ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರಿಗೆ ಉಜ್ವಲ ಯೋಜನೆ ತಲುಪಲಿ’

Last Updated 12 ಜುಲೈ 2017, 5:50 IST
ಅಕ್ಷರ ಗಾತ್ರ

ಸಿಂಧನೂರು: ಪ್ರಧಾನಮಂತ್ರಿ ಅವರ ಉಜ್ವಲ ಯೋಜನೆಯ ಸದುಪಯೋಗ ಅರ್ಹ ಫಲಾನುಭವಿಗಳಿಗೆ ತಲುಪಲಿ’ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸತ್ಯಗಾರ್ಡನ್‌ನಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್ ಮತ್ತು ಒಲೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊಪ್ಪಳ ಸಂಸದರಾದ ನಂತರ ₹ 3,500 ಕೋಟಿ ವೆಚ್ಚದ ಹೊಸಪೇಟೆ-–ಚಿತ್ರದುರ್ಗ ಚತುಷ್ಪಥ ಸಿಮೆಂಟ್ ರಸ್ತೆ, ₹ 6.5 ಕೋಟಿಯಲ್ಲಿ ಕೊಪ್ಪಳದಲ್ಲಿ ಅಂಡರ್ ಪಾಸಿಂಗ್, ಓವರ್ ಬ್ರಿಜ್ ನಿರ್ಮಾಣ, ₹ 74 ಕೋಟಿಯಲ್ಲಿ ಸಿಂಧನೂರಿನ ಗಾಂಧಿ ವೃತ್ತದಿಂದ ಪಿಡಬ್ಲ್ಯೂಡಿ ಕ್ಯಾಂಪಿನವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ, ಕೊಪ್ಪಳದಲ್ಲಿ ಇಎಸ್ಐ ಫೌಂಡೇಶನ್‌ನಿಂದ 100 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ, ಗಂಗಾವತಿಯಲ್ಲಿ ಕೇಂದ್ರೀಯ ವಿದ್ಯಾಲಯ, ₹64 ಕೋಟಿಯಲ್ಲಿ ಕುಷ್ಟಗಿಯಲ್ಲಿ ಪ್ಲೈ ಓವರ್, ಎಂ.ಎಚ್. 367 ಯೋಜನೆಯಡಿ ₹ 78 ಕೋಟಿ ರಸ್ತೆಗೆ, ₹28 ಕೋಟಿ ಸೇತುವೆ ನಿರ್ಮಾಣಕ್ಕೆ ಹೀಗೆ ಒಟ್ಟು ₹ 450 ಕೋಟಿಗಳನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದಿಂದ ಮಂಜೂರು ಮಾಡಿಸಲಾಗಿದೆ’ ಎಂದರು.

2019ರ ವೇಳೆಗೆ ಮುನಿರಾಬಾದ್‌ನಿಂದ ಮಹಿಬೂಬ್‌ ನಗರದವರೆಗೆ ರೈಲು ಓಡಾಡುವಂತೆ ಮಾಡಲು ಕಾಮಗಾರಿ ಚುರುಕುಗೊಳಿಸಲಾಗಿದೆ ಎಂದು ಸಂಗಣ್ಣ ಕರಡಿ ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀರಲಕ್ಷ್ಮಿ ಆದಿಮನಿ, ಸಿಂಧನೂರು ವಿಧಾನಸಭಾ ಕ್ಷೇತ್ರದ ವಿಸ್ತಾರಕ ಎಂ.ಎಸ್.ಕರೇಗೌಡ ಮಾತನಾಡಿದರು.

ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಸೋಮಲಿಂಗಪ್ಪ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ನಗರ ಘಟಕದ ಅಧ್ಯಕ್ಷ ಅಡಿವೆಪ್ಪ ಹೋತೂರು, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮೇಶ ಸಾಲಗುಂದಾ, ನಗರಸಭೆ ಸದಸ್ಯ ಲಿಂಗರಾಜ್ ಹೂಗಾರ, ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ರಾಜಶೇಖರ ಪಾಟೀಲ್, ಬಸಪ್ಪ ಕಲ್ಲೂರು, ಆರ್.ಬಸನಗೌಡ ತುರ್ವಿಹಾಳ, ಮಹಾದೇವಪ್ಪಗೌಡ, ಎಂ.ದೊಡ್ಡಬಸವರಾಜ, ದೇವೇಂದ್ರಪ್ಪ ಯಾಪಲಪರ್ವಿ, ರಾಮಚಂದ್ರರಾವ್, ಗುಡದೂರು ತಿಮ್ಮನಗೌಡ, ಶಾಂತಮೂರ್ತಿ, ಮಮತಾ ಹಿರೇಮಠ, ಐಒಸಿ ಅಧಿಕಾರಿ ದಿನೇಶ್, ಡೀಲರ್‌ಗಳಾದ ವೀರೇಶ ನಟೇಕಲ್, ಬಾಬುಗೌಡ, ಕರೇಗೌಡ, ವೀರಭದ್ರಪ್ಪ ಕುರಕುಂದಿ ಇದ್ದರು.

* * 

ರಾಜ್ಯದಲ್ಲಿ 36 ಲಕ್ಷ ಹಾಗೂ ಸಿಂಧನೂರು ತಾಲ್ಲೂಕಿನಲ್ಲಿ 26,170 ಫಲಾನುಭವಿಗಳು ಉಜ್ವಲ ಯೋಜನೆಯ ಲಾಭ ಪಡೆಯಲಿದ್ದಾರೆ
ಸಂಗಣ್ಣ ಕರಡಿ
ಸಂಸದ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT