ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಮಾರ್ಗ ಅನುಸರಿಸುವುದೇ ಯೋಗ

ಯೋಗ ಶಿಬಿರದಲ್ಲಿ ಸಿ.ಎಚ್‌. ವಿಜಯಶಂಕರ ಅಭಿಮತ
Last Updated 10 ಜುಲೈ 2017, 10:22 IST
ಅಕ್ಷರ ಗಾತ್ರ

ಕೊಪ್ಪಳ: ಯೋಗ ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಒಂದು ಜೀವನ ಶೈಲಿ. ಅದರ ಮೂಲಕ ಅರಿವು ಮೂಡುವುದು. ಅರಿವು ಎಂದರೆ ಜ್ಞಾನ, ಜ್ಞಾನ ಎಂದರೆ ಸತ್ಯ, ಈ ಸತ್ಯ ಮಾರ್ಗದಲ್ಲಿ ನಡೆಯುವುದೇ ಯೋಗ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್‌.ವಿಜಯಶಂಕರ ಹೇಳಿದರು.

ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಆಸನ, ಪ್ರಾಣಾಯಾಮ ಮತ್ತು ಧ್ಯಾನ ಇತ್ಯಾದಿಗಳು ಕಾಯಿಲೆಗಳನ್ನು ವಾಸಿ ಮಾಡಲು ಸಹಕಾರಿ. ಯೋಗ ಎಂಬುದು ಜಗತ್ತಿನ ಎಲ್ಲರ ಆತ್ಮೋನ್ನತಿಗೆ ಸಂಬಂಧಪಟ್ಟದ್ದು. ಅದರ ನಿಜವಾದ ಅರಿವು ಮೂಡಿಸುವುದು ಅವಶ್ಯವಾಗಿದೆ’ ಎಂದು ಹೇಳಿದರು.

‘ಸರಳ ಜೀವನ ಮತ್ತು ಉದಾತ್ತ ಚಿಂತನೆ ಇವು ಯೋಗದ ವಿಧಾನ. ಈ ರೀತಿಯಲ್ಲಿ ಬದುಕಿ ಜಗತ್ತಿಗೆ ಬೆಳಕು ನೀಡಿದವರು ನಮ್ಮ ಋಷಿಮುನಿಗಳು. ಇದರ ಒಳ ಅರಿವನ್ನು ಅರಿತುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ಯೋಗದ ಮಹತ್ವ ತಿಳಿಸಲು ಮುಂದಾಗಿದ್ದು ಸ್ವಾಗತಾರ್ಹ.

ಜೂನ್‌ 21 ವಿಶ್ವ ಯೋಗ ದಿನವನ್ನಾಗಿ ಆಚರಿಸಲು ವಿಶ್ವದ 175ಕ್ಕೂ ಹೆಚ್ಚು ದೇಶಗಳು ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ’ ಎಂದರು. ‘ಈಗಿರುವ ಪರಿಸ್ಥಿತಿಗೆ ಇದರ ಅವಶ್ಯಕತೆ ಯೂ ಇದೆ. ಇದರಿಂದ ಕೂಡಲೇ ಬದಲಾವಣೆ ನಿರೀಕ್ಷೆ ಮಾಡ ಲು ಸಾಧ್ಯವಾಗದಿದ್ದರೂ ಜಗತ್ತು ಶಾಂತಿಮಯ ಆಗುವುದರಲ್ಲಿ ಸಂಶಯವೇ ಇಲ್ಲ’ ಎಂದರು.

ಯೋಗ ಗುರು ಶರಣಬಸವನಗೌಡ ಪಾಟೀಲ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಪ್ಪಣ್ಣ ಪದಕಿ, ಕಳಕಪ್ಪ ಜಾಧವ, ರಾಷ್ಟ್ರೀಯ ಅಲ್ಪಸಂಖ್ಯಾತರ ಮೋರ್ಚಾದ ಸದಸ್ಯ ಪೀರಾಹುಸೇನ್ ಹೊಸಳ್ಳಿ, ಪಿಕಾರ್ಡ ಬ್ಯಾಂಕ್ ಮಾಜಿ ಅಧ್ಯಕ್ಷ ನೀಲಕಂಠಯ್ಯ ಹಿರೇಮಠ, ಸಂಗಮೇಶ ಡಂಬಳ, ನಗರಮಂಡಲ ಅಧ್ಯಕ್ಷ ಶಿವುಕುಮಾರ ಹಕ್ಕಾಪಕ್ಕಿ, ಪ್ರಧಾನಕಾರ್ಯದರ್ಶಿ ದೇವರಾಜ ಹಾಲಸಮುದ್ರ,  ಮಂಜುನಾಥ ಹಳ್ಳಿಕೇರಿ, ಮಹೇಶ ಹಾದಿಮನಿ, ದಯಾನಂದಸ್ವಾಮಿ, ಪ್ರಭುರಾಜ ಕಿಡದಾಳ, ಗವಿಸಿದ್ದಪ್ಪ ಬೆಲ್ಲದ್, 28ನೇ ವಾರ್ಡ್‌ನ ವಿಸ್ತಾರಕ ಹಾಲೇಶ ಕಂದಾರಿ, ಶ್ಯಾಮಲಾ ಕೋನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT