶಾಸಕರಾದ ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಜಿ.ಎಸ್.ನ್ಯಾಮಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರತ್ನಕ್ಕ ತಳೇವಾಡ, ಭೀಮನಗೌಡ ಪಾಟೀಲ, ಮಾಜಿ ಅಧ್ಯಕ್ಷ ಎಲ್.ಕೆ.ಬಳಗಾನೂರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಇದ್ದರು. ಇಂಗಳಗಿ ಹಿರೇಮಠದ ರೇವಣ ಸಿದ್ಧ ಶಿವಾಚಾರ್ಯ ಶ್ರೀಗಳು, ನಿಜಗುಣ ದೇವರು, ಅಡವಿ ಮಠದ ಚಂದ್ರಶೇಖರ ಶ್ರೀಗಳು ಸಾನಿಧ್ಯವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT