ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಪಿ.ಎಂ.ಸಿ; ಇ– ಪೇಮೆಂಟ್ ವ್ಯವಸ್ಥೆ ಜಾರಿ ಸಲ್ಲ: ವರ್ತಕರ ಆಗ್ರಹ

Last Updated 12 ಜುಲೈ 2017, 5:41 IST
ಅಕ್ಷರ ಗಾತ್ರ

ಮುಂಡರಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇ– ಪೇಮೆಂಟ್ ಜಾರಿ ಗೊಳಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದ ಎ.ಪಿ.ಎಂ.ಸಿ. ವರ್ತ ಕರ ಸಂಘದ ಕಾರ್ಯಕರ್ತರು ಮಂಗಳ ವಾರ ಎ.ಪಿ.ಎಂ.ಸಿ. ಕಾರ್ಯದರ್ಶಿ ಅವ ರಿಗೆ ಮನವಿ ಸಲ್ಲಿಸಿದರು.

ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ ಮಾತನಾಡಿ, ರಾಜ್ಯದಾ ದ್ಯಂತ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗದಿರುವ ಇ– ಪೇಮೆಂಟ್ ಕಾಯ್ದೆಯನ್ನು ಕೇವಲ ಗದಗ ಜಿಲ್ಲೆಗೆ ಮಾತ್ರ ಸಿಮೀತಗೊಳಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಇ- ಪೇಮೆಂಟ್ ಪದ್ಧತಿ ಯನ್ನು ಕೈಬಿಡಬೇಕು. ಇಲ್ಲದಿದ್ದರೆ ಎಲ್ಲ ಎ.ಪಿ.ಎಂ.ಸಿ. ವರ್ತಕರು ಅನಿರ್ಧಿಷ್ಟಾವಧಿ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವರ್ತಕ ಪವನ ಚೋಪ್ರಾ ಮಾತ ನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಗೆ ತಾಲ್ಲೂಕಿನ ವಿವಿಧ ಭಾಗಗಳಿಂದ ಕೇವಲ ಶೇ 25ರಷ್ಟು ಮಾತ್ರ ಕಾಳು ಕಡಿಗಳು ಬರುತ್ತವೆ. ಶೇ 75ರಷ್ಟು ಕಾಳು ಕಡಿಗಳು ಪಕ್ಕದ ಹೂವಿನಹಡಗಲಿ, ಹರಪ್ಪನಹಳ್ಳಿ, ಕೊಟ್ಟೂರ, ಹಾಗೂ ಬಳ್ಳಾರಿ ಭಾಗದಿಂದ ಬರುತ್ತದೆ. ಇ–ಪೇಮೆಂಟ್ ವ್ಯತ್ಯಾಸ ದಿಂದಾಗಿ ಸ್ಥಳೀಯ ಮಾರುಕಟ್ಟೆಗೆ ಬರ ಬೇಕಾದ ಉತ್ಪನ್ನ ಬರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಎ.ಪಿ.ಎಂ.ಸಿ. ಕಾರ್ಯದರ್ಶಿ ಜಿ.ಎ. ಬುರಡಿ ಮಾತನಾಡಿ, ಇ– ಪೇಮೆಂಟ್ ಜಾರಿಯಾದರೆ ರೈತರಿಗೆ ಅನುಕೂಲವಾ ಗುತ್ತದೆ. ಆದ್ದರಿಂದ ವರ್ತಕರು ಇ ಪೇಮೆಮಟ್‌ಗೆ ಸಹಕರಿಸುವುದು ಅಗತ್ಯ. ವರ್ತಕರು ಸಲ್ಲಿಸಿರುವ ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗು ವುದು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವರ್ತಕರ ಪ್ರತಿನಿಧಿ ಕೊಟ್ರೇಶಪ್ಪ ಅಂಗಡಿ, ಎ.ಪಿ.ಎಂ.ಸಿ. ವರ್ತಕರ ಉಪಾ ಧ್ಯಕ್ಷ ಗೌತಮಚಂದ್ ಚೋಪ್ರಾ, ರಾಮಸ್ವಾಮಿ ಹೆಗಡಾಳ, ಮುದುಕೇಶ ಬೀಡನಾಳ, ಶ್ರೀನಾಥ ಹೆಗಡಾಳ, ಸಂತೋಷ ಶಿವಶೆಟ್ಟರ್, ಭರಮಣ್ಣ ನಾಡ ಗೌಡ್ರ, ಮುದಕಣ್ಣ ಬೆಟಗೇರಿ, ಪ್ರಶಾಂತ ತಾವರಗೇರಿ, ವೀರೇಶ ಗೋಡಿ, ಹಮ್ಮಿರ ಮುಲ್ಲಾ, ಗೌತಮ್ ಮೆಹತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT