ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು ಎಂಟು ಎತ್ತರ 6.6 ಅಡಿ!

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಎಂಟು ವರ್ಷದ ಮಕ್ಕಳು ಅಬ್ಬಬ್ಬಾ ಅಂದರೆ ಎರಡೂವರೆಯಿಂದ ಮೂರು ಅಡಿ ಎತ್ತರವಿದ್ದಾರು. ಆದರೆ ಮೀರತ್‌ನ ನಿವಾಸಿ ಕರಣ್‌ ಸಿಂಗ್‌ ಬರೋಬ್ಬರಿ 6.6 ಅಡಿ ಎತ್ತರ ಬೆಳೆದುಬಿಟ್ಟಿದ್ದಾನೆ. ಇದೇ ಕಾರಣಕ್ಕೆಅವನ ಹೆಸರು ಎರಡನೇ ಬಾರಿಗೆ ಗಿನ್ನಿಸ್‌ ದಾಖಲೆ ಪುಸ್ತಕ ಸೇರಿದೆ.

ಹುಟ್ಟುವಾಗಲೇ 63 ಸೆಂ.ಮೀ. ಉದ್ದ ಮತ್ತು ಏಳೂಮುಕ್ಕಾಲು ಕೆ.ಜಿ ತೂಕವಿದ್ದ ಕಾರಣಕ್ಕೆ ಕರಣ್‌ ಮೊದಲ ಬಾರಿಗೆ ಗಿನ್ನಿಸ್‌ ಪುಸ್ತಕದಲ್ಲಿ ಸ್ಥಾನ ಪಡೆದಿದ್ದ. ಈಗ ಜಗತ್ತಿನ ಅತಿ ಎತ್ತರದ ಬಾಲಕ ಎಂಬ ಹೆಗ್ಗಳಿಕೆ, ದಾಖಲೆ ಈತನದ್ದು.

ಕರಣ್‌ಗೆ ಈ ವಿಶಿಷ್ಟ ಬೆಳವಣಿಗೆ ರಕ್ತಗತವಾಗಿ ಬಂದ ಬಳುವಳಿ. ಯಾಕೆಂದರೆ ಈತನ ತಾಯಿ ಶ್ವೇತಾಲನ 7.2 ಅಡಿ ಎತ್ತರವಿದ್ದಾರೆ. ಅಷ್ಟೇ ಅಲ್ಲ, ಭಾರತದ ಅತಿ ಎತ್ತರದ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಷ್ಟೆತ್ತರ ಇರುವ ಶ್ವೇತಾಲನ ಬಾಸ್ಕೆಟ್‌ಬಾಲ್‌ನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಅವನ ತಂದೆಯೂ 6.7 ಅಡಿ ಇದ್ದಾರೆ. ಕರಣ್‌ ಸಿಂಗ್ ಮೂರು ವರ್ಷದವನಿದ್ದಾಗ 10 ವರ್ಷದ ಮಕ್ಕಳ ಉಡುಗೆ ತೊಡುಗೆಗಳನ್ನು ಧರಿಸುತ್ತಿದ್ದನಂತೆ.

ಕರಣ್‌ ಎತ್ತರ ಏರುತ್ತಲೇ ಹೋಗುತ್ತಿದೆ. ಹಾಗಂತ ಇದರಿಂದ ಅವನಿಗೆ ಸ್ವಲ್ಪವೂ ಮುಜುಗರವಾಗುತ್ತಿಲ್ಲವಂತೆ. ಮುಂದೆ, ಬಾಸ್ಕೆಟ್ ಬಾಲ್ ಪಟು ಅಥವಾ ವೈದ್ಯನಾಗುವ ಗುರಿಯನ್ನು ಹೊಂದಿದ್ದಾನೆ ಈ‘ಎತ್ತರದ ಹುಡುಗ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT