ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾಕ್ಕೆ ಒತ್ತಾಯ: ಬ್ಯಾಂಕ್‌ಗೆ ಮುತ್ತಿಗೆ

ಮಸ್ಕಿ: ಯುವ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
Last Updated 11 ಜುಲೈ 2017, 7:33 IST
ಅಕ್ಷರ ಗಾತ್ರ

ಮಸ್ಕಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾಗೆ ಮುತ್ತಿಗೆ ಹಾಕಿದರು.

ಪಟ್ಟಣದ ಶಾಸಕರ ಕಚೇರಿಯಿಂದ ಯುವ ಕಾಂಗ್ರೆಸ್‌ ಮುಖಂಡ ಪ್ರಸನ್ನ ಪಾಟೀಲ, ಯುವ ಕಾಂಗ್ರೆಸ್‌ ಅಧ್ಯಕ್ಷ ವೀರೇಶ ಕಮತರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ನೂರಾರು ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಳೆಯ ಬಸ್‌ ನಿಲ್ದಾಣ, ಅಶೋಕ ವೃತ್ತ, ಮುಖ್ಯ ಬಜಾರ, ಕನಕವೃತ್ತದ ಮೂಲಕ ಸಾಗಿದರು.

ಕಾರ್ಯಕರ್ತರು ಬ್ಯಾಂಕ್‌ನ ಒಳಗೆ ನುಗ್ಗಲು ಯತ್ನಿಸಿದಾಗ ಕೆಲ ಕಾಲ ಗೊಂದಲ ಉಂಟಾಯಿತು. ಬ್ಯಾಂಕ್‌ ಒಳ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಮುಖ್ಯ ಬಾಗಿಲ ಬಳಿಯೇ ತಡೆದರು. ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಪ್ರಸನ್ನ ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ಅಂದಾನಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಚೇತನ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ದುರಗಪ್ಪ ಗುಡಗಲದಿನ್ನಿ, ಯುವ ಕಾಂಗ್ರೆಸ್ ಸಮಿತಿ ಮಸ್ಕಿ ಕ್ಷೇತ್ರದ ಕಾರ್ಯಾಧ್ಯಕ್ಷ ಶರಣಬಸವ ತಿಡಿಗೋಳ, ಚಂದ್ರಕಾಂತ ಪಾಟೀಲ, ರಾಜನಾಯಕ, ಎಂ. ಅಮರೇಶ, ಸಿದ್ದು ಮುರಾರಿ, ಶರಣಪ್ಪ ತೋರಣದಿನ್ನಿ, ಶರಣಯ್ಯ ಸೊಪ್ಪಿಮಠ, ಶಿವರಾಜ ಗುಂಜಳ್ಳಿ, ಪ್ರತಾಪಗೌಡ ಪಾಟೀಲ ಯುವ ಸೇನಾದ ಅಧ್ಯಕ್ಷ  ವಸಂತ ಭಜಂತ್ರಿ, ಮೈಬು  ಕುಷ್ಟಗಿ. ತಿಮ್ಮಣ್ಣ ಗುಡಿಸಲಿ, ನಾಗಭೂಷಣ, ಬಾಷು ಬಳಗಾನೂರು, ಮಸೂದ್‌ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT