ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಬಾಬಾ ಭಾವಚಿತ್ರದ ಅದ್ಧೂರಿ ಮೆರವಣಿಗೆ

Last Updated 10 ಜುಲೈ 2017, 11:03 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ಶಿರಡಿ ಸಾಯಿ ಬಾಬಾ ಸೇವಾ ಭಕ್ತ ಮಂಡಳಿಯಿಂದ ಗುರು ಪೂರ್ಣಿಮೆ ಉತ್ಸವ ಅಂಗವಾಗಿ ಶನಿವಾರ ರಾತ್ರಿ ಸಾಯಿಬಾಬಾ ಅವರ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಶ್ರದ್ದಾ ಭಕ್ತಿಯಿಂದ ನಡೆಯಿತು.

ವಿನಾಯಕನಗರದ ಗಣೇಶ ದೇವ­ಸ್ಥಾನದಿಂದ ಪ್ರಾರಂಭವಾದ ಸಾಯಿ ಬಾಬಾ ಅವರ ಭಾವಚಿತ್ರದ ಮೆರ­ವಣಿಗೆಯು ನಗರದ ಪ್ರಮುಖ ಬೀದಿ­ಗಳಲ್ಲಿ ಸಂಚರಿಸಿ ಬಳ್ಳಾರಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಸಂಪನ್ನ­ಗೊಂಡಿತು. ಯುವಕರು ಮತ್ತು ಸುಮಂಗಲೆಯರು ದಾರಿಯುದ್ದಕ್ಕೂ ಸಾಯಿಬಾಬಾ ಅವರ ಭಕ್ತಿಗೀತೆಗೆ ಹೆಜ್ಜೆ ಹಾಕಿದರು.ನಂತರ ಪ್ರಸಾದ ವಿತರಣೆ ನಡೆಯಿತು.

ಸತೀಶ ಜಾಧವ, ಮಾಲತೇಶ ಸಿ.ವಿಭೂತಿ, ಭೋಗೇಶ ರಡ್ಡಿ, ಡಿ.ಎಂ.­ಅರುಣರೆಡ್ಡಿ, ಈರಣ್ಣ ಪುರದ, ಗುರು ಪಾಟೀಲ, ಪ್ರಸನ್ನಕುಮಾರ ಬಿಶೆಟ್ಟರ್‌, ಸೋಮೇಶ ಎನ್‌.ಕುರಡೇಕರ, ಪರುಶುರಾಮ ದಿಡಗೂರ, ಮುರಗೇಶ ಬಳಿಗಾರ, ದೇವರಾಜ ಕಿರಿಗೇರಿ, ರಾಜಣ್ಣ ಮಾಳೋದೆ, ವಾಮನ್‌ ಕಲಾಲ, ಪರಮೇಶ ಜಂಗರಮಠ,  ಬಸವರಾಜ ತಿಳವಳ್ಳಿ, ಚಿಂತಾಮಣಿ ಗುಡ್ಡದ ಇದ್ದರು.

ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜೆ: ಇಲ್ಲಿನ ವಿನಾಯಕ­ನಗರದ  ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಿರಡಿ ಸಾಯಿ ಸೇವಾ ಭಕ್ತ ಮಂಡಳಿಯಿಂದ ಸಾಯಿಬಾಬಾ ಅವರ ಗುರುಪೂರ್ಣಿಮಾ ಉತ್ಸವ ಅಂಗವಾಗಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ಕಾಕಡಾರತಿ, ಅಲಂಕಾರ ಪೂಜೆ, ಸಾಯಿ ಸತ್ಯನಾರಾಯಣ ಪೂಜೆ, ನೈವೇದ್ಯ ಮತ್ತು ಆರತಿ, ಧೂಪಾರತಿ ಮತ್ತು ನೈವೇದ್ಯ, ಶೇಜಾರತಿ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನಡೆದವು. ನಂತರ ಪ್ರಸಾದ ವಿತರಣೆ ನಡೆಯಿತು.   

‘ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ’
ರಾಣೆಬೆನ್ನೂರು:
ಇಲ್ಲಿನ ಮೇಡ್ಲೇರಿ ರಸ್ತೆಯ ಆದಿಶಕ್ತಿ ದೇವಸ್ಥಾನದ ಧ್ಯಾನ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಓಂ ಸತ್ಸಂಗದ ಆಶ್ರಯದಲ್ಲಿ ಭಾನುವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ನಿರಂತರವಾಗಿ 16 ವರ್ಷಗಳಿಂದ ಸತ್ಸಂಗದಲ್ಲಿ ಸೇವೆ ಸಲ್ಲಿಸಿದ ಕೆ.ಎನ್.ಹೊಸಂಗಡಿ, ಶಿವಣ್ಣ ಗಾಮದ, ನಿವೃತ್ತ ಶಿಕ್ಷಕಿ ಸಿ.ಎಚ್‌. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಪರಿಷತ್‌ ಗೌರವ ಅಧ್ಯಕ್ಷ ವಿ.ವೈ. ಕುಸಗೂರ ಮಾತನಾಡಿ, ‘ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಗುರು ಜೀವನದ ಕತ್ತಲೆ ದೂರ ಮಾಡಿ ಮಾನವ ಜೀವಿಗೆ ಧರ್ಮಾಧಾರಿತವಾಗಿ ಸಾಧಿಸುವ ಕಲೆಯನ್ನು ತೋರಿಸುವ ದಿವ್ಯ ಶಕ್ತಿಯಾಗಿದೆ’ ಎಂದರು.

ನಿವೃತ್ತ ಶಿಕ್ಷಕ ಸಿ.ಎಚ್‌. ಕುಲಕರ್ಣಿ ಮಾತನಾಡಿ, ‘ಸರ್ವರ ಹಿತವನ್ನು ಬಯಸುವ ಗುರುಗಳನ್ನು, ಭ್ಕತಿ, ಕೃತಜ್ಞತೆಯಿಂದ ಸ್ಮರಿಸುವ ಪೂಜಿಸುವದೇ ಗುರುಪೂರ್ಣಿಮೆ­ಯಾಗಿದೆ’ ಎಂದು ಹೇಳಿದರು.

ರಾಮಣ್ಣ ಉದಗಟ್ಟಿ, ಜಿ.ಎಸ್‌.­ಪಾಟೀಲ, ಕ್ಷೀರಸಾಗರ, ಎಸ್‌.ಎಂ. ಅರ್ಕಾಚಾರಿ, ಸುಲೋಚನಮ್ಮ ಖನ್ನೂರು, ಗಂಗಮ್ಮ ವೇರ್ಣೇಕರ, ವಜ್ರೇಶ್ವರಿ ಲದ್ವಾ, ವಾಸುದೇವ ಲದ್ವಾ, ವಿ.ಆರ್‌.ಕರೂರ, ಪರಮೇಶಪ್ಪ, ಪ್ರಕಾಶ ಗುಪ್ತಾ, ಎಸ್‌.ಎಚ್‌. ಪಾಟೀಲ ಇದ್ದರು.

ಪವಿತ್ರಾ ಪಾಟೀಲ, ದಿವ್ಯಾ ಬಿ.ಎ. ಸಂಗಡಿಗರು ಪ್ರಾರ್ಥಿಸಿದರು. ಪ್ರಭಾಕರ ಶಿಗ್ಲಿ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕಿ ರುಕ್ಮಿಣಿ ಕಳಸದ ನಿರೂಪಿಸಿದರು. ಆರ್‌.ಎನ್‌.ಅಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT