ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಗಳ ಈಡೇರಿಕೆಗೆ ಒತ್ತಾಯ

Last Updated 11 ಜುಲೈ 2017, 11:50 IST
ಅಕ್ಷರ ಗಾತ್ರ

ಸಂಡೂರು:  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಂಡೂರು ತಾಲ್ಲೂಕು ಸಮಿತಿ ಸದಸ್ಯರು ಸೋಮವಾರ ಸಂಡೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಮೂಲಕ ಕಾರ್ಮಿಕರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘಟನೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ವಿ. ದೇವಣ್ಣ, ಕಾರ್ಯದರ್ಶಿ ಎನ್. ನಿಂಗಪ್ಪ ಮುಂತಾದವರು ಶಿರಸ್ತೇದಾರ್‌  ರುದ್ರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಕಟ್ಟಡ ಕಾರ್ಮಿಕರ ಸತತ ಹೋರಾಟದ ಫಲವಾಗಿ ರಾಜ್ಯದಲ್ಲಿ 2006ರಲ್ಲಿ ಕಲ್ಯಾಣ ಮಂಡಳಿ ರಚನೆಯಾಗಿದ್ದು, ಮಂಡಳಿಯಿಂದ 12 ಸೌಲಭ್ಯಗಳು ಸಿಗುವಂತಾಗಿವೆ.

ಆದರೆ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ  ಕೊರತೆಯಿಂದ  ಕಲ್ಯಾಣ ಮಂಡಳಿಯ ಸೌಲಭ್ಯಗಳು ಸರಿಯಾಗಿ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಸಕಾಲಕ್ಕೆ ಮರಳು ಸಿಗದಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಹೊಸ ಮರಳು ನೀತಿ ಜಾರಿ ಮಾಡ ಬೇಕು. ಕಟ್ಟಡ ನಿರ್ಮಾಣದ ಸಾಮಾಗ್ರಿ ಗಳ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಬೇಕು. ಎಲ್ಲಾ ಕಟ್ಟಡ ಕಾರ್ಮಿ ಕರಿಗೆ ನಿವೇಶನ, ವಸತಿ ನೀಡಬೇಕು’ ಎನ್ನುವ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ತಾಲ್ಲೂಕು ಸಮಿತಿಯ ಖಜಾಂಚಿ ಜಿ. ಬಸವರಾಜ, ಮುಖಂಡರಾದ ಕೆ. ಸಿದ್ದಪ್ಪ, ಎ. ಸ್ವಾಮಿ, ಯು. ವೀರಭದ್ರಪ್ಪ, ಯರಿಸ್ವಾಮಿ, ವಿ. ಬಾಬಯ್ಯ, ಖಾಜಾವಲಿ, ಎಸ್. ಕಾಲುಬಾ, ನಾಗಪ್ಪ, ಕಾರ್ತಿಕ, ಬಾಬಾ ಬುಡೇನ್‌ಸಾಬ್, ನಾಗರತ್ನ, ಶಾಂತಮ್ಮ, ಉಮಾಕ್ಕ, ಹುಲಿಗೆಮ್ಮ, ಎನ್. ವೆಂಕಟೇಶ್‌, ಪರಶುರಾಮ ಪ್ರತಿಭಟನೆಯನ್ನು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT