ಮೆಣೆದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿಕ್ಕ ತೆಮ್ಮಿನಾಳ ಗ್ರಾಮ ಬರುತ್ತದೆ. ಗ್ರಾಮದ ಹೊರ ವಲಯದಲ್ಲಿ ಮೂರು ವರ್ಷದ ಹಿಂದೆ ಸರ್ಕಾರ ಗೋಶಾಲೆ ಆರಂಭಿಸಿತ್ತು. ಆ ಸಮಯದಲ್ಲಿ ಕೊಳವೆಬಾವಿ ಕೊರೆಸ ಲಾಗಿತ್ತು. ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ತೊಟ್ಟಿ ನಿರ್ಮಿಸಲಾಗಿದೆ. ಆದರೆ, ಸದ್ಯ ಕೊಳವೆಬಾವಿ ಮತ್ತು ನೀರಿನ ತೊಟ್ಟಿ ನಿರುಪಯುಕ್ತವಾ ಗಿವೆ. ಕೊಳವೆಬಾವಿಯನ್ನು ಮುಚ್ಚಿಲ್ಲ. ಹೀಗಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.